ಮೈಸೂರು ದಸರಾ ಯಶಸ್ವಿ: ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿದ ಸುಧಾಕರ್ ಎಸ್ ಶೆಟ್ಟಿ…

ಮೈಸೂರು, ಅಕ್ಟೋಬರ್,27,2020(www.justkannada.in):  ವಿಶ್ವ ವಿಖ್ಯಾತ  ಮೈಸೂರು ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆದಿದ್ದು ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ  ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಾಜಿ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.jk-logo-justkannada-logo

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸುಧಾಕರ್ ಎಸ್ ಶೆಟ್ಟಿ, ಮೈಸೂರು ಸರಳ ದಸರಾ ಎನ್ನುವ ಹೆಸರಿನಲ್ಲಿ  ಒಂದು ಸಾಂಪ್ರದಾಯಕ ದಸರಾವನ್ನು,ಯಾವುದೇ  ರೀತಿಯ ತೊಂದರೆ ಯಾಗದೇ ಇರುವ ರೀತಿಯಲ್ಲಿ  ನಡೆಸಿದ್ದೀರಿ. ಅದರಲ್ಲೂ, ಕರೋನ ವೈರಸ್  ಕರ್ನಾಟಕ ಹಾಗೂ ನಮ್ಮ  ಮೈಸೂರನ್ನು  ಸಮಯದಲ್ಲಿ  ಸಾಂಪ್ರದಾಯಿಕ ದಸರಾವನ್ನು ಸರಳ ದಸರಾವನ್ನಾಗಿ  ಸರ್ಕಾರ ಅಚರಿಸಲು ನಿರ್ಧರಿಸಿದೆ  ಎಂದು ಹೇಳಿದಾಗ, ನಾವೆಲ್ಲರೂ  ಯಾಕೆ   ಈ ಕರೋನ  ರೋಗಿಗಳ ಸಂಖ್ಯೆ  ಹೆಚ್ಚುತ್ತಿರುವ ಸಮಯದಲ್ಲಿ  ದಸರ ಆಚರಿಸುವ ನಿರ್ಧಾರ  ತೆಗೆದುಕೊಳ್ಳುತ್ತಿದ್ದಾರೆ ಎಂದು ವಿರೋಧಿಸಿದ್ದೆವು.  ಇದಕ್ಕೆ ಕಾರಣ   ನಮಗೆ ಅನುಭವ ಇರುವ ಹಾಗೆ ಎಲ್ಲಿ ಯಾವ ರಾಜ್ಯಗಳಲ್ಲಿ ಯಾವ ಜಿಲ್ಲೆಗಳಲ್ಲಿ, ಜಾತ್ರೆಗಳು ನಡೆದಿರುವುದೋ  ಅಲ್ಲೆಲ್ಲ ಜಾತ್ರೆಮುಗಿಯುವಾಗ ಶೇಕಡ 500 ಪಟ್ಟಿಗಿಂತ ಹೆಚ್ಚು  ಕರೋನವೈರಸ್ ಜನರ ದೇಹವನ್ನು ಹೊಕ್ಕಿತ್ತು. ಅದರಿಂದ ಹಲವಾರು ಕುಟುಂಬದ ಸದಸ್ಯರು ಕರೋನದಿಂದ ಮೃತ ಪಟ್ಟಿದ್ದು ಆ ಕುಟುಂಬದ ಸದಸ್ಯರು ತೊಂದರೆಗೆ ಈಡಾಗಿದ್ದಾರೆ.mysore-dasara-successful-sudhakar-s-shetty-congratulated-minister-dc

ಉದಾಹರಣೆಗೆ ಆಗಸ್ಟ್ ತಿಂಗಳ 22ರಲ್ಲಿ, ಕೇರಳದ ಓಣಂ ನಡೆದ ಏಳು ದಿನದಲ್ಲಿ 54.000 ಇದ್ದ ಪಾಸಿಟಿವ್ ಕೇಸ್ ಮೂರು ಲಕ್ಷದ 3.61.000 ಕ್ಕೆ ಹೆಚ್ಚಾಗುತ್ತದೆ. ಅಂದರೆ  ಏಳು ದಿನದಲ್ಲಿ 3ಲಕ್ಷ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತದೆ. ಆ  ಭಯದಿಂದ ಎಲ್ಲರೂ ಮೈಸೂರಿನ ದಸರಾ ಆಚರಣೆಯ ಬಗ್ಗೆ ಭಯದಿಂದ  ನೋಡುತ್ತಿದ್ದರು.

ಆದರೆ ತಾವು ದಸರಾವನ್ನು ನಡೆಸಿದ ರೀತಿ,ಸಾಂಪ್ರದಾಯಿಕವಾಗಿ ಪ್ರಪಂಚಕ್ಕೆ ಪರಿಚಯಿಸಿದ ರೀತಿ ಎಲ್ಲರೂ ಮೆಚ್ಚುವಂತಹುದು.ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಪ್ರತಿನಿತ್ಯ ಉಸ್ತುವಾರಿ ಮಾಡುತಿದ್ದ  ರೀತಿ ಮೆಚ್ಚುವಂತಹದು. ಇವರಿಗೆ ಸಹಕಾರಿಯಾಗಿ ಜಿಲ್ಲಾಧಿಕಾರಿರೋಹಿಣಿ ಸಿಂಧೂರಿ ಅವರು , ಅವರು ಚಾರ್ಜ್(ಹೊಣೆ) ತೆಗೆದುಕೊಂಡ ಕೇವಲ ಒಂದೇ ವಾರದಲ್ಲಿ ಸಮರ್ಪಕವಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ ಅವರಿಗೆ ನನ್ನ ಅಭಿನಂದನೆಗಳು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ  ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ.

Key words: Mysore dasara-Successful-  Sudhakar S Shetty -congratulated –minister-DC