ಕೊರೊನಾ 3ನೇ ಅಲೆ ಆತಂಕದ ನಡುವೆಯೇ ಮೈಸೂರಿಗೆ ನಿರಾಳ.

 

ಮೈಸೂರು, ಆ.14, 2021 : (www.justkannada.in news ) ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಶೇ.1 ರಷ್ಟು ಕೋವಿಡ್ ಪಾಸಿಟಿವಿಟಿ ರೇಟ್ ಕಾಯ್ದುಕೊಳ್ಳುವ ಮೂಲಕ ಜನತೆಗೆ ನಿರಾಳ ಮೂಡಿಸಿದೆ.

ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಲಿಸಿದ್ರೆ ಮೈಸೂರಿನಲ್ಲಿ ಸೋಂಕು ಇಳಿಕೆ. ಪ್ರತಿನಿತ್ಯ 10 ಸಾವಿರ ಟೆಸ್ಟ್, ಶೇ 1ರಷ್ಟು ಪಾಸಿಟಿವ್ ರೇಟ್. ಜುಲೈ 30 ರಿಂದ ಆ.5ರ ವರೆಗೆ 65000ಕ್ಕೂ ಹೆಚ್ಚು ಮಂದಿಗೆ ಟೆಸ್ಟ್. ಅದರಲ್ಲಿ ಕೇವಲ 897 ಮಂದಿಗೆ ಮಾತ್ರ ಪಾಸಿಟಿವ್. ಸದ್ಯ ಡೆತ್ ರೇಟ್ ನಲ್ಲೂ ಕೂಡಾ ಇಳಿಕೆ ಕಂಡಿರುವ ಮೈಸೂರು.

ಮೈಸೂರಿನಲ್ಲಿ 1122 ಕೊರೊನಾ ಪ್ರಕರಣಗಳು ಮಾತ್ರ ಆ್ಯಕ್ಟೀವ್. ಜಿಲ್ಲೆಯ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲು ಜಿಲ್ಲಾಡಳಿತ ಚಿಂತನೆ. ಆ ಮೂಲಕ ವೀಕೆಂಡ್ ಕರ್ಫ್ಯೂ ತೆರವು ಮಾಡುಲು ಜಿಲ್ಲಾಡಳಿತ ಮನವಿ. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಲಿರುವ ಜಿಲ್ಲಾಡಳಿತ.

ಜಿಲ್ಲಾಡಳಿತದ ಮನವಿಗೆ ಸರಕಾರ ಸ್ಪಂಧಿಸಿದಲ್ಲಿ, ಸದ್ಯದಲ್ಲೇ ಮೈಸೂರಿನಲ್ಲೂ ವೀಕೆಂಡ್ ಕರ್ಫ್ಯೂ ಮುಕ್ತ ಸಾಧ್ಯತೆ.

 

key words : Mysore-covid-positive-rate-decrees-weekend-curfew