ಮೈಸೂರು ದಸರಾ-2020: ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಒತ್ತಾಯ….

kannada t-shirts

ಮೈಸೂರು,ಸೆಪ್ಟಂಬರ್,16,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಕ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು ಈ ಮಧ್ಯೆ ದಸರಾದಲ್ಲಿ ಮೈಸೂರಿನ ಅರಮನೆ ವೇದಿಕೆಯಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವಂತೆ ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಮಿತಿ ಒತ್ತಾಯಿಸಿದೆ.jk-logo-justkannada-logo

ಈ ಸಂಬಂಧ ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಮಿತಿ ಸದಸ್ಯರು, ಮೈಸೂರು ದಸರಾ ಅರಮನೆ ವೇದಿಕೆಯಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೋವಿಡ್ ನೆಪವೊಡ್ಡಿ ರಂಗಮಂದಿರಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ರದ್ದು ಪಡಿಸಿದ್ದಾರೆ. ಸರ್ಕಾರದ ಈ ನಿಲುವು ಖಂಡನೀಯ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಕಲಾವಿದರನ್ನು ಕಾಪಾಡುವುದು ಸರ್ಕಾರದ ಕರ್ತವ್ಯ. ಕಳೆದ 7 ತಿಂಗಳಿನಿಂದ ಲಾಕ್ ಡೌನ್ ಮತ್ತು ಕೊರೋನಾದಿಂದ ಕಲಾವಿದರು ತೊಂದರೆಗೆ ಸಿಲುಕಿದ್ದಾರೆ. ವರಮಾನವಿಲ್ಲದೆ ಕಲಾವಿದರು ಹಾಗೂ ಅವರ ಕುಟುಂಬ ಬೀದಿಗೆ ಬಿದ್ದಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಸರಳ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು. ಅದನ್ನು ಬಿಟ್ಟು ಹೊರಗಡೆ ಕಲಾವಿದರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ  ಎಂದು ಎಚ್ಚರಿಕೆ ನೀಡಿದ್ದಾರೆ.Mysore Dasara 2020-Urging - government –allow- local- artists.

ಹಿಂದಿನಿಂದಲೂ ಕಲಾಮಂದಿರ, ಕಿರುರಂಗಮಂದಿರ, ಜಗನ್ ಮೋಹನ್ ಪ್ಯಾಲೇಸ್ , ಚಿಕ್ಕಗಡಿಯಾರ , ಗಾಣಭಾರತಿ , ವೀಣೆ ಶೇಷಣ್ಣ ಭವನ , ಪುರಭವನ, ನಾದಬ್ರಹ್ಮ  ಸಂಗೀತ ಸಭಾಂಗಣ ಸೇರಿ 7 ವೇದಿಕೆಗಳಲ್ಲಿ ನವರಾತ್ರಿಯ ಪ್ರತಿದಿನ ಮಾಡುತ್ತಿದ್ದರು. ನಾವು ಕಲೆಯನ್ನೇ ನಂಬಿ ಜೀವಿಸುತ್ತಿದ್ದೇವೆ ಆದ್ದರಿಂದ ನಮಗೆ ಸರ್ಕಾರ ಕಾರ್ಯಕ್ರಮ ಕೊಟ್ಟು ಅವಕಾಶ ನೀಡಬೇಕು. ಈ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಸಂಸ್ಕೃತಿ ಇಲಾಖೆ ಸಚಿವರು, ಹಾಗೂ ಸ್ಥಳೀಯ ಎಲ್ಲಾ ಶಾಸಕರು ಹಾಗೂ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಎಲ್ಲರಿಗೂ ನಾವು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದೇವೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ಪುಟ್ಟಸ್ವಾಮಿ  ಹೇಳಿದರು.

Key words: Mysore Dasara 2020-Urging – government –allow- local- artists.

website developers in mysore