ನಾಡಹಬ್ಬ ದಸರಾ ಹಿನ್ನೆಲೆ: ಹೆಲಿಕಾಪ್ಟರ್ ಜಾಲಿ ರೈಡ್ ಗೆ ಹಸಿರು ನಿಶಾನೆ ತೋರಿದ್ರೂ ಸಚಿವ ಸಿ.ಟಿ ರವಿಗೆ ದಕ್ಕದ ಹಾರಾಡುವ ಭಾಗ್ಯ…

ಮೈಸೂರು,ಸೆ,28,2019(www.justkannada.in): ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಇಂದು ಹೆಲಿಕಾಪ್ಟರ್ ಜಾಲಿ ರೈಡ್ ಗೆ ಚಾಲನೆ ನೀಡಲಾಯಿತು.

ನಗರದ  ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ  ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೆಲಿಕಾಪ್ಟರ್ ಜಾಲಿ ರೈಡ್ ಗೆ ಹಸಿರು ನಿಶಾನೆ ತೋರಿದರು. ಹೆಲಿಕಾಪ್ಟರ್ ಜಾಲಿರೈಡ್ ಗೆ ಚಾಲನೆ ನೀಡಿದರೂ  ಸಚಿವ ಸಿಟಿ ರವಿ ಅವರಿಗೆ ಆಕಾಶದಲ್ಲಿ ಹಾರಾಡುವ ಭಾಗ್ಯ ದಕ್ಕಲಿಲ್ಲ.

ಹೌದು, ನಿಂತಿದ್ದ ಹೆಲಿಕ್ಯಾಪ್ಟರ್ ರೈಡ್ ಗೆ ಸಚಿವ ಸಿ.ಟಿ ರವಿ ಚಾಲನೆ ನೀಡಿದರು. ಹಸಿರು ನಿಶಾನೆ  ತೋರಿದ ಬಳಿಕ  ಹೆಲಿಕ್ಯಾಪ್ಟರ್ ಹತ್ತಿ ಕೆಲ ಸಮಯ ಕಾದು ಕುಳಿತರೂ ಸಚಿವ ಸಿ,ಟಿ ರವಿ ಅವರಿಗೆ  ಹಾರಾಡುವ ಭಾಗ್ಯ ಸಿಗಲಿಲ್ಲ.  ಸಿಂಗಲ್ ಇಂಜಿನ್ ಎಂಬ ಕಾರಣಕ್ಕೆ ಹಾಗೂ ಸಂಪುಟದ ಸಚಿವರಿಗೆ ಹೆಚ್ಚಿನ ಭದ್ರತೆ ಇರುವ ಕಾರಣ ಹೆಲಿಕಾಪ್ಟರ್ ನಿಂದ ಕೆಳಗಿಳಿದರು.

ಅಧಿಕಾರಿಗಳು ಹೆಲಿಕ್ಯಾಪ್ಟರ್ ಜವಾಬ್ದಾರಿ ಹೊರದೆ  ಅವ್ಯವಸ್ಥೆ ಉಂಟಾಗಿದ್ದು  , ಸಚಿವರು ಸ್ಥಳಕ್ಕೆ ಬಂದರೂ ಅಧಿಕಾರಿಗಳು ಅತ್ತ ಸುಳಿಯಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಧಿಕಾರಿಗಳ ಅವ್ಯವಸ್ಥೆ ಬಗ್ಗೆ  ಏನು ಪ್ರತಿಕ್ರಿಯೆ ನೀಡದೆ ಸಚಿವ. ಸಿಟಿ ರವಿ, ಸಂವಹನದ ಕೊರತೆಯಿಂದಾಗಿ ಹೀಗಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

Key words: mysore Dasara-2019-Helicopter -Jolly Ride-minister –CT ravi