ರೋಗನಿರೋಧಕ ಗುಣ ಹೊಂದಿರುವ ಬಹುತೇಕ ಬೇವಿನ ಮರಗಳಿಗೆ ಈಗ ‘ DIE BACK ‘ ಸಂಕಷ್ಟ.

ಮೈಸೂರು, ಅ.01, 2020 : (www.justkannada.in news) : ಹಲವಾರು ರೋಗನಿರೋಧಕ ಗುಣಗಳನ್ನು ಹೊಂದಿರುವ ಬೇವಿನ ಮರಕ್ಕೆ ಕಾಣಿಸಿಕೊಂಡಿರುವ ‘ಡೈ ಬ್ಯಾಕ್ ‘ ರೋಗ ಇದೀಗ ವ್ಯಾಪಕವಾಗುತ್ತಿದೆ. ಇದರಿಂದ ಇಡೀ ಗಿಡವೇ ಒಣಗಿ ಹಾಳಾಗುತ್ತಿದೆ. mysore- dieback- disease of- neem-plant-prof.shankar-bhatt-botany
ಮೈಸೂರು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗ್ ನಿವೃತ್ತ ಪ್ರಾಧ್ಯಾಪಕ ಪ್ರೊ.ಶಂಕರ್ ಭಟ್, ಈ ನಿಟ್ಟಿನಲ್ಲಿ ನಿರಂತರ ಅಧ್ಯಯನ ಕೈಗೊಂಡಿದ್ದು, ಸರಕಾರ ಕೂಡಲೇ ಸಮಗ್ರ ಯೋಜನೆಯೊಂದನ್ನು ರೂಪಿಸಿ ಬೇವಿನ ಮರಗಳಲ್ಲಿ ಕಾಣಿಸಿಕೊಂಡಿರುವ ಈ ರೋಗ ನಿಯಂತ್ರಿಸದಿದ್ದಲ್ಲಿ ಮುಂದೆ ಅಪಾಯ ಕಾದಿದೆ ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಪ್ರೊ.ಶಂಕರ್ ಭಟ್ ಅವರು ಹೇಳಿದಿಷ್ಟು…
ಬೇವಿನ ಮರದಿಂದ ಮನುಷ್ಯನಿಗೆ ಬಹುಉಪಯೋಗವಿದೆ. ಇದರ ಎಲೆಗಳು ಮನುಷ್ಯನ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿದೆ. ಚರ್ಮದ ಸಮಸ್ಯೆ, ಬೊಜ್ಜು, ಮಕ್ಕಳಿಗೆ ತಗಲುವ ವೈರಲ್ ಇನ್‌ಫೆಕ್ಷನ್‌ಗಳಿಗೆ ಇದು ಔಷಧದಂತೆ ಕೆಲಸ ಮಾಡುತ್ತದೆ. ಪರಿಸರದಲ್ಲಿ ಹೆಚ್ಚಾಗಿ ಬೆಳಸುವ ಮೂಲಕ ಆಮ್ಲಜನಕದ ಕೊರತೆಯನ್ನು ಬೇವಿನ ಮರ ನೀಗಿಸುತ್ತದೆ. ಈಗ ಬೇವಿಗೆ ರೋಗ ತಗುಲಿದೆ. ಆ ಮೂಲಕ ‘ ಡಾಕ್ಟರ್ ಪ್ಲಾಂಟ್ ಈಗ ಪೇಷೆಂಟ್ ಪ್ಲಾಂಟ್ ‘ ಆಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಬಹುತೇಕ ಬೇವಿನ ಮರಗಳು ಈಗ ‘ ಡೈ ಬ್ಯಾಕ್ ‘ ಡಿಸೀಸ್ ನಿಂದ ಬಳಲುತ್ತಿದೆ. ಪರಿಣಾಮ ಇದರ ಎಲೆಗಳು ಸುಟ್ಟಂತೆ ಮಾರ್ಪಾಡಾಗುತ್ತಿದ್ದು, ಮರಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಇದು ಬೀಜೋತ್ಪಾಧನೆ ಮೇಲೂ ದುಷ್ಪರಿಣಾಮ ಬೀರುತ್ತದೆ. ಆ ಮೂಲಕ ಸಸ್ಯ ಸಂತತಿ ನಾಶವಾಗುವ ಅಪಾಯ ಎದುರಾಗಲಿದೆ ಎಂದು ಪ್ರೊ.ಶಂಕರ್ ಭಟ್ ಆತಂಕ ವ್ಯಕ್ತಪಡಿಸಿದರು.
ಬೇವಿನ ಮರದ ಬೀಜದಲ್ಲಿನ ಫಂಗಸ್ ಕಾರಣದಿಂದ ಈ ರೋಗ ಕಾಣಿಸಿಕೊಂಡಿದೆ. ಇದರ ನಿಯಂತ್ರಣ ಅಷ್ಟು ಸುಲಭವಲ್ಲ. ಸಂಶೋಧನಾಲಯಗಳಲ್ಲಿ ಕೆಲ ಅವಧಿಯ ಮಟ್ಟಿಗೆ ನಿಯಂತ್ರಿಸಬಹುದಾದರು ಅದು ಶಾಶ್ವತ ಪರಿಹಾರವಲ್ಲ. ಅದೇ ರೀತಿ ರಾಸಾಯನಿಕ ಸಿಂಪಡಣೆ ಸಹ ಪ್ರಯೋಜನಕ್ಕೆ ಬಾರದು. ಪರಿಸರಕ್ಕೆ ಹಾನಿ ಮಾಡುವ ಈ ವಿಧಾನ ಸಲ್ಲದು. ಆದ್ದರಿಂದ ಸಮಸ್ಯೆಯ ಆಳಕ್ಕೆ ಇಳಿದು ಪರಿಹಾರ ಕಂಡುಕೊಳ್ಳಬೇಕಿದೆ. ತಳಿಶಾಸ್ತ್ರದ ಸಹಾಯದಿಂದ ಸೀಡ್ ಟ್ರಿಟ್ಮೆಂಟ್ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಆದರೆ ಇದು ಒಬ್ಬರಿಬ್ಬರ ಕೈಯಲ್ಲಿ ಸಾಧ್ಯವಿಲ್ಲ. ಸರಕಾರವೇ ಸಮಗ್ರವಾದ ಯೋಜನೆ ರೂಪಿಸಿ ಸಸ್ಯಶಾಸ್ತ್ರದ ಎಲ್ಲರನ್ನು ಒಗ್ಗೂಡಿಸಿ ಕಾರ್ಯೊನ್ಮುಕವಾದರೆ ಆಗ ಅದು ಫಲಪ್ರದವಾಗುತ್ತದೆ.
ಹಿನ್ನೆಲೆ :
ಮೈಸೂರು ವಿವಿ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಶಂಕರ್ ಭಟ್ ಅವರ ಆಸಕ್ತಿಯ ಫಲವಾಗಿಯೇ 1994 ರಲ್ಲಿ ಮೈಕ್ರೊ ಬಯಲಾಜಿ ವಿಭಾಗ ಆರಂಭಿಸಲಾಯಿತು. 2004 ರಲ್ಲೇ ಹುದ್ದೆಯಿಂದ ನಿವೃತ್ತರಾದವರು. ಆದರೂ ಪರಿಸರ ಹಾಗೂ ಸಸ್ಯಶಾಸ್ತ್ರದ ಮೇಲಿನ ಪ್ರೀತಿ, ಕಾಳಜಿ ಕಡಿಮೆಯಾಗಿಲ್ಲ. ಆದ್ದರಿಂದ ಕಾರಿನಲ್ಲೇ ಸುತ್ತಾಡುತ್ತ ಪರಿಸರದಲ್ಲಿನ ಬದಲಾವಣೆಗಳನ್ನು ಗಮನಿಸುತ್ತಿರುತ್ತಾರೆ. ತಾವು ಕಂಡುಕೊಂಡ ಅಂಶವನ್ನು ಸರಕಾರದ ಸಂಬಂಧಪಟ್ಟ ವ್ಯಕ್ತಿಗಳ ಗಮನಕ್ಕೂ ತರುತ್ತಾರೆ. ಪ್ರೊ.ಶಂಕರ್ ಭಟ್ ಅವರ ಹಲವಾರು ವರದಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪರಿಸರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. mysore- dieback- disease of- neem-plant-prof.shankar-bhatt-botany
ಇದೀಗ ನಗರಗಳ ಸೌಂಧರ್ಯೀಕರಣಕ್ಕೆ ಸಂಬಂಧಿಸಿದಂತೆ ಅಧ್ಯಯನ ವರದಿಯೊಂದನ್ನು ರಾಜ್ಯ ಸರಕಾರಕ್ಕೆ ಸಿದ್ಧ ಪಡಿಸಿಕೊಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇದಕ್ಕಾಗಿ ಅವರು ಮೈಸೂರು ನಗರವನ್ನೇ ಆಯ್ಕೆ ಮಾಡಿಕೊಂಡಿದ್ದು, ಇಲ್ಲಿನ ಪರಿರಸದಲ್ಲಿರುವ ಮರ-ಗಿಡಗಳ ಅಧ್ಯಯನ ನಡೆಸುತ್ತಿದ್ದಾರೆ.

key words : mysore- dieback- disease of- neem-plant-prof.shankar-bhatt-botany