ನೋ ಲೀವ್, ನೋ ಲಂಚ್ ಬ್ರೇಕ್ : ಏ.30ರವರೆಗೆ ಮೈಸೂರು ಜಿಲ್ಲೆ ಆರೋಗ್ಯ ಇಲಾಖೆ ಸಿಬ್ಬಂದಿಯ ಎಲ್ಲಾ ರಜೆ ರದ್ಧು…

ಮೈಸೂರು,ಏಪ್ರಿಲ್,3,2021(www.justkannada.in):  ರಾಜ್ಯದಲ್ಲಿ ಕೊರೋನಾ 2ನೇ ಅಲೆ ಪ್ರಾರಂಭವಾಗಿದ್ದು, ಕಠಿಣ ನಿಯಮಗಳನ್ನ ಜಾರಿ ಮಾಡಲಾಗುತ್ತಿದೆ. ಈ ಮಧ್ಯೆ ಏಪ್ರಿಲ್ 30ರವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿಯ ಎಲ್ಲಾ ರಜೆಗಳನ್ನ ರದ್ಧು ಮಾಡಿ ಮೈಸೂರು ಡಿಹೆಚ್ ಓ ಡಾ.ಅಮರನಾಥ್ ಆದೇಶಿಸಿದ್ದಾರೆ. Illegally,Sand,carrying,Truck,Seized,arrest,driver

ಕೊರೊನಾ ಎರಡನೇ ಅಲೇ ಜೋರಾಗುತ್ತಿರುವ ಹಿನ್ನಲೆ, ಮೈಸೂರು ಜಿಲ್ಲೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಏಪ್ರಿಲ್ 30ರವರೆಗೆ ನೋ ಲೀವ್, ನೋ ಲಂಚ್ ಬ್ರೇಕ್. ಏಪ್ರಿಲ್ 30 ರವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ರಜೆ ಇಲ್ಲ.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಮೈಸೂರು ಡಿಹೆಚ್.ಓ ಡಾ.ಅಮರನಾಥ್, ಮೈಸೂರಿನಲ್ಲಿ ಕೊರೊನಾ ಹೆಚ್ಚಾಗ್ತಿದೆ. ತಪಾಸಣೆ ಹೆಚ್ಚು ಮಾಡಬೇಕಾದ ಅನಿವಾರ್ಯತೆ ಇದೆ. ಯಾರಿಗೂ ಏಪ್ರಿಲ್ 30ರ ವರೆಗೆ ರಜೆ ಇಲ್ಲ. ಲಂಚ್ ಬ್ರೇಕ್ ಕೂಡ ಇರಲ್ಲ, ನಿಮ್ಮ ನಿಮ್ಮ ಆಫೀಸ್, ಕಾರ್ಯ ಸ್ಥಳಗಳಲ್ಲಿ ಊಟ ತಿಂಡಿ ಸೇವಿಸಬೇಕು. ಸರ್ಕಾರದ ಆದೇಶನ್ವಯ ಎಲ್ಲರೂ ಕೆಲಸ ಮಾಡಬೇಕು. ತಪ್ಪಿದ್ದಲ್ಲಿ ಸೂಕ್ತ ಕ್ರಮ ಜರುಗಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ಪ್ರತಿನಿತ್ಯ ವ್ಯಾಕ್ಸಿನೇಷನ್‌ ನೀಡುವಿಕೆ ಹೆಚ್ಚು ಮಾಡಬೇಕು. ಕೊರೋನಾ ತಡೆಗಟ್ಟಲು ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನ ಪಾಲಿಸಬೇಕು. ನಮ್ಮ ಇಲಾಖೆ ವ್ಯಾಪ್ತಿಯ ಕೆಲಸ ಹೆಚ್ಚಾಗಬೇಕಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ಕೂಡ ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಹಾಜರಾಗಬೇಕು. ಬೆಳಗ್ಗೆ 10ಕ್ಕೆ ಎಲ್ಲರೂ ಹಾಜರಿರಬೇಕು, ಯಾವುದೇ ಕಾರಣಗಳನ್ನ ಹೇಳುವಂತಿಲ್ಲ. ತೀರಾ ಎಮರ್ಜೆನ್ಸಿ ಇದ್ದರಷ್ಟೇ ರಜೆಗೆ ಸ್ಪಂದಿಸಲಾಗುತ್ತೆ ಎಂದು ಮೈಸೂರಿನ ಸಿಬ್ಬಂದಿಗೆ ಡಿಹೆಚ್ಓ ಡಾ. ಅಮರನಾಥ್ ಸೂಚನೆ ನೀಡಿದ್ದಾರೆ.mysore-district-health-department-staff-all-leave-canceled-30th-dho-amaranath

ಪ್ರತಿನಿತ್ಯ ಕೋವಿಡ್ ಪ್ರಕರಣ ಜಾಸ್ತಿ ಆಗ್ತಿದೆ. ಮುನ್ನೆಚ್ಚರಿಕೆಯಾಗಿ ಮಂಡಕಹಳ್ಳಿ ಬಳಿಯ ಕೋವಿಡ್ ಚಿಕಿತ್ಸೆಗಾಗಿ 600 ಬೆಡ್, ಜಿಲ್ಲಾಸ್ಪತ್ರೆ ಬಳಿ 200 ಬೆಡ್ ಸಿದ್ದ ಪಡಿಸಲಾಗಿದೆ. ಎಲ್ಲಾ ಭಾಗಗಳಲ್ಲೂ ತಪಾಸಣೆ ಮಾಡುತ್ತಿದ್ದೇವೆ.ಏರ್ಪೋರ್ಟ್ ನಲ್ಲಿ ನೆಗೆಟಿವ್ ರಿಪೋರ್ಟ್ ಇರದಿದ್ದರೆ ಬಿಡುವುದಿಲ್ಲ. ಅದೇ ರೀತಿ ಬಾವಲಿ ಚಕ್ ಪೋಸ್ಟ್ ನಲ್ಲಿ  ತಪಾಸಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಸಹಕಾರದಿಂದ ಮಾತ್ರ ಕೋವಿಡ್ ತಡೆಯೋಕೆ ಸಾಧ್ಯ. ಸರ್ಕಾರದ ಆದೇಶಗಳನ್ನ ಪಾಲನೆ ಮಾಡಿ ಈ ಸಾಂಕ್ರಾಮಿಕ ರೋಗ ಹರಡೋದನ್ನ ತಡೆಗಟ್ಟಿ ಎಂದು ಡಿಹೆಚ್ಓ ಡಾ. ಅಮರನಾಥ್ ಹೇಳಿದರು.

Key words: Mysore District -Health Department- staff- All leave- canceled – 30th-DHO-Amaranath