ಮೈಸೂರು ದಸರಾ ಮಹೋತ್ಸವ: ಅರಮನೆ ಆವರಣದಲ್ಲಿ ಫಿರಂಗಿ ತಾಲೀಮು…

ಮೈಸೂರು,ಸೆ,3,2019(www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಜಿಲ್ಲಾಡಳಿತದಿಂದ ಸಿದ್ಧತಾ ಕಾರ್ಯಗಳು ನಡೆಯುತ್ತಿದೆ. ಈ ನಡುವೆ ಇಂದು  ಅರಮನೆ ಆವರಣದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಗಳಿಂದ ಫಿರಂಗಿ ತಾಲೀಮು ನಡೆಯಿತು.

ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಗಳು  ಮೂರು ಫಿರಂಗಿಗಳಿಂದ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಿದರು. ನಾಡಹಬ್ಬದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾದ ಜಂಬೂಸವಾರಿಯಲ್ಲಿ ಪುಷ್ಪಾರ್ಚನೆ ಸಲ್ಲಿಸುವ ವೇಳೆ ರಾಷ್ಟ್ರಗೀತೆ ಮುಗಿಯುವ ಅವಧಿಯ ಒಳಗೆ 21 ಕುಶಲತೋಪು ಹಾರಿಸುವ ಸಂಪ್ರದಾಯವಿದೆ. ಗಜಪಡೆಗೆ ಭಾರಿ ಶಬ್ಧ  ಪರಿಚಯ ಮಾಡಿಸಲು ಸಿಡಿಮದ್ದುಗಳನ್ನ ಸಿಡಿಸಲು ಪಿರಂಗಿಗಳು ಬಳಸಲಾಗುತ್ತಿದೆ. ಜಂಬೂಸವಾರಿ ವೇಳೆ ಗಜಪಡೆಗಳು ಸಿಡಿಮದ್ದಿನ ಸದ್ದಿಗೆ ಬೆದರದಂತೆ ನೋಡಿಕೊಳ್ಳಲು ಈ ಸಿಡಿಮದ್ದು ಸಿಡಿಸಲಾಗುತ್ತದೆ.

ಹೀಗಾಗಿ ಪಿರಂಗಿ ತಾಲೀಮು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದ್ದು,  ಪ್ರತಿದಿನ ಮೂರು  ಹಂತದಲ್ಲಿ ತಾಲೀಮು ನಡೆಯುತ್ತದೆ.  ಇಂದು ಸಹ ಅರಮನೆ ಆವರಣದಲ್ಲಿ ಪಿರಂಗಿ ತಾಲೀಮು ಜೋರಾಗಿತ್ತು.  30ಕ್ಕೂ ಹೆಚ್ಚು ಸಿಬ್ಬಂದಿಗಳು ಪಿರಂಗಿ ತಾಲೀಮು ಪಾಲ್ಗೊಂಡಿದ್ದರು. ನಿನ್ನೆಯಷ್ಟೆ ನಗರ ಪೊಲೀಸರಿಗೆ ಪಿರಂಗಿಗಳು ಹಸ್ತಾಂತರಗೊಂಡಿದ್ದವು.

Key words: Mysore- Dasara- Artillery -workout – palace