ಮೈಸೂರು ದಸರಾಗೆ ದಿನಗಣನೆ: ಸೆ.11 ರಂದು ಮತ್ತೊಂದು ಮಹತ್ವದ ಸಭೆ…

ಮೈಸೂರು,ಸೆಪ್ಟಂಬರ್,9,2020(www.justkannada.in):  ಕೊರೋನಾ ಹಿನ್ನೆಲೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಈ ಸಂಬಂಧ ಇದೇ ಸೆಪ್ಟಂಬರ್ 11 ಕ್ಕೆ ಮೈಸೂರಿನಲ್ಲಿ ಮತ್ತೊಂದು ಮಹತ್ವದ ಸಭೆ ನಡೆಯಲಿದೆ.jk-logo-justkannada-logo

ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ಕರೆ ನೀಡಿದ್ದು ಅದ್ದೂರಿತನ ಮತ್ತು ಜನಸಂದಣಿಗೆ ಬ್ರೇಕ್ ಹಾಕಲಾಗಿದೆ. ಜನಾಭಿಪ್ರಾಯದಂತೆ ಸರಳ ಮತ್ತು ಸಾಂಪ್ರದಾಯಿಕ ದಸರಾ  ಆಚರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂಬಂಧ ಸೆಪ್ಟಂಬರ್ 11 ರಂದು ಜಿಲ್ಲೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ  ಮತ್ತೊಂದು ಮಹತ್ವದ ಸಭೆ ನಡೆಯಲಿದ್ದು, ಗಜ ಪಯಣ, ದಸರಾ ಉದ್ಘಾಟನಾ ಸಮಯ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳ ಬಗ್ಗೆ ಚರ್ಚಿಸಲಾಗುತ್ತದೆ.

ದಸರಾ ಉದ್ಘಾಟನೆಗೆ ಕೊರನಾ ವಾರಿಯರ್ಸ್ ಆಯ್ಕೆಗೆ ತಲೆನೋವು…

ಈ ಬಾರಿ ಕೊರನಾ ವಾರಿಯರ್ಸ್ ರಿಂದ ದಸರಾ ಉದ್ಘಾಟನೆಗೆ ಸರ್ಕಾರ ನಿರ್ಧಾರ  ಮಾಡಿದ್ದು ಇದೀಗ ದಸರಾ ಕಾರ್ಯಕಾರಿಣಿ ಸಮಿತಿಗೆ ಉದ್ಘಾಟಕರ ಆಯ್ಕೆಯೇ ತಲೆನೋವು ಶುರುವಾಗಿದೆ. ಸೆಪ್ಟೆಂಬರ್ 11 ರಂದು ನಡರಯುವ ಸಭೆಯಲ್ಲಿಯೇ ಉದ್ಘಾಟಕರು ಅಂತಿಮ ಆಗಬೇಕು.mysore-dasara-another-important-meeting-sep-11th

ಐದು ಕ್ಷೇತ್ರದಿಂದ ಕೊರೊನಾ ವಾರಿಯರ್ಸ್ ಗಳನ್ನ ಉದ್ಘಾಟಕರಾಗಿ ಆಯ್ಕೆ ಮಾಡಬೇಕಿದ್ದು ಕೊರೋನಾ ವಾರಿಯರ್ಸ್ ಗಳ ಆಯ್ಕೆಗೆ ಇರುವ ಮಾನದಂಡಗಳು ಏನು ..? ಯಾವ ಆಧಾರಮೇಲೆ ಉದ್ಘಾಟಕರನ್ನು ಆಯ್ಕೆ ಮಾಡ್ತಾರೆ.?  ಎಂಬ ಈ ಆಯ್ಕೆಯೇ ಹೆಚ್ವು ತಲೆನೋವು ತರಿಸಿದೆ.

Key words: Mysore Dasara-Another- important- meeting -sep 11th.