ಮಾದರಿಯಾಯ್ತು ಮೈಸೂರು ವಿದ್ಯಾರ್ಥಿಯ ಈ ನೈತಿಕ ಹೊಣೆಗಾರಿಕೆ..

 

ಮೈಸೂರು, ಆಗಸ್ಟ್ 09, 2019 ;(www.justkannada.in news) : ರಸ್ತೆಯಲ್ಲಿ ಹೋಗುವಾಗ ಸಿಕ್ಕ ಸಾವಿರಗಟ್ಟಲೆ ಹಣವನ್ನು ವಿದ್ಯಾರ್ಥಿಯೊಬ್ಬ ಪೊಲೀಸರಿಗೆ ತಲುಪಿಸುವುದು, ಅವರು ವಾರಸುದಾರರನ್ನು ಹುಡುಕಿ ಹಣ ಹಿಂದಿರುಗಿಸುವುದು ಕೇವಲ ಸಿನಿಮಾ, ಕಥೆಗಳಲ್ಲಿ ಮಾತ್ರವಲ್ಲ. ನಿಜ ಜೀವನದಲ್ಲೂ ನಡೆದಿದೆ. ಸಾಂಸ್ಕೃತಿಕ ನಗರಿ ಮೈಸೂರು ಇದಕ್ಕೆ ಸಾಕ್ಷಿಯಾಗಿರುವುದು ವಿಶೇಷ.

ಇದೇ ಆಗಸ್ಟ್ 4ರಂದು ವಿದ್ಯಾರ್ಥಿಯೊಬ್ಬರಿಗೆ ಸುಮಾರು 60 ಸಾವಿರ ರೂ.ಗಳ ನೋಟಿನ ಕಂತೆ ಸಿಕ್ಕಿತ್ತು. ಜತೆಗೆ ಆ ಕಂತೆಯ ನೋಟಿನಲ್ಲಿ ದೂರವಾಣಿ ಸಂಖ್ಯೆ ಸಹ ಬರೆದಿತ್ತು. ಆದರೆ ಆ ನಂಬರ್‌ ಲಭ್ಯವಿಲ್ಲದ ಕಾರಣ ಆ ವಿದ್ಯಾರ್ಥಿ ಸಿಕ್ಕಿದ ಹಣದ ಜತೆಗೆ ಮೈಸೂರಿನ ಹೃದಯಭಾಗದಲ್ಲಿರುವ ದೇವರಾಜ ಪೊಲೀಸ್ ಠಾಣೆಗೆ ತೆರಳಿ ಹಣ ಒಪ್ಪಿಸಿ ವಾರಸುದಾರರನ್ನು ಪತ್ತೆ ಹಚ್ಚಿ ನೀವೇ ಹಣ ಹಿಂತಿರುಗಿಸಿ ಎಂದರು.

ಮೈಸೂರಿನ ಎಸ್‌ಬಿಐ ಬ್ಯಾಂಕ್‌ನಲ್ಲಿ ಕ್ಯಾಶಿಯರ್ ಆಗಿರುವ ರಾಘವೇಂದ್ರ ಅವರ ಮಗ ಅನಿರುದ್ಧ ಎಂಬ ವಿದ್ಯಾರ್ಥಿಯೇ ರೋಡಿನಲ್ಲಿ ಸಿಕ್ಕ ಹಣವನ್ನು ಹಿಂದಿರುಗಿಸುವ ಮೂಲಕ ನೈತಿಕ ಹೊಣೆಗಾರಿಕೆ ಪ್ರದರ್ಶಿಸಿದಾತ. ಈತನ ಈ ನಡೆತೆ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿತ್ತು.

ವಿದ್ಯಾರ್ಥಿ ಅನಿರುದ್ಧ ಅವರಿಂದ ಹಣ ಪಡೆದ ಮೈಸೂರು ದೇವರಾಜ ಠಾಣೆ ಪೊಲೀಸರು, ವಾರಸುದಾರರನ್ನು ಪತ್ತೆ ಹಂಚಲು ಮುಂದಾದರು. ಹಣದ ಜೊತೆಯಲ್ಲಿದ್ದ ಭರ್ತಿ ಮಾಡಿದ್ದ ಬ್ಯಾಂಕಿನ ಚಾಲನ್ ಸಹಾಯದಿಂದ ಹಣದ ಮೂಲ ಮಾಲೀಕರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು.
ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕರಾಗಿರುವ ಆರ್ಯನ್ ಎಂಬುವವರು ಹಣ ಕಳೆದುಕೊಂಡವರು. ಅವರನ್ನು ಸಂಪರ್ಕಿಸಿ ಠಾಣೆಗೆ ಕರೆಸಿದ ಪೊಲೀಸರು, ಹಣ ತಂದುಕೊಟ್ಟಿದ್ದ ರಾಘವೇಂದ್ರ ಹಾಗೂ ಅವರ ಮಗ ಅನಿರುದ್ಧ್‌ ಅವರನ್ನು ಸಹ ಠಾಣೆಗೆ ಕರೆಸಿ ಅವರ ಮೂಲಕವೇ ವಾರಸುದಾರರಿಗೆ ಹಣವನ್ನು ಹಿಂತಿರುಗಿಸಿದ್ದಾರೆ.

—–
key words : mysore-devraja.police.station-handed over-60 thousand-amount to whom-lost money