ಮೈಸೂರು ದಸರಾ: ಗಜಪಡೆಗೆ ಮರದ ಅಂಬಾರಿ ಹೊರಿಸಿ ತಾಲೀಮು.

Promotion

ಮೈಸೂರು,ಅಕ್ಟೋಬರ್,3,2021(www.justkannada.in): ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿ ಮೈಸೂರು ಅರಮನೆಯಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದ್ದು ಇಂದು ಗೋಪಾಲಸ್ವಾಮಿ ಆನೆ ಮರದ ಅಂಬಾರಿ ಹೊತ್ತು  ಹೆಜ್ಜೆ ಹಾಕಿದನು.

ಅರಮನೆ ಆವರಣದಲ್ಲಿ ಗೋಪಾಲಸ್ವಾಮಿ ಆನೆಗೆ ಮರದ ಅಂಬಾರಿ ಒಳಗೆ ಮರಳುಮೂಟೆ ಇರಿಸಿ ತಾಲೀಮು ನಡೆಸಲಾಯಿತು. ಗೋಪಾಲಸ್ವಾಮಿ ಆನೆ 900ಕೆ.ಜಿ ತೂಕ ಹೊತ್ತು ಸಾಗಿದನು. ಗೋಪಾಲಸ್ವಾಮಿಗೆ ಕುಮ್ಕಿ ಆನೆಗಳಾದ ಚೈತ್ರ, ಕಾವೇರಿ ಸಾಥ್ ನೀಡಿದವು.

ಅಕ್ಟೋಬರ್ 15 ರಂದು ನಡೆಯಲಿರುವ ಜಂಬೂ ಸವಾರಿ ಈ ಬಾರಿಯೂ ಸಹ ಅರಮನೆ ಆವರಣಕ್ಕೆ ಸೀಮಿತವಾಗಿದ್ದು ಮೆರವಣಿಗೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ.

Key words: Mysore Dasara -Workout –gajapade-elephant