ಎಂ.ಆರ್.ಪಿ ದರಕ್ಕಿಂತ ಕಡಿಮೆ ಬೆಲೆಗೆ ಉತ್ಪನ್ನ ಮಾರಾಟದ ‘ರಹಸ್ಯ’ ಇದು..!

 

ಮೈಸೂರು, ಡಿ.21, 2021 : (www.justkannada.in news) : ಕರ್ನಾಟಕ ಹಾಲು ಉತ್ಪಾಧಕರ ಸಹಕಾರ ಸಂಘದ ಜನಪ್ರಿಯ ‘ನಂದಿನಿ’ ಬ್ರ್ಯಾಂಡ್ ನ ನಕಲಿ ತುಪ್ಪ ತಯಾರಿಕೆ ಹಾಗೂ ಮಾರಾಟದ ಜಾಲ ಪತ್ತೆ ಬೆನ್ನಲ್ಲೇ ಇನ್ನು ಅನೇಕ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

ಮೈಸೂರಿನ ಎಪಿಎಂಸಿ ಮಾರುಕಟ್ಟೆ ಸಮೀಪದ ಪ್ರದೇಶದಲ್ಲೇ ‘ನಕಲಿ’ ಪ್ರಾಡಕ್ಟ್ ಗಳ ಉತ್ಫಾಧನ ಘಟಕಗಳು ಕಾರ್ಯ ನಿರ್ವಹಿಸುತ್ತುರುವುದು ವಿಶೇಷ. ಅಚಾನಕ್ಕಾಗಿ ನಂದಿನಿ ಬ್ರ್ಯಾಂಡ್ ನ ನಕಲಿ ತುಪ್ಪ ತಯಾರಿಕೆ ಬೆಳಕಿಗೆ ಬಂದಿತು. ಇದರ ಬೆನ್ನಲ್ಲೇ ಇದೀಗ ಇನ್ನು ಅನೇಕ ಉತ್ಪನ್ನಗಳ ನಕಲಿ ಬ್ರ್ಯಾಂಡ್ ಇಲ್ಲಿವೆ ಎಂಬ ಬಲವಾದ ಶಂಕೆ ಮೂಡಿದೆ.

ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಆರ್.ಟಿ.ಐ ಕಾರ್ಯಕರ್ತ ರವೀಂದ್ರ ಅವರು ಹೇಳಿದಿಷ್ಟು..

ಮೈಸೂರಿನ ಎಪಿಎಂಸಿ ಮಾರುಕಟ್ಟೆ ಸಮೀಪದ ಪ್ರದೇಶದಲ್ಲೇ ‘ನಕಲಿ’ ಬ್ರಾಂಡ್ ಗಳ ಉತ್ಫಾಧನ ಘಟಕಗಳು ಕಾರ್ಯ ನಿರರ್ವಹಿಸುತ್ತಿರುವ ಅನುಮಾನವಿದೆ . ಇಲ್ಲಿ ಕೇವಲ ನಂದಿನಿ ತುಪ್ಪ ಮಾತ್ರವಲ್ಲ, ಜನಪ್ರಿಯ ಬ್ರ್ಯಾಂಡ್ ನ ಮಸಾಲೆ ಪೌಡರ್ (ನಾನ್ ವೆಜ್ ), ಡ್ರೈ ಫ್ರೂಟ್ಸ್, ಅಡುಗೆ ಎಣ್ಣೆ…ಹೀಗೆ ಮುಂತಾದ ಉತ್ಪನ್ನಗಳು ತಯಾರಿಕೆ ನಡೆಯುತ್ತಿವೆ. ಇಲ್ಲಿ ತಯಾರಾಗುವ ಉತ್ಪನ್ನಗಳು ಸುಲಭವಾಗಿ ಎಪಿಎಂಸಿ ಪ್ರವೇಶಿಸುತ್ತವೆ. ಅಲ್ಲಿಂದ ಹೋಲ್ ಸೇಲ್ ರೂಪದಲ್ಲಿ ಅಂಗಡಿಗಳಿಗೂ ಲಗ್ಗೆ ಇಡುತ್ತಿವೆ.

ಮಾಲ್ ಗಳು ಸೇರಿದಂತೆ ಕೆಲವೆಡೆ ಜನಪ್ರಿಯ ಬ್ರ್ಯಾಂಡ್ ನ ಉತ್ಪನ್ನಗಳು ಎಂಆರ್ಪಿ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದು ಹೇಗೆ ಸಾಧ್ಯ.? . ಈ ಪ್ರಶ್ನೆಗೆ ದೊರಕುವ ಉತ್ತರವೇ ಡುಪ್ಲೀಕೇಟ್ ಪ್ರಾಡಕ್ಟ್.

ಕೆಲ ದಿನಗಳ ಹಿಂದೆ ಮೈಸೂರಿನ ಹೊಸಹುಂಡಿ ಗ್ರಾಮದ ಬಳಿ ಪತ್ತೆಯಾದ ನಕಲಿ ನಂದಿನಿ ತುಪ್ಪ ಉತ್ಧಾಧನ ಘಟಕ, ಡುಪ್ಲಿಕೇಟ್ ಉತ್ಪನ್ನಗಳ ಬಗೆಗೆ ಜನತೆಗೆ ಮಾಹಿತಿ ಲಭಿಸಿತು. ಆದರೆ ಇಂಥ ಇನ್ನು ಹತ್ತಾರು ಉತ್ಪಾಧನಾ ಘಟಕಗಳು ಸುತ್ತಮುತ್ತಲ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸದ ಹೊರತು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಇಂಥ ಈ ನಕಲಿ ದಂಧೆಗೆ ಕಡಿವಾಣ ಅಸಾಧ್ಯ.

ಪೊಲೀಸ್ ಮಾಹಿತಿ :

ನಕಲಿ ನಂದಿನಿ ತುಪ್ಪ ಬೆಳಕಿಗೆ ಬಂದ ಕೂಡಲೇ ಸ್ಥಳೀಯ ಕಡಕೊಳ ಪಟ್ಟಣ ಪಂಚಾಯ್ತಿಯ ಚೀಫ್ ಆಫೀಸರ್ ವೆಂಕಟೇಶ್ ಅವರಿಗೆ ಪೊಲೀಸರು ಪತ್ರ ಬರೆದು ಉತ್ಫಾಧನ ಘಟಕದ ಮಾಲಿಕತ್ವದ ಬಗ್ಗೆ ಮಾಹಿತಿ ಕೇಳಿದ್ದಾರೆ.
ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಕಡಕೊಳ ಪಟ್ಟಣ ಪಂಚಾಯ್ತಿಯ ಚೀಫ್ ಆಫೀಸರ್ ವೆಂಕಟೇಶ್ ಹೇಳಿದಿಷ್ಟು..

ನಕಲಿ ಉತ್ಪಾಧನಾ ಘಟಕ ಕಾರ್ಯನಿರ್ವಹಿಸುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕೇಳಿದ್ದು, ಅದು ಆರ್ಟಿಸಿ ಸರ್ವೆ ನಂಬರ್ ಸ್ಥಳವಾಗಿದ್ದು, ನಮ್ಮಿಂದ ಯಾವುದೇ ಅನುಮತಿ ಪಡೆದಿಲ್ಲ. ಜತೆಗೆ ಜಮೀನಿನಲ್ಲಿ ಕಟ್ಟಡ ನಿರ್ಮಾಣವಾಗಿದ್ದ ಕಾರಣ ಸಮೀಪದ ಗ್ರಾಮದ ಜನರಿಗೂ ಅದರ ಬಗ್ಗೆ ಮಾಹಿತಿ ಇಲ್ಲ.

ಇದೇ ವೇಳೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ ಇತರೆ ಕೆಲ ಉತ್ಪಾಧನ ಘಟಕಗಳಿಗೆ ತೆರಳಿ ಪರಿಶೀಲನೆ ನಡೆಸಿ ಅವರಿಂದ ಕೆಲ ಅಗತ್ಯ ದಾಖಲೆಗಳನ್ನು ಕೇಳಲಾಗಿತ್ತು. ಇದೀಗ ನಾವು ಕೇಳಿರುವ ಸಂಪೂರ್ಣ ದಾಖಲೆಗಳನ್ನು ಉತ್ಫಾದನಾ ಘಟಕಗಳ ಮಾಲೀಕರು ಒದಗಿಸಿದ್ದಾರೆ.

 

key words : mysore-duplicate-product-police-kmf-ghee