ನಿಮ್ಮ ಅಭಿಮಾನಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ: ಜಾತಿ, ಹಣದ ಮೇಲೆ ರಾಜಕೀಯ ಮಾಡಿದ್ರೆ ಇಂದೇ ನಿವೃತ್ತಿ ಎಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್…

ಮೈಸೂರು,ನ,7,2019(www.justkannada.in): ನಾನು  ಜಾತಿ, ಹಣದ ಮೇಲೆ ರಾಜಕೀಯ ಮಾಡಿಲ್ಲ. ಆ ರೀತಿ ಮಾಡಿದ್ರೆ ಯಾರದರೂ ಒಬ್ಬರು ಬೆರಳೆತ್ತು ತೋರಿಸಲಿ. ನಾನು ಇವತ್ತೆ ರಾಜಕೀಯ ನಿವೃತ್ತಿ ಹೊಂದುತ್ತೇನೆ  ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನೆರೆದಿದ್ದ ಕಾರ್ಯಕರ್ತರು ಅಭಿಮಾನಿಗಳನ್ನುದ್ದೇಶಿಸಿ ಭಾಷಣ ಮಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ನಾನು ಪಕ್ಷ ಬಿಟ್ಟು, ಜಾತ್ಯಾತೀತತೆ ಬಿಟ್ಟು ಏನು ಮಾಡಿಲ್ಲ. ಒಂದೆರಡು ನಿರ್ಧಾರಗ ನ್ನ ಜನರಿಗಾಗಿ ತೆಗೆದುಕೊಂಡಿದ್ದೇನೆ. ಎಲ್ಲರ ಜತೆ ನಾನು ಬೆಳೆಯುತ್ತಿದ್ದೇನೆ. ನಾನು ಜಾತಿ ರಾಜಕಾರಣ ಮಾಡಿದ್ದೇನೆ ಅಂದರೇ ಇಂದೇ ನಿವೃತ್ತಿಯಾಗುತ್ತೇನೆ ಎಂದು ತಿಳಿಸಿದರು.

ಅಡಿಪಾಯ ಸರಿ ಇಲ್ಲ ಅಂದರೇ ಯಾವ ಬಿಲ್ಡಿಂಗ್ ಭದ್ರವಾಗಿ ನಿಲ್ಲೊದಿಲ್ಲ. ಹೀಗಾಗಿ ನೀವೇ ನಮ್ಮ ಬೇರು. ಬೇರು ಮರೆತರೆ ನಾವಿನ್ನಿಲ್ಲ. ಡಿಕೆಶಿ ತಪ್ಪು ಮಾಡಿಲ್ಲ ಅಂತ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹೋರಾಟ ಮಾಡಿದ್ರಿ. ನಿಮ್ಮ ಪ್ರಾರ್ಥನೆ ಫಲದಿಂದ 50  ದಿನಗಳಲ್ಲಿ ನಾನು ವಾಪಾಸ್ ಬಂದೆ. ನಿಮ್ಮ ಅಭಿಮಾನಕ್ಕೆ ನಾನು ಬೆಲೆಕಟ್ಟಲು ಸಾಧ್ಯವಿಲ್ಲ. ನನ್ನ ಮೇಲಿನ ಅಭಿಮಾನದ ಸಾಲ ಜಾಸ್ತಿ ಆಗಿದೆ ಹೇಗೆ ತೀರಿಸಬೇಕು .?. ನಿಮ್ಮ ವಿಶ್ವಾಸದ ಋಣ ತೀರಿಸಬೇಕಿದೆ ಎಂದರು.

ನಾನು ರಾಜಕೀಯವಾಗಿ ಏನೆಲ್ಲಾ ಅಧಿಕಾರ ಅನುಭವಿಸಿದರೂ ನಮ್ಮ ಮನೆಯವರು ಯಾವತ್ತು ಮಧ್ಯೆ ಬರಲಿಲ್ಲ. ಆದ್ರೂ ನನ್ನ ಪತ್ನಿ, ಮಗಳು ಎಲ್ಲಾ ಎಷ್ಟೊಂದು ನೊಂದಿದ್ದಾರೆ . ಅವರನ್ನು ಸಂತೈಸುವುದು ನನ್ನ ಕರ್ತವ್ಯವಾಗಿತ್ತು. ಕಾಂಗ್ರೆಸ್ ಕಚೇರಿಯಲ್ಲಿ ಎಲ್ಲವನ್ನು ಹೇಳಿರುವೆ. ಸೂರ್ಯ ಎಷ್ಟೇ ಎತ್ತರಕ್ಕೆ ಇರಲಿ‌ ಕೆಳಗೆ ಇಳಿಯಲೇ ಬೇಕು. ಬೆಳಕು ಸರಿದು ಕತ್ತಲೆ ಬರಲೇಬೇಕು. ಬಿಜೆಪಿಯವರೂ ಸೇರಿ ನನ್ನ ಎಲ್ಲಾ ಸ್ನೆಹಿತರಿಗೂ ಇದು ಅನ್ವಯವಾಗುವುದು ಸತ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.

ಕೆಲವರು ದೊಡ್ಡವರನ್ನು ಮೆಚ್ಚಿಸಲು ಏನೇನೋ ಹೇಳಿಕೆ ನೀಡಿದ್ದಾರೆ. ಸ್ಟಾರ್ ಗಳನ್ನ‌ ತೆಗೆದುಕೊಳ್ಳೋಕೆ ಹೀಗೆಲ್ಲಾ ಹೇಳಿಕೆ ನೀಡುತ್ತಾರೆ. ಆದರೆ ನನಗೆ ಕಾಂಗ್ರೆಸ್ ಕಚೇರಿಯೇ ದೇವಾಲಯ ಈ‌ ಕಾರ್ಯಕ್ರಮ ಪಟ್ಟಿಯಲ್ಲಿರಲಿಲ್ಲ. ನಿಮ್ಮ ಪ್ರೀತಿ ವಿಶ್ವಾಸಕ್ಕಾಗಿ ನಾನು ಬಂದಿರುವೆ. ಜೆಡಿಎಸ್ ನಾ ಆರು ಜನ ಶಾಸಕರು ಪೋನ್ ಮಾಡಿದ್ರು. ಬಿಜೆಪಿ , ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಲು ಬಂದಿದ್ದಾರೆ. ಈ  ಪ್ರೀತಿಯ ಋಣ ಹೇಗೆ ತೀರಿಸಬೇಕು ಎಂದು ನುಡಿದರು.

ನಾನು ಏನು ಮಾಡಿಲ್ಲ. ನನಗೆ ಆತ್ಮ ಸ್ಥೈರ್ಯವನ್ನ ನಾನು ಕಳೆದುಕೊಳ್ಳಲಿಲ್ಲ. ನನ್ನ ಮಕ್ಕಳು ಕಾಲೇಜು ಹೋದಾಗ ನಿಮ್ಮ ಅಪ್ಪ ಜೈಲಿಗೆ ಹೋದವರು ಅನ್ನೊದನ್ನ ಹೇಗೆ  ಎದರಿಸುತ್ತಾರೋ ಅನ್ನೊ ಭಯ ಅಷ್ಟೇ. ನನ್ನ ರಾಜಕಾರಣದಲ್ಲಿ ನನ್ನ ಹಿಂದೆ ಬನ್ನಿ ಎಂದು ಹೊದವನಲ್ಲ. ಹಾಗೆ ಬೆರೆಯವ್ರ ಹಿಂದೆ ಹೋಗಬೇಡಿ ಅಂತ ಹೇಳಿದವನು ನಾನಲ್ಲ ಎಂದು ಡಿಕೆಶಿ ಹೇಳಿದರು.

Key words: mysore-  Former minister- DK Sivakumar – retiring – politics-money -caste