ಕೊರೋನಾ ಭೀತಿ ಮತ್ತು ಹಕ್ಕಿಜ್ವರ ಹಿನ್ನೆಲೆ: ಬಾವಲಿ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ…

ಮೈಸೂರು,ಮಾ,18,2020(www.justkannada.in): ರಾಜ್ಯದಲ್ಲಿ ಕೊರೋನಾ ಭೀತಿ ಮತ್ತು ಮೈಸೂರಿನಲ್ಲಿ ಹಕ್ಕಿ ಜ್ವರ ಕಂಡು ಬಂದ ಹಿನ್ನೆಲೆ ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ಬಾವಲಿ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಇಂದು ಹೆಚ್.ಡಿ.ಕೋಟೆ ತಾಲ್ಲೂಕಿನ ಗಡಿ ಭಾಗದಲ್ಲಿರುವ  ಬಾವಲಿ ಗ್ರಾಮಕ್ಕೆ ಆರೋಗ್ಯ ಇಲಾಖೆ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿ ಡಾ ರವಿಕುಮಾರ್ ಮತ್ತು ತಂಡ,   ತಾಲ್ಲೂಕು ನೋಡಲ್ ಅಧಿಕಾರಿಗಳು ಡಾ ಉಮೇಶ್ ರವರು, ಪಶು ಸಂಗೋಪನಾ ಇಲಾಖೆಯ ಡಾ ಮಹೇಶ್  ಪರಿಶೀಲಿಸಿದರು. ಈ ವೇಳೆ ಕೊರೋನ ಮತ್ತು ಹಕ್ಕಿ ಜ್ವರ  ನಿಯಂತ್ರಣ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ನಂತರ ಇದೇ ಅಧಿಕಾರಿಗಳ ತಂಡ ಕೇರಳ ಭಾಗಕ್ಕೆ ಭೇಟಿ  ನೀಡಿ ಆ ರಾಜ್ಯದ ಆರೋಗ್ಯ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆ ವತಿಯಿಂದ ಕೊರೋನ ಹಾಗೂ ಹಕ್ಕಿ ಜ್ವರ ನಿಯಂತ್ರಣ ಕ್ರಮಗಳನ್ನು, ಕೈಗೊಳ್ಳುತ್ತಿರುವುದನ್ನು ವೀಕ್ಷಿಸಿ ವಿಚಾರ ವಿನಿಮಯ ಮಾಡಿಕೊಂಡರು.

Key words: mysore- HD kote- officer team- visit- village -Corona