ಮೈಸೂರು ದಸರಾ: ಈ ಬಾರಿ ಕಣ್ಮನ ಸೆಳೆಯಲಿವೆ ನಾಲ್ವಡಿ ಕಟ್ಟಿದ ಸಿಐಟಿಬಿ ಹಾಗೂ ರೈತನಿಂದಲೇ ಬೆಳೆ ಸಮೀಕ್ಷೆ ಸ್ತಬ್ಧಚಿತ್ರ

kannada t-shirts

ಮೈಸೂರು, ಅಕ್ಟೋಬರ್,9,2021(www.justkannada.in):  ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸ್ತಬ್ಧಚಿತ್ರಗಳ ಸಿದ್ಧತೆ ಸದ್ದಿಲ್ಲದೆ ಆರಂಭವಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರು ಸ್ತಬ್ಧಚಿತ್ರಗಳು ಪಾಲ್ಗೊಳ್ಳುತ್ತಿರುವುದರಿಂದ ಪ್ರಮುಖ ಆಕರ್ಷಣೆಯಾಗಿ ಕಾಣುವಂತೆ ಮಾಡಲು ವಿಶೇಷ ಮತ್ತು ವಿಭಿನ್ನವಾಗಿರುವಂತೆ ಮಾಡಲು ಕಲಾವಿದರು ತಮ್ಮ ಕೈಚಳಕವನ್ನು ಶುರು ಮಾಡಿದ್ದಾರೆ.

ದಸರಾ ಪ್ರಯುಕ್ತ ಕೊನೆಯ ದಿನವಾದ ಜಂಬೂಸವಾರಿಯಲ್ಲಿ ಕನಿಷ್ಠ ೩೫ರಿಂದ ೪೦ ಸ್ತಬ್ಧಚಿತ್ರಗಳು ಭಾಗವಹಿಸುವ ಮೂಲಕ ಮೆರಗು ತುಂಬುತ್ತಿದ್ದವು.ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದರಿಂದ ನಾಲ್ಕು ಸ್ತಬ್ಧಚಿತ್ರಗಳು ಭಾಗಿಯಾಗಿದ್ದವು. ಈ ಬಾರಿಯೂ ಸರಳ ದಸರೆ ಆಚರಣೆ ಮಾಡುತ್ತಿರುವುದರಿಂದ  ಜಿಲ್ಲಾ ಪಂಚಾಯಿತಿಗಳ ಸ್ತಬ್ಧಚಿತ್ರಗಳು ಪಾಲ್ಗೊಳ್ಳದ ಕಾರಣ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೇರಿ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಮಾತ್ರ ಪಾಲ್ಗೊಳ್ಳಲಿವೆ. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ರಂಗಮಂಟಪ,ವಿಶಾಲವಾದ ಮಳಿಗೆಯಲ್ಲಿ ಸ್ತಬ್ಧಚಿತ್ರಗಳ ಸಿದ್ಧತೆ ಕಾರ್ಯವನ್ನು ಕಲಾವಿದರು ಶುರು ಮಾಡಿದ್ದಾರೆ. ಈಗಾಗಲೇ ಕಲಾವಿದರಿಗೆ ಟೆಂಡರ್ ನೀಡಲಾಗಿದ್ದು, ತಮ್ಮ ಸ್ತಬ್ಧಚಿತ್ರಗಳ ಬ್ಲ್ಯೂಪ್ರಿಂಟ್ ಇಟ್ಟುಕೊಂಡು ಕಲಾವಿದರು  ನೋಡುವುದಕ್ಕೆ ಆಕರ್ಷಣೀಯವಾಗುರುವಂತೆ ಮಾಡುತ್ತಿರುವುದು ಕಂಡುಬಂದಿದೆ. ತಂತಮ್ಮ ಲಾರಿಗಳನ್ನು ನಿಲ್ಲಿಸಿಕೊಂಡು ಅದಕ್ಕೆ ಬಿಳಿ,ಕಪ್ಪು,ಹಸಿರು ಮೊದಲಾದ ಬಣ್ಣಗಳನ್ನು ತುಂಬಿ ಉಳಿದ ಕೆಲಸದಲ್ಲಿ ನಿರತರಾಗಿದ್ದಾರೆ.

ರಾರಾಜಿಸಲಿರುವ ನಾಲ್ವಡಿ ಕಟ್ಟಿದ ಸಿಐಟಿಬಿ:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಬಾರಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿದ ಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವಂತೆ ತಯಾರಾಗುತ್ತಿದೆ. ಗಂಡುಭೇರುಂಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರದೊಂದಿಗೆ ಮೈಸೂರಿನಲ್ಲಿ ಮೈಸೂರು ಎಂಬ ಹೆಸರಿನಲ್ಲಿ ಗಮನಸೆಳೆಯುವಂತೆ ಮಾಡಲಾಗುತ್ತಿದೆ.  ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಸಿಐಟಿಬಿಯಿಂದ ಇಂದಿನ ಮುಡಾ ತನಕ ಆಗಿರುವ ಬಡಾವಣೆಗಳ ರಚನೆ, ಪ್ರಗತಿ, ಸಾಧನೆಗಳ ಜೊತೆಗೆ ಬಡವರು,ಮಧ್ಯಮ ವರ್ಗದವರಿಗೆ  ವಿಜಯನಗರ, ದಟ್ಟಗಳ್ಳಿ,ಸಾತಗಳ್ಳಿಯಲ್ಲಿ ನಿರ್ಮಿಸಲಿರುವ ಬಹು ನಿರೀಕ್ಷಿತ ಗುಂಪು ವಸತಿ ಯೋಜನೆಯ ಮೈಸೂರಿನಲ್ಲಿ ನಿಮ್ಮ ಕನಸಿನ ಮನೆ ಎನ್ನುವಂತೆ ಬೃಹತ್ ಗಾತ್ರದ ಮನೆಗಳನ್ನು ನಿರ್ಮಿಸಿರುವ ಮಾದರಿಯು ಕಾಣಲಿದೆ.

ರೈತನಿಂದಲೇ ಬೆಳೆ ಸಮೀಕ್ಷೆ:

ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ರೂಪಿಸಿರುವ ಕಾರ್ಯಕ್ರಮಗಳ ಜತೆಗೆ ಫಸಲ್ ಭಿಮಾ ಸುರಕ್ಷಾ ಯೋಜನೆಯಡಿ ಬೆಳೆ ಪರಿಹಾರ ಪಡೆಯಲು ಆರಂಭಿಸಿರುವ ಮೊಬೈಲ್ ಸಮೀಕ್ಷೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವುದಕ್ಕೆ ತಯಾರಿ ನಡೆದಿದೆ. ರೈತ ತನ್ನ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ಮೊಬೈಲ್‌ಫೋನ್‌ನಲ್ಲಿ ಸೆರೆ ಹಿಡಿದು ಅಲ್ಲಿಂದಲೇ ಪೋರ್ಟಲ್‌ಗೆ ಅಪ್‌ ಲೋಡ್ ಮಾಡುವುದು, ವಿದ್ಯಾಸಿರಿ, ಧಾನ್ಯಸಿರಿ ಯೋಜನೆಗಳನ್ನು ಬಿಂಬಿಸುವಂತಹದನ್ನುನಿರ್ಮಾಣ ಮಾಡಲಾಗುತ್ತಿದೆ. ವಿಶೇಷವಾಗಿ ಏಕ ಬೆಳೆಯ ಬದಲಿಗೆ ಸಮಗ್ರ ಕೃಷಿಗೆ ಒತ್ತು ಕೊಡುವಂತಹ ರೈತ ಎಲ್ಲ ಬೆಳೆಗಳನ್ನು ಬಾಚಿಕೊಂಡು ನಿಂತಿರುವಂತಹ ದೃಶ್ಯ ಸ್ತಬ್ಧಚಿತ್ರದಲ್ಲಿ ಆಕರ್ಷಿಯವಾಗಿರಲಿದೆ. ಅದೇ ರೀತಿ ಪರಿಸರ ಜಾಗೃತಿ ಮೂಡಿಸಲು ಮರಗಳಿಗೆ ಕೊಡಲಿಯೇಟು ಬೇಡ,ನೆರಳಿಗೆ ಏನು ಮಾಡುವಿರಾ ಎನ್ನುವಂತಹ ಶೀರ್ಷಿಕೆಯಡಿ ನಿರ್ಮಾಣ ಮಾಡಲಾಗುತ್ತಿದೆ. ಮರಗಳಿಂದ ಸಿಗುವ ಆಮ್ಲಜನಕ, ಹವಾಮಾನ ಸೇರಿದಂತೆ ಇನ್ನಿತರ ವಿಚಾರಗಳನ್ನು ಬಿಂಬಿಸುವಂತಹ ಮಾದರಿಯಾಗಿದೆ.

ಮಳಿಗೆ ಒಳಗೆ ತಯಾರಿಕೆ:

ಬಂಡೀಪಾಳ್ಯದಲ್ಲಿ ಸ್ತಬ್ಧಚಿತ್ರ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿ ಮಳೆಬಂದಾಗ ಪೇಂಟ್ ಹಾಳಾಗುತ್ತಿದ್ದವು.ಆದರೆ, ಈ ಬಾರಿ ಮಳೆ ಬಂದರೂ ಯಾವುದೇ ತೊಂದರೆಯಾಗದಂತೆ ಮಳಿಗೆ ಒಳಗೆ ಮಾಡಲಾಗುತ್ತಿದೆ. ವಿಶಾಲವಾದ ಜಾಗದಲ್ಲಿ ಲಾರಿಗಳನ್ನು ನಿಲ್ಲಿಸಿಕೊಂಡು ಸ್ತಬ್ಧಚಿತ್ರಮಾಡಲಾಗುತ್ತಿದೆ. ಮಳೆ ಬಂದರೂ ಸಣ್ಣ ಹನಿ ಬೀಳದಂತೆ ಸುರಕ್ಷಿತವಾಗಿ ಇರಲಿದೆ. ಜಂಬೂಸವಾರಿ ದಿನಂದು ವಸ್ತು ಪ್ರದರ್ಶನದಿಂದ ಹೊರಟು ಅರಮನೆಯನ್ನು ಪ್ರವೇಶ ಮಾಡಲಿದೆ. ಅಂದು ಕೊನೆಯ ಟಚ್‌ಕೊಡಲು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

Key words: Mysore Dasara -CITB – Crop Survey Crop Survey

website developers in mysore