ಮೈಸೂರು ದಸರಾ ಸಮೀಪ ಹಿನ್ನೆಲೆ: ರಸ್ತೆ ಇಕ್ಕೆಲಗಳ ಪುಟ್ ಪಾತ್ ತೆರವುಗೊಳಿಸಿದ ಪೊಲೀಸರು….

Promotion

ಮೈಸೂರು,ಅಕ್ಟೋಬರ್,7,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾಗಿರುವ ಟ್ರಾಫಿಕ್ ಪೊಲೀಸರು ಇಂದು ರಸ್ತೆಯ ಇಕ್ಕೆಲಗಳ ಪುಟ್ ಪಾತ್ ತೆರವುಗೊಳಿಸಿದರು.mysore-dasara-2020-traffic-police-cleared-road-footpath

ನರಸಿಂಹರಾಜ ಸಂಚಾರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ದಿವಾಕರ್ ಸೂಚನೆ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ರಘು ನೇತೃತ್ವದಲ್ಲಿ ನರಸಿಂಹರಾಜ ಟ್ರಾಫಿಕ್ ಪೊಲೀಸರು  ಪುಟ್ ಪಾತ್ ತೆರವು ಕಾರ್ಯಾಚರಣೆ ನಡೆಸಿದರು. ನಗರದ ಕೆಸರೆ ಮುಖ್ಯರಸ್ತೆಯಲ್ಲಿನ ಫುಟ್‌ಪಾತ್ ಮೇಲಿನ ಗೂಡಂಗಡಿಗಳು ಸೇರಿದಂತೆ ಫುಟ್‌ಪಾತ್ ಮೇಲೆ ನಿಂತಿದ್ದ ವಾಹನಗಳನ್ನು ಪೊಲೀಸರು ತೆರವುಗೊಳಿಸಿದರು. mysore-dasara-2020-traffic-police-cleared-road-footpath

ಈ ಮೂಲಕ ಪಾದಚಾರಿಗಳ ಹಾಗೂ ವಾಹನಗಳ  ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಮೈಸೂರು ದಸರಾ ಹಿನ್ನೆಲೆ, ಜನಜಂಗುಳಿ, ಸಾರ್ವಜನಿಕರ ಓಡಾಟ ಹೆಚ್ಚಾಗಿರುತ್ತದೆ. ಹೀಗಾಗಿ  ಪುಟ್ ಪಾತ್ ನಲ್ಲಿದ್ದ ಅಂಗಡಿಗಳನ್ನ ತೆರವುಗೊಳಿಸಿದ್ದಾರೆ.

Key words: mysore dasara-2020- traffic-police -cleared – road – footpath.