ತಾಲೀಮಿನಲ್ಲಿ ಸರಾಗವಾಗಿ ಹೆಜ್ಜೆ ಹಾಕಿದ ಗಜಪಡೆ……

ಮೈಸೂರು,ಸೆ,24,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ಎಂದಿನಂತೆ ತಾಲೀಮು ನಡೆಸಲಾಗುತ್ತಿದೆ.

ಈ ನಡುವೆ ಇಂದು ಸಹ ಜಂಬುಸವಾರಿ ತೆರಳುವ ಮಾರ್ಗದಲ್ಲಿ ಕ್ಯಾಫ್ಟನ್ ಅರ್ಜುನ ನೇತೃತ್ವದ ಗಜಪಡೆ ಎಂದಿನಂತೆ ಹೆಜ್ಜೆ ಹಾಕಿದವು.  ಜಂಬುಸವಾರಿ ತೆರಳುವ ಮಾರ್ಗದಲ್ಲಿ ಕಬ್ಬಿಣದ ಚೂರು,  ಮೊಳೆಗಳು ಆನೆಗಳ ಕಾಲಿಗೆ ತಗುಲಬಾರದೆಂದು ಮ್ಯಾಗ್ನೆಟಿಕ್ ಯತ್ರ ಬಳಕೆ ಮಾಡಲಾಗುತ್ತದೆ. ಗಜಪಡೆ ಸಾಗುವ ದಾರಿಯಲ್ಲಿ ಮ್ಯಾಗ್ನೆಟಿಕ್ ಯಂತ್ರದ ವಾಹನ ಅರ್ಜುನನ ಮುಂದೆ ಸಾಗಲಿದ್ದು,   ಆನೆಗಳು ನಡೆದು ಬರುವ ದಾರಿಯಲ್ಲಿ  ಕಬ್ಬಿಣದ ಚೂರು,  ಮೊಳೆ ಇತ್ಯದು ವಸ್ತುಗಳನ್ನ ಈ ಯಂತ್ರ ಸೆಳೆದುಕೊಳ್ಳುತ್ತದೆ.

ಹೀಗಾಗಿ ನಿತ್ಯವೂ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ದಸರಾ ಗಜಪಡೆಯ ಆನೆಗಳು ಸರಾಗವಾಗಿ ಹೆಜ್ಜೆ ಹಾಕಿದವು.   ಮೊನ್ನೆಯಷ್ಟೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕಾವೇರಿ ಆನೆಯ ಎಡಗಾಲಿಗೆ ಮೊಳೆಯೊಂದು ಚುಚ್ಚಿಕೊಂಡಿತ್ತು.

Key words: mysore-dasara-gajapade-elephant -steps -workout.