ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನ ಬರ್ತಿಲ್ಲ- ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಅಕ್ಟೋಬರ್,8,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಿನ್ನೆಯಷ್ಟೆ ಚಾಲನೆ ಸಿಕ್ಕಿದ್ದು, ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸರ್ಕಾರ 500 ಜನರಿಗೆ ಅವಕಾಶ ನೀಡಿದೆ. ಆದರೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಬರುತ್ತಿಲ್ಲವಂತೆ.

ಹೌದು, ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜನ ಬರ್ತಿಲ್ಲ. ಸರ್ಕಾರ ನಿಗದ ಪಡಿಸಿದಷ್ಟು ಜನರು ಬರುತ್ತಿಲ್ಲ.ನಾನು ಕೂಡ ನಿನ್ನೆ ರಾತ್ರಿ ಕೊನೆವರೆಗೆ ಕಾರ್ಯಕ್ರಮ ನೋಡಿದೆ. ಆದರೆ ಕೇವಲ 200 ಜನ ಮಾತ್ರ ಬಂದಿದ್ದರು. ವರ್ಚುವಲ್ ಆಗಿ ರಾಜ್ಯದಲ್ಲಿ 70 ಸಾವಿರ ಜನ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ ಎಂದರು.

ಐಟಿ ದಾಳಿಗೂ ಮಾಜಿ ಸಿಎಂ ಯಡಿಯೂರಪ್ಪಗೂ ಸಂಬಂಧ ಇಲ್ಲ. ಐಟಿ ಇಲಾಖೆ ಪ್ರತ್ಯೇಕವಾದ ಸಂಸ್ಥೆ. ಅದು ತನ್ನ ಕೆಲಸ ಮಾಡುತ್ತಿದೆ. ಇದು ಯಡಿಯೂರಪ್ಪ ಅವರನ್ನ ಟಾರ್ಗೆಟ್ ಮಾಡಿ ನಡೆಸಲಾದ ದಾಳಿ ಅಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ನುಡಿದರು.

Key words: mysore- Dasara cultural program- does not  -people –Minister- ST Somashekhar.