ಡಿಜೆ.ಹಳ್ಳಿ ,ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಗಲಾಟೆ ವೇಳೆ ಮಾಧ್ಯಮದವರ ಮೇಲೂ ಹಲ್ಲೆ: ಘಟನೆ ಖಂಡಿಸಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ…

ಮೈಸೂರು,ಆ,11,2020(www.justkannada.in): ಬೆಂಗಳೂರಿನ ಡಿ.ಜೆ.ಹಳ್ಳಿ, ಕಾವಲ್ ಭೈರಸಂದ್ರ ಮತ್ತು ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಗಲಾಟೆ ವೇಳೆ  ಕರ್ತವ್ಯ ನಿರತ ಪತ್ರಕರ್ತರು ಹಾಗೂ ಕ್ಯಾಮರಮನ್ ಗಳ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಲ್ಲದೆ, ಕ್ಯಾಮರಾ ಮತ್ತು ವಾಹನವನ್ನೂ ಜಖಂಗೊಳಿಸಿರುವ ಘಟನೆಯನ್ನ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರವಾಗಿ  ಖಂಡಿಸಿದೆ.jk-logo-justkannada-logo

ಮಂಗಳವಾರ ಬೆಂಗಳೂರಿನ ಡಿ.ಜೆ.ಹಳ್ಳಿ, ಕಾವಲ್ ಭೈರಸಂದ್ರ ಮತ್ತು ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಗುಂಪೊಂದು ಸಾರ್ವಜನಿಕವಾಗಿ ದಾಂಧಲೆಗಿಳಿದಿದ್ದ ವೇಳೆ ವರದಿಗೆಂದು ತೆರಳಿದ್ದ ಮಾಧ್ಯಮದವರ ಮೇಲೆ ಮನಸ್ಸೊಯಿಚ್ಚೆ ಕಲ್ಲು ತೂರಾಟ ನಡೆಸಿ, ಹಲ್ಲೆ ಮಾಡಲಾಗಿದೆ.Mysore District -Journalists' -Association -condemns – incident-bangalore- assult-Violation

ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡಲು ಸರ್ಕಾರ ಅವಕಾಶ ಕಲ್ಪಿಸಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು  ಮೈಸೂರು ಜಿಲ್ಲಾ ಪತ್ರಕರ್ತರ ಸಂಘ  ಆಗ್ರಹಿಸಿದೆ.

Key words: Mysore District -Journalists’ -Association -condemns – incident-bangalore- assult-Violation