ಮೈಸೂರು ದಸರಾ: ಯುವ ದಸರಾದಲ್ಲಿ ಕಾರ್ಯಕ್ರಮ ನೀಡಲಿರುವ ‘ತೇರಿಮೇರಿ ಸ್ಟಾರ್’ ರಾಣು ಮಂಡಲ್

ಮೈಸೂರು,ಸೆ,28,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಯುವ ದಸರಾದಲ್ಲಿ ತೇರಿಮೇರಿ’ ಸ್ಟಾರ್ ‘ರಾಣು ಮಂಡಲ್ ಅವರು ಕಾರ್ಯಕ್ರಮ ನೀಡಲಿದ್ದಾರೆ.

ಮೈಸೂರು ದಸರಾ ಸಕಲ ಸಿದ್ಧತೆಗಳು ನಡೆದಿದ್ದು ನಾಳೆ ಚಾಮುಂಡಿಬೆಟ್ಟದಲ್ಲಿ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಮೈಸೂರು ದಸರಾವನ್ನ ಉದ್ಘಾಟಿಸಲಿದ್ದಾರೆ. ಈ ನಡುವೆ  ಅ.1 ರಿಂದ ಅ.6ರವರೆಗೆ ಯುವದಸರಾ ನಡೆಯಲಿದ್ದು, ಉದ್ಘಾಟನಾ ದಿನವೇ ರಾಣು ಮಂಡಲ್ ಅವರು ಕಾರ್ಯಕ್ರಮ ನೀಡಲಿದ್ದಾರೆ.

ಕಾರ್ಯಕ್ರಮದ ವೇಳೆ ರಾಣು ಮೊಂಡಲ್ ಗೆ ಯುವ ದಸರಾ ಉಪಸಮಿತಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವಜನತೆಗೆ ಸಾಧನೆಯ ಸಂದೇಶ ಸಾರುವ ಸಲುವಾಗಿ ರಾಣುಮೊಂಡಲ್‌ ಅವರಿಗೆ ಯುವದಸರಾದಲ್ಲಿ ಹಾಡಲು ಅವಕಾಶ ನೀಡಲಾಗಿದೆ. ಯುವದಸರಾ ಉದ್ಘಾಟನೆಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಆಗಮಿಸಲಿದ್ದಾರೆ.

ಮುಂಬೈನ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಿ, ಹಾಡು ಹಾಡಿ ಜೀವನ ನಡೆಸುತ್ತಿದ್ದ ರಾಣು ಮಂಡಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರಿ‌ ಜನಮೆಚ್ಚುಗೆ ಪಡೆದಿದ್ದರು. ನಂತರ ರಾಣು ಮಂಡಲ್ ಹಿಮೇಶ್ ರೆಶಮಿಯಾ ಚಿತ್ರಕ್ಕೆ ಗಾಯಕಿಯಾಗುವ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ದರು. ಸದ್ಯ ರಾಣುಮಂಡಲ ಬಾಲಿವುಡ್ ಚಿತ್ರಗಳಿಗೆ ಹಾಡುಗಾರ್ತಿಯಾಗಿದ್ದಾರೆ.

Key words: mysore Dasara-  yuvadasara-Ranu Mandal-prorgam