ಇಂದು ದಸರಾ ಗಜಪಡೆಗೆ ಬೀಳ್ಕೊಡುಗೆ: ಕಾಡಿನತ್ತ ಹೆಜ್ಜೆ ಹಾಕಲಿರುವ ಅಭಿಮನ್ಯು ಅಂಡ್ ಟೀಮ್…

ಮೈಸೂರು,ಅಕ್ಟೋಬರ್,28,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯನ್ನ ಯಶಸ್ವಿಯಾಗಿ ನಡೆಸಿದ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಇಂದು ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಲಿವೆ.jk-logo-justkannada-logo

ಇಂದು ಅರಣ್ಯ ಇಲಾಖೆಯಿಂದ ದಸರಾ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ ಆಯೋಜಿಸಲಾಗಿದ್ದು, ಕ್ಯಾಫ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಯಶಸ್ವಿಯಾಗಿ ದಸರಾ ಮುಗಿಸಿದ ಬಳಿಕ ಇದೀಗ ಸ್ವಸ್ಥಾನಕ್ಕೆ ವಾಪಾಸ್ ಆಗುತ್ತಿವೆ. ಇಂದು ನಾಡಿನಿಂದ ಮತ್ತೆ ಕಾಡನತ್ತ ಅಭಿಮನ್ಯು ಅಂಡ್ ಟೀಮ್ ಹೆಜ್ಜೆ ಹಾಕಲಿವೆ.mysore-dasara-gajapade-captain-abhimanyu-team-forest

ಕೊರೋನಾ ಹಿನ್ನೆಲೆ ಈ ಬಾರಿ ಸರಳ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗಿದ್ದು ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಹೀಗಾಗಿ ಕ್ಯಾಪ್ಟನ್ ಅಭಿಮನ್ಯು ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದನು. ಈ ಬಾರಿ 400 ಮೀಟರ್ ಗಷ್ಟೇ ಜಂಬೂ ಸವಾರಿ ಮೆರವಣಿಗೆ ಸೀಮಿತವಾಗಿತ್ತು.

Key words: mysore dasara-gajapade-captain-abhimanyu-team-forest