ಮೈಸೂರಿನಲ್ಲಿ ವಿನೂತನ ಮತ್ಸ್ತಲೋಕಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ.

ಮೈಸೂರು,ಅಕ್ಟೋಬರ್,8,2021(www.justkannada.in):  ಮೀನುಗಳ ಲೋಕದಲ್ಲಿ ವಿಹರಿಸಬೇಕೆ? ಬಗೆಬಗೆಯ ಮತ್ಸ್ಯ ಗಳನ್ನು ಕಣ್ತುಂಬಿಕೊಳ್ಳಬೇಕೆ? ಹಾಗಾದರೆ ಮೈಸೂರಿನ ಮೃಗಾಲಯದ ಸಮೀಪ ಲೋಕರಂಜನ್ ಆಕ್ವಾ ವರ್ಲ್ಡ್ ವತಿಯಿಂದ ನಿರ್ಮಾಣವಾಗಿರುವ ಅಂಡರ್ ವಾಟರ್ ಸಫಾರಿಗೊಮ್ಮೆ ಭೇಟಿ ಕೊಡಿ. ಮಕ್ಕಳೊಂದಿಗೆ ಕುಟುಂಬ ಸಮೇತ 45 ನಿಮಿಷ ಕಾಲ ಕಳೆಯಲು ಪ್ರಶಸ್ತ್ಯ ಸ್ಥಳ‌ವಿದು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಶುಕ್ರವಾರ ಟೇಪ್ ಕತ್ತರಿಸಿ ದೀಪ ಬೆಳಗುವ ಮೂಲಕ ಮತ್ಸ್ಯ ಲೋಕಕ್ಕೆ ಚಾಲನೆ ನೀಡಿದರು. ನಂತರ ಒಳಗೆ ಒಂದು ಸುತ್ತು ಓಡಾಡಿ ಮತ್ಸ್ಯಲೋಕವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.

4.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇದು ರಾಜ್ಯದ ಮೊದಲ ಬೃಹತ್ ಮತ್ಸ್ಯ ಕೇಂದ್ರ. ದಕ್ಷಿಣ ಭಾರತದಲ್ಲಿ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬಿಟ್ಟರೆ ಕರ್ನಾಟಕದಲ್ಲಿ ಮೈಸೂರಿನಲ್ಲಿ ಮಾತ್ರ ಈ ರೀತಿಯ ಮತ್ಸ್ಯ ಲೋಕ ಇರುವುದು ಮತ್ತೊಂದು ವಿಶೇಷ.

ಸುಮಾರು 80 ಬಗೆಯ ವಿವಿಧ ಮೀನುಗಳ ಪ್ರಬೇಧಗಳನ್ನು ಇಲ್ಲಿ ಕಾಣಬಹುದು. ವಿವಿಧ ದೇಶ ಹಾಗೂ ರಾಜ್ಯಗಳ ಬೃಹತ್ ಮತ್ಸ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಅಕ್ವೇರಿಯಂ ವೀಕ್ಷಣೆಗೆ ವಯಸ್ಕರಿಗೆ 99 ರೂ. ಮಕ್ಕಳಿಗೆ 69 ರೂ.  ದರ ನಿಗದಿಪಡಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸಾರ್ವಜನಿಕರು ಭೇಟಿ ನೀಡಬಹುದು.

Key words: mysore Dynasty -Pramodadevi Wodeyar- drive –matsya loka-mysore-dasara