MYSORE GANG RAPE : ಕೋರ್ಟ್ ಗೆ ಖುದ್ದು ಹಾಜರಾಗಿ ಹೇಳಿಕೆ ದಾಖಲಿಸಿದ ಸಂತ್ರಸ್ಥೆ

 

ಮೈಸೂರು, ಸೆ.22, 2021 : (www.justkannada.in news) : ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ , ಸಂತ್ರಸ್ತೆ ಕೋರ್ಟ್ ಗೆ ಹಾಜರಾಗಿ ಖುದ್ದು ಹೇಳಿಕೆ ನೀಡಿದ್ದಾಳೆ ಎಂದು ತಿಳಿದು ಬಂದಿದೆ.

ಮೈಸೂರಿನ ಮೂರನೇ ಜೆಎಂಎಫ್‌ಸಿ ಕೋರ್ಟ್‌ನಲ್ಲಿ 164 ಸಿಆರ್ಪಿಸಿ ಅನ್ವಯ, ಜಡ್ಜ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆ. ನ್ಯಾಯಮೂರ್ತಿ, ತನಿಖಾಧಿಕಾರಿ ಹಾಗೂ ಟೈಪಿಸ್ಟ್ ಸಮ್ಮುಖದಲ್ಲಿ ಹೇಳಿಕೆ ದಾಖಲು. ಮುಚ್ಚಿದ ಲಕೋಟೆಯಲ್ಲಿ ಹೇಳಿಕೆ ಭದ್ರಪಡಿಸಿದ ಕೋರ್ಟ್. ಬಲ್ಲ ಮೂಲಗಳಿಂದ ಮಾಹಿತಿ.

ಘಟನೆ ನಡೆದ 28 ದಿನಗಳ ನಂತರ ಹೇಳಿಕೆ ದಾಖಲಿಸಿರುವ ಸಂತ್ರಸ್ತೆ. ಆಗಸ್ಟ್ 24ರ ಸಂಜೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಘಟನೆ ಬಗ್ಗೆ ಸಂಪೂರ್ಣ ಹೇಳಿಕೆ. ಘಟನೆ ಬಳಿಕ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ, ಯುವತಿ ಹಾಗೂ ಪೋಷಕರು ಮೈಸೂರು ತೊರೆದಿದ್ದರು. ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಇದರಿಂದ ಪೊಲೀಸರಿಗೆ ಪ್ರಕರಣದ ವಿಚಾರಣೆ ಸವಾಲಿನ ಕೆಲಸವೇ ಆಗಿತ್ತು.

ಆದರೂ, ಪೊಲೀಸರು ಘಟನಾ ಸ್ಥಳದಲ್ಲಿ ಲಭಿಸಿದ ಸಾಕ್ಯಗಳನ್ನು ಆಧಾರಿಸಿ ಆರೋಪಿಗಳನ್ನು ಬೆನ್ನತ್ತಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಸಂತ್ರಸ್ಥ ಯುವತಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಕಡೆಗೂ ಮೈಸೂರು ಪೊಲೀಸರ ಶ್ರಮ ವ್ಯರ್ಥವಾಗಲಿಲ್ಲ. ಸಂತ್ರಸ್ಥೆ ಹಾಗೂ ಪೋಷಕರ ಮನವೊಲಿಸಿ ಖುದ್ದು ಕೋರ್ಟ್ ಗೆ ಹಾಜರಾಗಿ ಹೇಳಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದನದಲ್ಲೂ ಸದ್ದು :

ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣ ಇಂದು ವಿಧಾನಸಭೆ ಅಧಿವೇಶನದಲ್ಲೂ ಸದ್ದು ಮಾಡಿತು. ಪ್ರತಿಪಕ್ಷಗಳು ಸರಕಾರದ ನಡೆ ವಿರುದ್ಧ ಸಂಶಯ ವ್ಯಕ್ತಪಡಿಸಿ, ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದವು. ವಿಶೇಷವೆಂದ್ರೆ ಇಂದೇ, ಸಂತ್ರಸ್ಥೆ ಮೈಸೂರು ಕೋರ್ಟ್ ಗೆ ಖುದ್ದು ಹಾಜರಾಗಿ ಹೇಳಿಕೆ ದಾಖಲಿಸಿರುವುದು ಕಾಕತಾಳೀಯ.

key words : mysore-police-gang-rape-court-statement-student