ನೀವೇನು ಜಂಬೂ ಸವಾರಿ‌ ಮಾಡುತ್ತಿದ್ದೀರೋ ಅಥವಾ ಬಂಬೂ ಸವಾರಿ ಮಾಡಲು ಹೊರಟಿದ್ದೀರಾ..?- ಎಂಎಲ್ ಸಿ ಹೆಚ್.ವಿಶ್ವನಾಥ್ ಅಸಮಾಧಾನ…

ಮೈಸೂರು,ಅಕ್ಟೋಬರ್,5,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ 2ಸಾವಿರ ಜನಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಿರುವ ಜಿಲ್ಲಾಡಳಿತದ ನಡೆ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ಹೆಚ್.ವಿಶ್ವನಾಥ್, ನೀವೇನು ಜಂಬೂ ಸವಾರಿ‌ ಮಾಡುತ್ತಿದ್ದೀರೋ, ಬಂಬೂ ಸವಾರಿ ಮಾಡಲು ಹೊರಟಿದ್ದೀರಾ..? ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.jk-logo-justkannada-logo

ಎರಡು ಸಾವಿರ ಜನಕ್ಕೆ ದಸರಾ ಮಾಡುತ್ತೇವೆ ಎಂದರೆ 10 ಸಾವಿರ ಜನ ಸೇರುತ್ತಾರೆ.ಇದರಿಂದಾಗಿ ಕೊರೋನಾದ ಮಹಾಸ್ಪೋಟವಾಗುತ್ತೆ. ಅದನ್ನು ತಡೆಯುವ ಶಕ್ತಿ ಜಿಲ್ಲಾಡಳಿತಕ್ಕೆ ಇದೆಯಾ. ಈಗಲೇ ಆಸ್ಪತ್ರೆಯಲ್ಲಿ ಹಾಸಿಗೆಯ ಸಮಸ್ಯೆ ಇದೆ. ಇನ್ನು ಕೊರೋನಾ ಮಹಸ್ಪೋಟವಾದರೆ ಹೊಣೆ ಯಾರು…? ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.mysore dasara-H.Vishwanath-jamboo savari-mysore –district administration

ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳೀಯವಾಗಿ ಮಾಹಿತಿ ಇಲ್ಲ. ದಸರಾದ ವಾಸ್ತವ ಸ್ಥಿತಿ ತಿಳಿಸಬೇಕು. ಒಂದು ಕೋತಿ ಕುಣಿದರೂ ಸಾವಿರ ಜನ ಸೇರುತ್ತಾರೆ. ಈಗಿರುವಾಗ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿದರೇ ಪರಿಸ್ಥಿತಿ ಏನಾಗಬೇಡ. ಅದ್ದರಿಂದ ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ಪೂಜೆ ನಡೆಯಲಿ. ಜಂಬೂ ಸವಾರಿ ದಿನ ಅಂಬಾರಿಗೆ ಕೇವಲ ಪುಷ್ಪಾರ್ಚನೆ ಮಾಡಲಿ ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

Key words: mysore dasara-H.Vishwanath-jamboo savari-mysore –district administration