ಡಿವೈಎಸ್ಪಿಗೆ ಆಯ್ಕೆಗೊಂಡಿರುವ ಮೈಸೂರಿನ ಅನುಷಾ ರಾಣಿಗೆ ಐಎಎಸ್ ಮಾಡುವಾಸೆ.

 

ಮೈಸೂರು,ಡಿ.24, 2019 ; ( www.justkannada.in news ) ಮೈಸೂರು ವಿವಿಯ ಹಿಂದಿನ ಕುಲಸಚಿವ ಪ್ರೊ.ಆರ್.ರಾಜಣ್ಣ ಹಾಗೂ ಪಿ.ಆರ್.ಸುಜಾತಾ ದಂಪತಿಯ ಪುತ್ರಿ ಅನುಷಾ ರಾಣಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಡಿವೈಎಸ್ಪಿಯಾಗಿ ಆಯ್ಕೆಗೊಂಡಿದ್ದಾರೆ.

ಮೈಸೂರಿನ ವಿಜಯನಗರದಲ್ಲಿ ನಿವಾಸಿಯಾವಿರುವ ಅನುಷಾ, ಪ್ರಸ್ತುತ ಬೆಂಗಳೂರಿನಲ್ಲಿ ಕಮರ್ಶಿಯಲ್ ಟ್ಯಾಕ್ಸ್ ಇನ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

೨೦೧೪ ರಲ್ಲೇ ಕೆಎಎಸ್ ಪರೀಕ್ಷೆ ಬರೆದಿದ್ದ ಅನುಷಾ, ಪ್ರಿಲಿಮಿನರಿ ಹಂತದಲ್ಲಿ ಉತ್ತೀರ್ಣರಾದರಾದರು ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲಾಗಲಿಲ್ಲ. ಬಳಿಕ, ಹೆಚ್ಚಿನ ತರಬೇತಿ ಪಡೆದು ಪರೀಕ್ಷೆ ಎದುರಿಸಿದರು. ಈ ನಡುವೆಯೇ
ಎಸ್‌ಡಿಐ, ಎಫ್‌ಡಿಐ ಹಾಗೂ ಪಿಟಿಐ ಪರೀಕ್ಷೆಗಳನ್ನು ಹಂತಹಂತವಾಗಿ ಎದುರಿಸಿದ ಅನುಷಾ, ಸಾಕಷ್ಟು ತಾಳ್ಮೆ ಕಾಯ್ದುಕೊಂಡು ತರಬೇತಿ ನಡೆಸಿದರು. ಪರಿಣಾಮ ಇಂದಿನ ಯಶಸ್ಸಿಗೆ ಕಾರಣವಾಯಿತು ಎಂದು ಅನುಷಾ ರಾಣಿ
ಸಂತಸ ವ್ಯಕ್ತಪಡಿಸಿದರು.

ಪೋಷಕರ ಸಹಕಾರ :
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ಪೋಷಕರು ನನಗೆ ಅತ್ಯುತ್ತಮ ಸಹಕಾರ ನೀಡಿದರು. ‌ಮನೆಯ ಸಮಸ್ಯೆಗಳೇನೇ ಇದ್ದರೂ ನಾನು ಮಾನಸಿಕವಾಗಿ ವಿಚಲಿತಗೊಳ್ಳದಂತೆ ಎಚ್ಚರ ವಹಿಸಿದರು. ಜತೆಗೆ ಸಲಹೆ ಸೂಚನೆ ನೀಡುತ್ತಿದ್ದರು. ಇದರಿಂದ ಪರೀಕ್ಷೆ ಪೂರ್ವತಯಾರಿ ಮಾಡಿಕೊಳ್ಳುವುದರಲ್ಲಿ ಯಾವುದೇ ಒತ್ತಡ ಉಂಟಾಗಲಿಲ್ಲ ಎಂದು ಹೇಳುವ ಮೂಲಕ ಅನುಷಾ ರಾಣಿ, ಪೋಷಕರ ಸಹಕಾರವನ್ನು ಸ್ಮರಿಸಿಕೊಂಡರು.
ಇಷ್ಟಕ್ಕೆ ತೃಪ್ತರಾಗದ ಅನುಷಾ ರಾಣಿ ಐಎಎಸ್ ಅಧಿಕಾರಿಯಾಗುವ ಮುಂದಿನ ಗುರಿ ಹೊಂದಿದ್ದಾರೆ. ಇದಕ್ಕಾಗಿ ಮತ್ತೆ ಅಧ್ಯಯನ, ತರಬೇತಿ ಮುಂದುವರೆಸುವ ಇಚ್ಛೆ ಹೊಂದಿದ್ದು, ಪೋಷಕರ ಸಹಕಾರ, ಬೆಂಬಲವು ಇದೆ ಎಂದು ಸಂತಸ ವ್ಯಕ್ತಪಡಿಸಿದರು.

key words : mysore-girl-anusha.rani- passed-kas-exams-selected-to-Dy.SP

Mysuru’s bright young woman commercial tax inspector gets Dy.SP post.