ಅರಮನೆ ಅಂಗಳದಲ್ಲಿ ಮಾವುತ, ಕಾವಾಡಿಗಳ ಕುಟುಂಬಕ್ಕೆ ಉಪಹಾರ ಕೂಟ: ಸ್ವತಹ ತಾವೇ ತಿಂಡಿ ಬಡಿಸಿದ ಸಂಸದೆ ಶೋಭಾ ಕರಂದ್ಲಾಜೆ..

Promotion

ಮೈಸೂರು,ಅ,7,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಬಂದಿರುವ ಗಜಪಡೆ ಆನೆಗಳ ಮಾವುತರು ಕಾವಾಡಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಉಪಹಾರ ಕೂಟ ಆಯೋಜಿಸಿದ್ದರು.

ಅರಮನೆ ಅಂಗಳದಲ್ಲಿ ಮಾವುತ ಕಾವಡಿ ಕುಟುಂಬಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಉಪಹಾರ ಕೂಟ ಆಯೋಜನೆ ಮಾಡಲಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ಅವರು ಕಾವಾಡಿ ಕುಟುಂಬದವರಿಗೆ ಸ್ವತಹ ತಾವೇ ತಿಂಡಿ ಬಡಿಸಿದರು.   ಸಂಸದೆ ಶೋಭಾ ಕಂರದ್ಲಾಜೆ ಜೊತೆ ಸಚಿವ ಸೋಮಣ್ಣ ಕೂಡ ಮಾವುತರಿಗೆ ಉಪಹಾರ ಬಡಿಸಿ ಸತ್ಕರಿಸಿದರು. ಈ ವೇಳೆ ಅಧಿಕಾರಿಗಳು, ಮುಖಂಡರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ, ಅಂಬಾರಿಗೆ ಉಳಿದಿರುವುದು‌‌ ಒಂದೇ ದಿನ. ಮಾವುತರಿಗೆ ಪ್ರತಿ ವರ್ಷ ಉಪಹಾರ ಕೂಟ ಆಯೋಜನೆ ಮಾಡಲಾಗುತ್ತಿದೆ. ಸಣ್ಣ ಪುಟ್ಟ ದೋಷಗಳು ಆಗುವುದು ಸಹಜ. ನಾಳೆ ನಡೆಯಲಿರುವ ದಸರಾಕ್ಕೆ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು.

ನಂತರ ಸಂಸದೆ ಶೋಭಕರಂದ್ಲಾಜೆ  ಮಾತನಾಡಿ, ಕಾವಾಡಿಗರಿಗೆ ಮಾವುತರಿಗೆ ಭತ್ಯೆ ಸಿಗುವಂತೆ ಮಾಡುತ್ತೇವೆ. ಸರ್ಕಾರದಿಂದ ಸವಲತ್ತು‌ ಸಿಗಲಿದೆ. ಈ ಬಗ್ಗೆ ಸರ್ಕಾರ ಜೊತೆ ಮಾತನಾಡುತ್ತೇನೆ.

Key words: mysore dasara-  breakfast party –Mavuta- Kavadi family – palace  -MP-Shobha Karandlaje