ಜುಲೈ 19ರಂದು ದಸರಾ ಹೈಪರ್ ಕಮಿಟಿ ಮೀಟಿಂಗ್.

ಮೈಸೂರು,ಜುಲೈ,12,2022(www.justkannada.in): ಕೊರೋನಾ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಸರಳ ದಸರಾ ಆಚರಣೆ ಮಾಡಿದ್ದ ಸರ್ಕಾರ ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ದಸರಾ ರೂಪುರೇಷೆ ಕುರಿತು ಚರ್ಚಿಸಲು ಜುಲೈ 19ರಂದು ದಸರಾ ಹೈಪರ್ ಕಮಿಟಿ ಮೀಟಿಂಗ್ ಕರೆಯಲಾಗಿದೆ.

ಈ ಕುರಿತು ಮೈಸೂರಿನಲ್ಲಿ ಮಾಹಿತಿ ನೀಡಿದ ಸಚಿವ ಎಸ್.ಟಿ ಸೋಮಶೇಖರ್, ಜುಲೈ 19ರಂದು ದಸರಾ ಹೈಪರ್ ಕಮಿಟಿ ಮೀಟಿಂಗ್ ನಡೆಯಲಿದೆ. ಜುಲೈ 19ರ ಸಂಜೆ 4 ಗಂಟೆಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ಆಯೋಜನೆ ಮಾಡಲಾಗಿದ್ದು, ಮೈಸೂರು ಭಾಗದ ಎಲ್ಲಾ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ದಸರಾ ರೂಪುರೇಷೆ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

Key words: mysore-Dasara -Hyper Committee -Meeting – 19th July.