ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡುವಂತೆ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯ…

ಮೈಸೂರು,ಸೆಪ್ಟಂಬರ್,14,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಕ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಡುವೆ ಈ ಬಾರಿಯೂ ಮಹಿಷಾ ದಸರಾ ಆಚರಣೆ ಮಾಡುತ್ತೇವೆ. ಇದಕ್ಕೆ ಸರ್ಕಾರ ಯಾವುದೇ ವಿರೋಧ ಮಾಡದೇ ಅನುಮತಿ ನೀಡಬೇಕು ಎಂದು ಮಹಿಷಾ ದಸರಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್  ಪುರುಷೋತ್ತಮ್ ಒತ್ತಾಯಿಸಿದ್ದಾರೆ.jk-logo-justkannada-logo

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಅಕ್ಟೋಬರ್ 15ರ ಅಮಾವಾಸ್ಯೆ ದಿನದಂದು ಮಹಿಷಾ ದಸರಾ ಮಾಡುತ್ತೇವೆ. ಈ ಸಂಬಂಧ ಪೂರ್ವಭಾವಿ ಸಭೆ ಕೂಡ ಮಾಡಲಾಗಿದೆ. ಕೊರೋನಾ ಇರುವ ಕಾರಣಕ್ಕೆ ಸರಳವಾಗಿ ಮಹಿಷಾ ದಸರಾ ಆಚರಿಸುತ್ತೇವೆ. ಇದಕ್ಕೆ ಮೈಸೂರು ಪೋಲಿಸ್ ಇಲಾಖೆ ಅನುಮತಿ ನೀಡಬೇಕು. ಅನುಮತಿ ಕೊಟ್ಟರು ಮಾಡುತ್ತೇವೆ. ಕೊಡದೇ ಇದ್ದರೂ ಮಾಡುತ್ತೇವೆ ಎಂದಿದ್ದಾರೆ.mysore-former-mayor-demands-permission-mahisha-dasara-celebration

ನಾವು ಯಾವುದೇ ಧರ್ಮದ ವಿರುದ್ಧ ಆಚರಣೆ ಮಾಡುತ್ತಿಲ್ಲ. ನಮ್ಮ ಆಚರಣೆಯಿಂದ ಬೇರೆಯವರಿಗೂ ತೊಂದರೆ ಆಗಲ್ಲ. ಹಾಗಾಗಿ ಮಹಿಷಿ ದಸರಾ ಆಚರಣೆಗೆ ಅನುಮತಿ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹಿಸಿದ್ದಾರೆ.

Key words: Mysore- Former mayor -demands -permission – Mahisha Dasara -celebration