ಮೈಸೂರು ದಸರಾ: ಸಶಸ್ತ್ರ ಮೀಸಲು ಪೊಲೀಸ್ ಪಡೆಯಿಂದ ಕುಶಾಲತೋಪು ಸಿಡಿಸುವ ತಾಲೀಮು…..

ಮೈಸೂರು,ಅಕ್ಟೋಬರ್,15,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸರಳವಾಗಿ ಆಚರಿಸಲು ಸಾಂಸ್ಕೃತಿಕ ನಗರಿಯಲ್ಲಿ ಸಿದ್ಧತೆ ನಡೆಯುತ್ತಿದ್ದು, ದಸರಾ ಉದ್ಘಾಟನೆಗೆ ಕೇವಲ ಎರಡೇ ದಿನಗಳು ಬಾಕಿ ಇವೆ. ಈ ನಡುವೆ ಜಂಬೂ ಸವಾರಿ ವೇಳೆ ನಡೆಯುವ ಕುಶಾಲತೋಪು ಸಿಡಿಸುವ ಕಾರ್ಯಕ್ಕೆ ಇಂದು ತಾಲೀಮು ನಡೆಯಲಾಯಿತು.jk-logo-justkannada-logo

ಆರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯಿಂದ ಕುಶಾಲತೋಪು ಸಿಡಿಸುವ  ತಾಲೀಮು ನಡೆಸಲಾಯಿತು. ವಿಜಯ ದಶಮಿಯಂದು ಜಂಬೂ ಸವಾರಿ ಹೊರಡುವ ಮುನ್ನ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ.  ಕುಶಾಲತೋಪು ಸಿಡಿಸುವ ವೇಳೆ ಆನೆಗಳು, ಕುದುರೆಗಳು ಬೆದರಂತೆ ನೋಡಿಕೊಳ್ಳುವುದು ಈ ತಾಲೀಮಿನ ಉದ್ದೇಶವಾಗಿದೆ.mysore-dasara-armed-reserve-police-force-kushalathopu-workout

ಆನೆಗಳು, ಕುದುರೆಗಳು ಫಿರಂಗಿ ಶಬ್ದಕ್ಕೆ ಹೊಂದಿಕೊಳ್ಳಲು ಈ ಕುಶಾಲತೋಪು ಸಿಡಿಸುವ ತಾಲೀಮು ನಡೆಯುತ್ತಿದ್ದು, ಕುಶಾಲತೋಪು ಸಿಡಿಸಲು 7 ಫಿರಂಗಿ ಗಾಡಿಗಳ ಬಳಕೆ ಮಾಡಲಾಗುತ್ತದೆ. ಇಂದು ಸಿಎಆರ್‌ನ 30 ಸಿಬ್ಬಂದಿ ಕುಶಾಲತೋಪು ಪ್ರಾಕ್ಟೀಸ್ ನಲ್ಲಿ ಭಾಗಿಯಾಗಿದ್ದರು.

Key words: Mysore Dasara-  Armed reserve police force- kushalathopu-workout.