ದಸರಾ ಆಚರಣೆಯಿಂದ ಅನಾಹುತ ಆದ್ರೆ ನಿಮ್ಮ ಮೇಲೆ ಕೇಸ್ ಹಾಕ್ತೇವೆ- ಸಿಎಂಗೆ ಪತ್ರದ ಮೂಲಕ ಎಚ್ಚರಿಕೆ….

ಮೈಸೂರು,ಅಕ್ಟೋಬರ್,7,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳ ಸಾಂಪ್ರದಾಯಕವಾಗಿ ಸರ್ಕಾರ ಆಚರಿಸಲು ಮುಂದಾಗಿದ್ದು, ಆದರೂ ಸಹ ಜಂಬೂ ಸವಾರಿ ವೇಳೆ ಎರಡು ಸಾವಿರ ಜನರಿಗೆ ಅವಕಾಶ ನೀಡಲು ಚಿಂತನೆ ನಡೆಸಿದೆ.

ಈ ಮಧ್ಯೆ ದಸರಾ ಆಚರಣೆಯಿಂದ  ಅನಾಹುತ ಉಂಟಾದರೆ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ಸರ್ಕಾರಕ್ಕೆ ಮೈಸೂರು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನುಮೋಹನ್ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸಿಎಂಗೆ ಪತ್ರ ಬರೆದಿರುವ ಭಾನುಮೋಹನ್, ನಾಡಹಬ್ಬ ದಸರಾ ಅರಮನೆಯವರಿಗೆ ಸೀಮಿತವಾಗಿರಲಿ. ಇದರಲ್ಲಿ ಸರ್ಕಾರ ಮೂಗು ತೂರಿಸುವುದು ಸರಿಯಲ್ಲ. ದಸರಾ ಆಚರಣೆಯಿಂದ  ಅನಾಹುತ ಉಂಟಾದರೆ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ರಣಕೇಕೆ ಹಾಕುತ್ತಿದೆ. ನಾಡಹಬ್ಬ ದಸರಾವನ್ನು ಅರಮನೆಯವರೇ ಸಾಂಪ್ರದಾಯಿಕವಾಗಿ ಆಚರಿಸಿಕೊಳ್ಳಲಿ. ಸದ್ಯ ಈ ಆಚರಣೆಗೆ ಯಾವ ಸಚಿವರು ಹಾಗೂ ಸಾರ್ವಜನಿಕರು ಆಗಮಿಸುವುದು ಬೇಡ. ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನ ಸೇರಿಸಿ ದಸರಾ ಆಚರಣೆ ಮಾಡುವುದು ಸೂಕ್ತವಲ್ಲ ಎಂದು ಭಾನುಮೋಹನ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.mysore-dasara-case-warning-cm-letter-environmental-protection-committee

ಹಾಗೆಯೇ ಒಂದು ವೇಳೆ ಸರ್ಕಾರ ತಮ್ಮ ನಿಲುವಿಗೆ ಬದ್ಧವಾಗಿ ಜನರನ್ನು ಸೇರಿಸಿ ಆಚರಣೆ ಮಾಡಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಜವಾಬ್ದಾರರಾಗಬೇಕಾಗುತ್ತದೆ. ದಸರಾ ಆಚರಣೆ ವೇಳೆ ತೊಂದರೆ ಉಂಟಾದರೇ ಈ ಬಗ್ಗೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದಾಗಿ ಭಾನುಮೋಹನ್ ಎಚ್ಚರಿಕೆ ನೀಡಿದ್ದಾರೆ.

Key words: mysore-dasara- case- Warning- CM- letter – Environmental Protection Committee