ಮೈಸೂರು ದಸರಾ ಉಪಸಮಿತಿಗಳ ರಚನೆ: ಉಪವಿಶೇಷಧಿಕಾರಿ, ಕಾರ್ಯದರ್ಶಿ, ಸದಸ್ಯರ ನೇಮಕ….

ಮೈಸೂರು,ಸೆಪ್ಟಂಬರ್,23,2020(www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸರಳ ಮತ್ತು ಸಾಂಪ್ರದಾಯಕವಾಗಿ ನಾಡಹಬ್ಬ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ.  ಈ ನಡುವೆ ದಸರಾ ಉಪಸಮಿತಿಗಳನ್ನ ರಚನೆ ಮಾಡಲಾಗಿದೆ.

ಸ್ವಾಗತ ಮತ್ತು ಅಮಂತ್ರಣ ಸಮಿತಿ, ದೀಪಾಲಂಕಾರ ಸಮಿತಿ, ಸ್ವಚ್ಚತೆ ಮತ್ತು ವ್ಯವಸ್ಥೆ ಸಮಿತಿ, ಸ್ಥಬ್ದ ಚಿತ್ರ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ದಸರಾ ಸಮಿತಿಗಳನ್ನ ರಚನೆ ಮಾಡಲಾಗಿದ್ದು, ಉಪಸಮಿತಿಗಳ ಉಪವಿಶೇಷಧಿಕಾರಿ, ಕಾರ್ಯದರ್ಶಿ ಮತ್ತು ಸಮಿತಿ ಸದಸ್ಯರನ್ನ ನೇಮಕ ಮಾಡಿ ಮೈಸೂರು ಜಿಲ್ಲಾಧಿಕಾರಿ ಬಿ ಶರತ್ ಆದೇಶ ಹೊರಡಿಸಿದ್ದಾರೆ.mysore-dasara-sub-committees-formation-appointment-dc-b-sharath

ಸ್ವಾಗತ ಮತ್ತು ಆಮಂತ್ರಣ ಉಪಸಮಿತಿ  ವಿಶೇಷ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಮಂಜುನಾಥ್, ಕಾರ್ಯಧ್ಯಕ್ಷರಾಗಿ ಎಂಸಿಸಿ ಹೆಚ್ಚುವರಿ ಆಯುಕ್ತ ಶಶಿಕುಮಾರ್, ಕಾರ್ಯದರ್ಶಿಯಾಗಿ ಎಂಸಿಸಿ ವಲಯ ಆಯುಕ್ತ ಕುಬೇರಪ್ಪರನ್ನ ನೇಮಕ ಮಾಡಲಾಗಿದೆ.

ಹಾಗೆಯೇ ದೀಪಾಲಂಕಾರ ಸಮಿತಿಗೆ ಉಪ ವಿಶೇಷಧಿಕಾರಿಯಾಗಿ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮನೋಹರ್, ಕಾರ್ಯಧ್ಯಕ್ಷರಾಗಿ ಅಧಿಕ್ಷಕ ಇಂಜಿನಿಯರ್ ಮುನಿಗೋಪಾಲ್ ರಾಜ್, ಕಾರ್ಯದರ್ಶಿಯಾಗಿ ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಯೋಗೇಶ್ ಡಿ.ಕೆ ಅವರನ್ನ ನೇಮಿಸಲಾಗಿದೆ.

ಇನ್ನು ಸ್ವಚ್ಚತೆ ಸಮಿತಿ ವಿಶೇಷಧಿಕಾರಿಯಾಗಿ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಕಾರ್ಯಧ್ಯಕ್ಷರಾಗಿ ಪಾಲಿಕೆ ಆರೋಗ್ಯಧಿಕಾರಿ ಡಾ.ಜಯಂತ್, ಕಾರ್ಯಧ್ಯಕ್ಷರಾಗಿ ಆರೋಗ್ಯಧಿಕಾರಿಯಾಗಿ ಡಾ.ನಾಗರಾಜ್ ಅವರನ್ನ ನೇಮಕ ಮಾಡಲಾಗಿದೆ.mysore-dasara-sub-committees-formation-appointment-dc-b-sharath

ಈ ನಡುವೆ ಮೆರವಣಿಗೆ ಸಮಿತಿ ವಿಶೇಷಧಿಕಾರಿಯಾಗಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಕಾರ್ಯಧ್ಯಕ್ಷರಾಗಿ ಡಿಸಿಪಿ ಪ್ರಕಾಶ್ ಗೌಡ, ಕಾರ್ಯದರ್ಶಿಗಳಾಗಿ ಸಹಾಯಕ ಪೊಲೀಸ್ ಆಯುಕ್ತ ಶಶಿಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಪ್ಪ, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ಅವರನ್ನ ನೇಮಿಸಲಾಗಿದೆ.

ಹಾಗೆಯೇ ಸಾಂಸ್ಕೃತಿಕ ದಸರಾ ಉಪಸಮಿತಿ ವಿಶೇಷಧಿಕಾರಿಯಾಗಿ ಜಿ.ಪಂ ಸಿಇಒ ಭಾರತಿ, ಕಾರ್ಯಧ್ಯಕ್ಷರಾಗಿ ರಂಗಯಣ ಜಂಟಿ ನಿರ್ದೇಶಕರಾಗಿ ಮಲ್ಲಿಕಾರ್ಜುನ ಸ್ವಾಮಿ ಅವರನ್ನ ಆಯ್ಕೆ ಮಾಡಲಾಗಿದೆ.

ಸ್ತಬ್ದ ಚಿತ್ರ ಉಪಸಮಿತಿ ವಿಶೇಷಧಿಕಾರಿಯಾಗಿ ಜಿ.ಪಂ ಮುಖ್ಯಯೋಜನಧಿಕಾರಿ ಪಾಂಡೇ, ಕಾರ್ಯಧ್ಯಕ್ಷರಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಡಿ.ಕೆ ಲಿಂಗರಾಜು, ಕಾರ್ಯದರ್ಶಿಯಾಗಿ ಖಾಧಿ ಮತ್ತು ಗ್ರಾಮೋದ್ಯೋಗ ಮತ್ತು ಕೈಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮೇಗಳ ಅವರನ್ನು ನೇಮಿಸಲಾಗಿದೆ.

Key words: Mysore Dasara- Sub committees- Formation – Appointment –DC- B.Sharath