ದಸರಾಗೆ ಕೊರೋನಾ ಕಾರ್ಮೋಡ: ಮೈಸೂರಿಗೆ ಸಿಎಂ ಬಂದ ಮೇಲೆ ದಸರಾ ಆಚರಣೆ ಬಗ್ಗೆ ತೀರ್ಮಾನ..?

kannada t-shirts

ಮೈಸೂರು,ಆ,17,2020(www.justkannada.in): ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಮಹಾಮಾರಿಯಿಂದಾಗಿ ಹಲವು ಪರಿಣಾಮಗಳು ಉಂಟಾಗಿದ್ದು ಈ ನಡುವೆ ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಮೇಲೂ ಕೊರೋನಾ ಕಾರ್ಮೋಡ ಕವಿದಿದೆ.jk-logo-justkannada-logo

ದಿನ ಹತ್ತಿರ ಬಂದರೂ ಮೈಸೂರು ದಸರಾ ಆಚರಣೆ ಬಗ್ಗೆ ಇನ್ನು ತೀರ್ಮಾನವಾಗಿಲ್ಲ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ನಲ್ಲಿ ನಡೆಯುತ್ತಿದ್ದ ದಸರಾ ಹೈಪವರ್ ಕಮಿಟಿ ಮೀಟಿಂಗ್ ಆಗಸ್ಟ್ ಕಳೆಯುತ್ತಾ ಬಂದರೂ ಇನ್ನು ನಡೆದಿಲ್ಲ. ಜತೆಗೆ ಗಜಪಡೆಗೆ ಆನೆಗಳ ಆಯ್ಕೆ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೂ ತಯಾರಿ ನಡೆದಿಲ್ಲ. ಹೀಗಾಗಿ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಇದೀಗ ಎಲ್ಲರ ಚಿತ್ತ ಸಿಎಂ ಬಿಎಸ್ ಯಡಿಯೂರಪ್ಪ ಮೇಲೆ ಇದೆ.mysore-dasara-corona-virus-cm-bs-yeddyurappa

ಸದ್ಯ ಕೊರೊನಾ ಗೆದ್ದು ಬಂದಿರುವ ಸಿಎಂ ಯಡಿಯೂರಪ್ಪ ಆಗಸ್ಟ್ 21 ರಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮೈಸೂರಿಗೆ ಆಗಮಿಸಲಿದ್ದು ಅಂದು ದಸರಾ ಸಂಬಂಧ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸುವ ಸಾಧ್ಯತೆ ಇದೆ. ಈ ಬಾರಿಯ ದಸರಾ ಹೇಗೆ ನಡೆಸಬೇಕೆಂಬುದು ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆ ಇದೆ. ಹೀಗಾಗಿ ಮೈಸೂರಿಗರ ಚಿತ್ತ ಈಗ ಸಿಎಂ ಬಿಎಸ್ ವೈ ಮೇಲಿದೆ.

Key words: mysore- dasara-corona-virus-cm bs yeddyurappa

website developers in mysore