ಇ -ತ್ಯಾಜ್ಯ ದಿಂದ ಮುಕ್ತವಾಗಿ ಹಸಿರುನಗರವಾಗುವತ್ತ ಸಾಂಸ್ಕೃತಿಕ ನಗರಿ ಮೈಸೂರು…

kannada t-shirts

ಮೈಸೂರು,ಸೆ,14,2019(www.justkannada.in): ಸ್ವಚ್ಛತೆಗೆ ಹೆಸರಾಗಿರುವ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಇ -ತ್ಯಾಜ್ಯ ದಿಂದ ಮುಕ್ತವಾಗಿ ಹಸಿರುನಗರವಾಗುವತ್ತ ಹೆಜ್ಜೆ ಹಾಕುತ್ತಿದೆ. ಹೌದು, ಮೈಸೂರು ಮಹಾನಗರ ಪಾಲಿಕೆ ಈಗಾಗಲೇ ಸಾರ್ವಜನಿಕರಿಂದ  ಮನೆಯಲ್ಲಿನ ಘನ ತ್ಯಾಜ್ಯವಸ್ತುಗಳನ್ನ ಸಂಗ್ರಹಿಸುತ್ತಿದ್ದು, ಇನ್ನು ಮುಂದೆ ಬಳಸಿ  ತಿರಸ್ಕರಿಸಿದ ಇಲೆಕ್ಟ್ರಾನಿಕ್ ವಸ್ತುಗಳನ್ನ ಪ್ರತ್ಯೇಕವಾಗಿ ಸಂಗ್ರಹಿಸಲು ಮುಂದಾಗಿದೆ.

ಈ ಸಂಬಂಧ ಮೈಸೂರು ಮಹಾನಗರ ಪಾಲಿಕೆ ಹಾಗೂ ಇತರೆ ಖಾಸಗಿ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇದೆ ಸೆಪ್ಟಂಬರ್  l7ರಂದು ಇ ಟು ಜಿ ಅಭಿಯಾನ ನಡೆಸಲಾಗುತ್ತಿದೆ.  ಈ ವಿಶೇಷ ಅಭಿಯಾನಕ್ಕೆ ಒಟ್ಟು 235 ತಳ್ಳುವ ಗಾಡಿಗಳು, 8OO ಮಂದಿ ಪೌರ ಕಾರ್ಮಿಕರನ್ನ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ ಪೌರ ಕಾರ್ಮಿಕರ ಅಗತ್ಯ ತರಬೇತಿ ನೀಡಲಾಗಿದೆ. ಈ ಅಭಿಯಾನವನ್ನ ಮುಂದುವರಿಸಿಕೊಂಡು ಹೋಗಲಾಗುವುದು.

ಪಾಲಿಕೆ ಈಗಾಗಲೇ ಸಾರ್ವಜನಿಕರಿಂದ  ಮನೆಯಲ್ಲಿನ ಘನ ತ್ಯಾಜ್ಯವಸ್ತುಗಳನ್ನ ಸಂಗ್ರಹಿಸುತ್ತಿದ್ದು, ಈಗ ಬಳಸಿ ತಿರಸ್ಕರಿಸಿದ ಇಲೆಕ್ಟ್ರಾನಿಕ್ ವಸ್ತುಗಳನ್ನ ಪ್ರತ್ಯೇಕವಾಗಿ ಸಂಗ್ರಹಿಸಲು ಮುಂದಾಗಿದೆ. ಟ್ಯೂಬ್ ಲೈಟ್,  ಚಾರ್ಜರ್,  ಮೊಬೈಲ್,  ಗಣಕಯಂತ್ರ,  ಇತ್ಯಾದಿ ಬಳಕೆಯಾಗದ ವಸ್ತುಗಳನ್ನ ಸಂಗ್ರಹಿಸಿ ನಗರವನ್ನ ಹಸಿರುಕರಣ ಮಾಡಲು  ಪಾಲಿಕೆ ಮುಂದಾಗಿದೆ.

ಈ  ಕಾರ್ಯಕ್ಕೆ ಮೈಸೂರು ನಗರ ಜನತೆ,  ಸಂಘ ಸಂಸ್ಥೆಗಳು,  ಶಿಕ್ಷಣ ಸಂಸ್ಥೆಗಳು  ಕೈಜೋಡಿಸುವಂತೆ ಶಾಸಕ ಎಸ್. ಎ ರಾಮದಾಸ್ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ತ ಹೆಗ್ಡೆ ಮನವಿ  ಮಾಡಿದ್ದಾರೆ.

Key words: Mysore – cultural city – green city – from- e-waste.

website developers in mysore