ಮೈಸೂರು ದಸರಾ-2019: ಸೈಕ್ಲೋತಾನ್ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ  ಚಾಲನೆ…..

kannada t-shirts

ಮೈಸೂರು ಅ,2,2019(www.justkannada.in): ಮೈಸೂರು ದಸರಾ ಮಹೋತ್ಸವ ಹಿನ್ನಲೆ ಕ್ರೀಡಾ ಉಪ‌ ಸಮಿತಿಯಿಂದ ಆಯೋಜಿಸಲಾಗಿದ್ದ ಸೈಕ್ಲೋತಾನ್ ಸ್ಪರ್ಧೆಗೆ ಹೊರವಲಯದ ಬನ್ನೂರು ಜಂಕ್ಷನ್ ನಲ್ಲಿ ವಸತಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ಅವರು ಚಾಲನೆ ನೀಡಿದರು.

ಚಾಲನೆ ನೀಡಿದ ಬಳಿಕ ಸೈಕ್ಲೋತಾನ್ ಆಯೋಜನೆ ಕುರಿತು ಮಾತನಾಡಿದ  ಸಚಿವ ವಿ.ಸೋಮಣ್ಣ, ದಸರಾ ಉತ್ಸವದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕಾರ್ಯಕ್ರಮಗಳಲ್ಲಿ ಅವಕಾಶ ನೀಡುತ್ತಿದ್ದು, ಇಂದು ಸೈಕಲ್ ಸವಾರರಿಗೆ ಸ್ಪರ್ಧೆ ಮಾಡಿರುವುದು ಉತ್ತಮವಾಗಿದೆ. ಕ್ರೀಡೆ ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸುತ್ತದೆ ಹಾಗೂ ನಮ್ಮಲ್ಲಿನ‌ ಚಾತುರ್ಯತೆ, ಬುದ್ದಿವಂತಿಕೆಯನ್ನು ಹೊರ ತರಲಿದೆ ಎಂದು ತಿಳಿಸಿದರು.

ಕ್ರೀಡೆಯಿಂದ ಉತ್ತಮ ಆರೋಗ್ಯ ವೃದ್ದಿಸುತ್ತದೆ. ಸೈಕಲ್ ತುಳಿಯುವುದು ಅಂಗಾಂಗಗಳ ಚಲನೆಗಳನ್ನು ವೇಗಮಾಡಲಿದ್ದು ಗಟ್ಟಿ ಮುಟ್ಟಾಗಿರಬಹುದು. ಸ್ಪರ್ಧೆಯಲ್ಲಿ ಯಾರೂ ಆತುರ ಪಡಬೇಡಿ. ಸೋಲು‌ ಗೆಲುವು ಒಂದೇ ನಾಣ್ಯದ ಎರಡು ಮುಖಗಳುಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಗೆಲುವು ಅದೇ ಒಂದು ಸಾಧನೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ಯಶಸ್ವಿಯಾಗಿ ಸಾಗಿರಿ ಎಂದು ಸಚಿವ ವಿ.ಸೋಮಣ್ಣ ಶುಭ ಹಾರೈಸಿದರು.

ಸ್ಪರ್ಧೆಯಲ್ಲಿ ಸುಮಾರು 180 ಪುರುಷರು ಭಾಗಿಯಾಗಿದ್ದು 100 ಕಿ.ಮೀ ಸೈಕಲ್ ಸವಾರಿ ಮಾಡಬೇಕಾಗುತ್ತದೆ. ಬನ್ನೂರು ಜಂಕ್ಷನ್  ನಿಂದ ಪ್ರಾರಂಭಿಸಿ ಟಿ.ನರಸೀಪುರ ಮೂಲಕ ಮೂಗೂರು ತಲುಪಿ ಮತ್ತೆ ವಾಪಸ್ ಅದೇ ಮಾರ್ಗದಲ್ಲಿ ಬಂದು ಲಲಿತಾದ್ರಿಪುರ ಮೂಲಕ ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ಅಂತ್ಯವಾಗಲಿದೆ.

ಅದೇ ರೀತಿ ಸುಮಾರು 80 ಮಹಿಳೆಯರು ಮೂಗೂರಿನಿಂದ ಸೈಕಲ್ ಸವಾರಿ  ಪ್ರಾರಂಭಿಸಿ ಚಾಮುಂಡಿ ಬೆಟ್ಟದ ದೇವಿಕೆರೆ ತನಕ ಒಟ್ಟು 50 ‌ಕಿ.ಮೀ ತಲುಪಿಲಿದ್ದಾರೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 30,000/-, ದ್ವಿತೀಯ 25,000/-, ತೃತೀಯ 20,000/-, ನಾಲ್ಕನೇ 15,000/-, ಐದನೇ 10,000/-, ಆರನೇ 5,000/- ರೂಗಳ ನಗದು ಬಹುಮಾನ ನೀಡಲಾಗುವುದು.

ಈ ಸಂದರ್ಭದಲ್ಲಿ ಯುವ ಜನ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಕೆ.ಶ್ರೀನಿವಾಸ್, ಜಂಟಿ ನಿರ್ದೇಶಕ ಎಂ.ಎಸ್ ರಮೇಶ್, ಆಲನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಮ್ಮ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Key words: Mysore Dasara -2019:-Minister V Somanna – Cyclothan competition.

website developers in mysore