ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಚಾಲಕರಿಗಾಗಿ ಉಚಿತ ಸಹಾಯ ಕೇಂದ್ರ ಆರಂಭ…

ಮೈಸೂರು,ಮೇ,27,2021(www.justkannada.in): ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ 3000 ರೂ. ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಚಾಲಕರ ಅನುಕೂಲಕ್ಕಾಗಿ ಉಚಿತ ಸಹಾಯ ಕೇಂದ್ರವನ್ನು ಬಿಜೆಪಿ ಯುವಮೋರ್ಚಾ ಉಪಾದ್ಯಕ್ಷ ಕೆ.ಎಂ. ನಿಶಾಂತ್  ನೇತೃತ್ವದಲ್ಲಿ ಪ್ರಾರಂಭಿಸಲಾಯಿತು.jk

ನಗರದ ರಾಮಾನುಜಾ  ರಸ್ತೆಯಲ್ಲಿರುವ ಬೆಳಕು ಚಾರಿಟೆಬಲ್ ಟ್ರಸ್ಟ್ ನ ಜನಸೇವಾಕೇಂದ್ರದಲ್ಲಿ ಮೊದಲ ದಿನವೇ 30ಕ್ಕೂ ಹೆಚ್ಚು ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಿ ಅದರ ಸ್ವೀಕೃತಿ ಪತ್ರವನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಕೆ.ಎಂ. ನಿಶಾಂತ್ , ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಸೋಂಕು ಹೆಚ್ಚುತ್ತಿದೆ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಚಾಲಕ ವರ್ಗದವರ ಅರ್ಥಿಕ ಸುಧಾರಣೆಗಾಗಿ ಸರ್ಕಾರ 3000 ರೂ. ಸಹಾಯ ಧನ ಘೋಶಿಸಿದೆ. ಅದನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ ಕಲ್ಪಿಸಿಕೊಟ್ಟಿದೆ.

ಆದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಚಾಲಕರಿಗೆ ಸಮಸ್ಯೆ ಆಗುತ್ತಿರುವುದರಿಂದ ಚಾಲಕರ ಅನುಕೂಲಕ್ಕಾಗಿ ಮತ್ತು ಈಗಾಗಲೇ ಅರ್ಥಿಕ ಸಂಕಷ್ಟದಲ್ಲಿರುವ ಚಾಲಕರಿಗೆ ಅರ್ಜಿ ಸಲ್ಲಿಸಲು ಹಣ ಕೊಡಬೇಕೆಂದರೆ ಮತ್ತಷ್ಟು ಸಂಕಷ್ಟಕ್ಕೀಡಾಗಬಹುದೆಂದು ಉಚಿತ ಸಹಾಯ ಕೇಂದ್ರವನ್ನು ಪ್ರಾರಂಭಿಸಿದ್ದೇವೆ. ಮುಂದಿನ 1 ತಿಂಗಳುಗಳ ಕಾಲ ನಮ್ಮ ಸಹಾಯಕೇಂದ್ರ ಮೈಸೂರು ನಗರದ ಎಲ್ಲ ಫಲಾನುಭವಿಗಳಿಗಾಗಿ ಉಚಿತವಾಗಿ ಕಾರ್ಯನಿರ್ವಹಿಸಲಿದ್ದು ಮೊದಲ ದಿನವೇ 30 ಕ್ಕೂ ಹೆಚ್ಚು ಚಾಲಕರು ಇದರ ಉಪಯೋಗ ಪಡೆದಿದ್ದಾರೆ ಎಂದರು.

ಅರ್ಜಿ  ಸಲ್ಲಿಸಲು ಚಾಲಕರು ಆಧಾರ್ ಕಾರ್ಡ್, ಡಿ.ಎಲ್. ಆರ್.ಸಿ. ಕಾರ್ಡ್. ಮತ್ತು ಬ್ಯಾಂಕ್ ಪಾಸ್ ಬುಕ್ ಅನ್ನು ಹೊಂದಿರಬೇಕು. ಚಾಲಕರೊಂದಿಗೆ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು, ಟೈಲರ್ ಗಳು, ಮ್ಯಾಕಾನಿಕ್ ಗಳು, ಮನೆ ಕೆಲಸದವರು, ಕ್ಷೌರಿಕರು, ಅಗಸರು ಮತ್ತು ಇನ್ನುಳಿದ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಸಹಾಯಧನವನ್ನು ಘೋಷಿಸಿದ್ದು ಕೆಲವೇ ದಿನಗಳಲ್ಲಿ ಅದರ ಅರ್ಜಿ ಸಲ್ಲಿಕೆಯೂ ಪ್ರಾರಂಭವಾಗಲಿದೆ.

ಫಲಾನುಭವಿಗಳು ಸೂಕ್ತ ಧಾಖಲೆಗಳೊಂದಿಗೆ ರಾಮಾನುಜಾ ರಸ್ತೆಯಲ್ಲಿರುವ ನಮ್ಮ ಜನಸೇವಾ ಕೇಂದ್ರಕ್ಕೆ ಬಂದು ಉಚಿತವಾಗಿ ಅರ್ಜಿಸಲ್ಲಿಸ ಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಟೋ ಮಾಲೀಕರ ಸಂಘದ ಅದ್ಯಕ್ಷ ನಂಜುಂಡಸ್ವಾಮಿ, ಶಾಮ, ಎಂ.ಎನ್. ಧನುಷ್, ವೇಣು, ಮಂಜು, ಬಾಬು,  ಪಣೀಶ್, ಮತ್ತು ಚಾಲಕರು ಉಪಸ್ಥಿತರಿದ್ದರು.

Key words: mysore- Free Help Center – Drivers – Apply – compensation