ಮೈಸೂರು ಡಿಎಚ್ ಒಗೆ ಪಕ್ಷಾತೀತವಾಗಿ ತರಾಟೆ ತೆಗೆದುಕೊಂಡ ಜನಪ್ರತಿನಿಧಿಗಳು.

kannada t-shirts

ಮೈಸೂರು,ಮೇ,29,2021(www.justkannada.in): ಕೊರೋನಾ ನಿರ್ವಹಣೆಗೆ ಸಂಬಂಧಿಸಿದಂತೆ ನಡೆಯುತ್ತಿದ್ಧ ಸಭೆಯಲ್ಲಿ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಅಮರ್ ನಾಥ್ ಅವರನ್ನ ಜನಪ್ರತಿನಿಧಿಗಳು ಪಕ್ಷಾತೀತವಾಗಿ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.jk

ಕೊರೊನಾ ನಿಯಂತ್ರಣ ಸಂಬಂಧ ಮೈಸೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಡಿಎಚ್ ಒ ಅಮರ್ ನಾಥ್ ಅವರನ್ನ ಪಕ್ಷಾತೀತವಾಗಿ ಸಂಸದ, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ತರಾಟೆ ತೆಗೆದುಕೊಂಡರು.

ಜಿಲ್ಲಾಡಳಿತ ಔಷಧಿ ದಾಸ್ತಾನಿಲ್ಲ ಎಂದು ಹೇಳುತ್ತೆ. ಆದರೆ ಜನಪ್ರತಿನಿಧಿಗಳು ಖರೀದಿ ಮಾಡಿದ್ರೆ ಔಷಧಿ ಸಿಕ್ತಿದೆ. ಔಷಧಿ ಕೊರತೆ ಹೇಳಿಕೆ ಬಗ್ಗೆ ಡಿಹೆಚ್ ಒ ಅಮರ್ ನಾಥ್ ವಿರುದ್ಧ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಹುಣಸೂರು ಕ್ಷೇತ್ರಕ್ಕೆ ಔಷಧಿ ಒದಗಿಸದ ಬಗ್ಗೆ  ಶಾಸಕ ಮಂಜುನಾಥ್ ಪ್ರಶ್ನೆ ಎತ್ತಿದರು. ಶಾಸಕ  ಮಂಜುನಾಥ್  ಜೊತೆ ಧ್ವನಿಗೂಡಿಸಿದ ಸಂಸದ ಪ್ರತಾಪ್ ಸಿಂಹ, ಶಾಸಕ ರಾಮ್‌ದಾಸ್, ಎಂಎಲ್ ಸಿ ಹೆಚ್.ವಿಶ್ವನಾಥ್, ಶಾಸಕರಾದ ತನ್ವೀರ್‌ಸೇಠ್, ಯತೀಂದ್ರ ಸಿದ್ದರಾಮಯ್ಯ, ಸಾ. ರಾ ಮಹೇಶ್ ಸೇರಿ ಹಲವರು  ದೂರುಗಳ ಸುರಿಮಳೆ ಸುರಿಸಿದರು.

ಕೊರೊನಾ ನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷ್ಯ ತೋರಿಸಿದ್ದಕ್ಕೆ ಸಭೆಯಲ್ಲಿ ಅಧಿಕಾರಿಯನ್ನ ನಿಲ್ಲಿಸಿ ತರಾಟೆ ತೆಗೆದುಕೊಂಡ ಘಟನೆ ನಡೆಯಿತು. ಅಲ್ಲದೆ ಡಿಹೆಚ್‌ಓ ಅಮರ್ ನಾಥ್ ವಿರುದ್ಧ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್  ಸಹ ಕೆಂಡಾಮಂಡಲರಾದರು.

Key words: Mysore DHO- class- Representatives –corona -meeting

website developers in mysore