ಆರ್ ಎಸ್ ಎಸ್ ರಾಷ್ಟ್ರೀಯ ಸುಳ್ಳುಗಾರಾರ ಶಾಲೆ: ಬಿ.ಎಲ್ ಸಂತೋಷ್ ಮತ್ತು ಪ್ರಧಾನಿ ಮೋದಿ ವಿರುದ್ದ ಧೃವನಾರಾಯಣ್ ವಾಗ್ದಾಳಿ…

ಮೈಸೂರು,ಜು,10,2020(www.justkannada.in): ಕೊಟ್ಟ ಕುದುರೆ ಏರಲು ಆಗದವರು ಮೋದಿ ಹೊರೆತು ಕಾಂಗ್ರೆಸ್ ಅಲ್ಲ. ನಾನು ಆರ್‌ ಎಸ್‌ ಎಸ್ ಅನ್ನ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಎಂದುಕೊಂಡಿದ್ದೆ. ಆದ್ರೆ ಅದು ಸುಳ್ಳುಗಾರರನ್ನ ಸೃಷ್ಟಿಸುವ ಶಾಖೆ ಅಂತ ಗೊತ್ತಿರಲಿಲ್ಲ. ಆರ್ ಎಸ್ ಎಸ್ ರಾಷ್ಟ್ರೀಯ ಸುಳ್ಳುಗಾರಾರ ಶಾಲೆ ಆಗಿದೆ ಎಂದು ಮಾಜಿ ಸಂಸದ ಧೃವನಾರಾಯಣ್ ಕಿಡಿಕಾರಿದರು.jk-logo-justkannada-logo

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಧೃವನಾರಾಯಣ್,  ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾಷಣ ವಿಚಾರ ಕುರಿತು ಆಕ್ರೋಶ ಹೊರ ಹಾಕಿದರು. ಕೊಟ್ಟ ಕುದುರೆ ಏರದವನು ವೀರನು ಅಲ್ಲ ಶೂರನು ಅಲ್ಲ ಎಂಬ ಹೇಳಿಕೆಯ ಖಂಡಿಸಿದ ಧೃವನಾರಾಯಣ್,  ಕೊಟ್ಟ ಕುದುರೆ ಏರದವರು ಕಾಂಗ್ರೆಸ್‌ನವರಲ್ಲ ಅದು ಬಿಜೆಪಿಯವರು. ಕಾಂಗ್ರೆಸ್ ಕುದುರೆಗಳನ್ನ ಖರೀದಿ ಮಾಡಿದವರು ಬಿಜೆಪಿಯವರು. ಮೋದಿಗೆ ಈ ಮಾತು ಅನ್ವಯ ಆಗುತ್ತೆ ಎಂದು ಟಾಂಗ್ ನೀಡಿದರು.

ಕೊಟ್ಟ ಕುದುರೆ ಏರಲು ಆಗದವರು ಮೋದಿ ಹೊರೆತು ಕಾಂಗ್ರೆಸ್ ಅಲ್ಲ…

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಿತಿ ಹೀನಾಯವಾಗಿದೆ. 117 ದೇಶಗಳಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಪಾಕಿಸ್ತಾನ, ನೇಪಾಳ, ಬುರ್ಕಿನಾ ಫಾಸೋ ದೇಶಗಳೆ ನಮಗಿಂತ ಉತ್ತಮ ಸ್ಥಿತಿಯಲ್ಲಿದೆ. ಇದಕ್ಕೆ ಮೋದಿ ತೆಗೆದುಕೊಂಡ ನಿರ್ಧಾರಗಳೆ ಕಾರಣ. 5 ವರ್ಷಕ್ಕಿಂತ ಕಡಿಮೆ‌ ವಯಸ್ಸಿನ ಅಪೌಷ್ಟಿಕತೆ ಕಾಡುತ್ತಿದೆ. ಮಕ್ಕಳ ಹಸಿವು ನೀಗಿಸಲು ಮೋದಿ ಕೈಯಲ್ಲಿ ಆಗಲಿಲ್ಲ. ಹಸಿವು ನಿಗಿಸುವಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಭಾರತದ ಸ್ಥಾನ 55ಕ್ಕೆ ಇಳಿದಿತ್ತು. ಕೊಟ್ಟ ಕುದುರೆ ಏರಲು ಆಗದವರು ಮೋದಿ ಹೊರೆತು ಕಾಂಗ್ರೆಸ್ ಅಲ್ಲ ಎಂದು ಧೃವನಾರಾಯಣ್ ಟೀಕಿಸಿದರು.mysore-former-mp-dhruvanarayan-against-bl-santosh-prime-minister-modi

ಇದೇ ವೇಳೆ ಆರ್ ಎಸ್ ಎಸ್ ವಿರುದ್ದ ಹರಿಹಾಯ್ದ ಧೃವನಾರಾಯಣ್, ಆರ್ ಎಸ್ ಎಸ್ ನ ಬಿ.ಎಲ್. ಸಂತೋಷ್ ಮೊನ್ನೆ ಏಕಪಾತ್ರ ಅಭಿನಯದ ರೀತಿ ಮಾತಾಡಿದ್ದಾರೆ. ಅದು ಜನರ ಜೊತೆ ಮಾಡಿರುವುದು ಸಂವಾದವಲ್ಲ. ಅವರು ನಡೆಸಿರುವುದು ಏಕಪಾತ್ರಭಿನಯ ಅಷ್ಟೇ. ನಾನು ಆರ್‌ಎಸ್‌ಎಸ್ ಅನ್ನ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಎಂದುಕೊಂಡಿದ್ದೆ. ಆದ್ರೆ ಅದು ಸುಳ್ಳುಗಾರರನ್ನ ಸೃಷ್ಟಿಸುವ ಶಾಖೆ ಅಂತ ಗೊತ್ತಿರಲಿಲ್ಲ. ಆರ್ ಎಸ್ ಎಸ್ ರಾಷ್ಟ್ರೀಯ ಸುಳ್ಳುಗಾರಾರ ಶಾಲೆ ಆಗಿದೆ. ಸಂತೋಷ್ ಅವರೇ ನೀವು ಇಷ್ಟು ಸುಳ್ಳಗಾರರು ಅಂತಾನೆ ಗೊತ್ತಿರಲಿಲ್ಲ. ಬಿಎಸ್ ವೈ ಅವರನ್ನು ಸಂತೋಷ್ ಹೊಗಳಿರುವುದೂ ಕೂಡ ಸುಳ್ಳೆ.  ಎಂದು  ಲೇವಡಿ ಮಾಡಿದರು.

ಮೋದಿಯವರೇ ನೀವು ಆತ್ಮ‌ನಿರ್ಭರ ಭಾರತ ಮಾಡಲ್ಲ: ಆತ್ಮಹತ್ಯೆಯ ಭಾರತ ಮಾಡಲು ನೀವು ಹೊರಟಿದ್ದೀರಾ…?

ಹಾಗೆಯೇ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ಮುಂದುವರೆಸಿದ ಧೃವನಾರಾಯಣ್, ಮೋದಿಯವರೇ ನೀವು ಆತ್ಮ‌ನಿರ್ಭರ ಭಾರತ ಮಾಡಲ್ಲ. ಆತ್ಮಹತ್ಯೆಯ ಭಾರತ ಮಾಡುವುದಕ್ಕೆ ನೀವು ಹೊರಟಿದ್ದೀರಾ. ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದೀರಾ… ? ಎಂದು ಹರಿಹಾಯ್ದರು.

ಮುಂಬೈನಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ನಡೆಸಿರುವ ದಾಳಿ ಖಂಡಿಸಿದ  ಮಾಜಿ ಸಂಸದ ಆರ್. ಧ್ರುವನಾರಾಯಣ್, ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ನಿವಾಸದ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಅಂಬೇಡ್ಕರ್ ಅಂತ ಮಹಾನ್ ವ್ಯಕ್ತಿ ಮನೆ ಮೇಲೆ ದಾಳಿ ಖಂಡನೀಯ. ಸರ್ಕಾರ ಈ ಕೂಡಲೆ ದುಷ್ಕರ್ಮಿಗಳನ್ನ ಬಂಧಿಸಿಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಎ ವೆಂಕಟೇಶ್, ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Key words: mysore- former-MP-Dhruvanarayan-  Against- BL Santosh – Prime Minister Modi