‘ಬೆಂಕಿ’ ಪ್ರಕರಣ : ಕೋರ್ಟ್ ಕಲಾಪದಿಂದ ದೂರ ಉಳಿದ ಮೈಸೂರು ವಕೀಲರು…!

 

ಮೈಸೂರು, ಆ.21, 2019 (www.justkannada.in news ) : ಸರಕಾರಿ ಅಭಿಯೋಜಕರ ಚಿತಾವಣೆಯಿಂದ ನಗರದ ವಕೀಲರೊಬ್ಬರ ವಿರುದ್ದ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಬುಧವಾರ ಮೈಸೂರು ವಕೀಲರು ನ್ಯಾಯಾಲಯದ‌ ಕಲಾಪಗಳಿಂದ ದೂರ‌ ಉಳಿದ ಘಟನೆ ನಡೆದಿದೆ.

ನಗರದ ವಕೀಲ ಬೆಂಕಿ ಚಿದಾನಂದ್ ಎಂಬುವವರ ವಿರುದ್ದವೇ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಾಗಿರುವುದು.

ಈ ಸಂಬಂಧ ವಕೀಲರ ಸಂಘಕ್ಕೆ ಚಿದಾನಂದ ಪತ್ರ ಬರೆದು ಆರೋಪಿಸಿದ್ದರು. ಈ ಪತ್ರದಲ್ಲಿ ರಘು ಎಂಬುವವರಿಂದ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು. ಇದಕ್ಕೆ ಸರ್ಕಾರಿ ಅಭಿಯೋಜಕ ಶಿವಶಂಕರ್ ಅವರ ಕುಮ್ಮಕ್ಕು ಕಾರಣ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ವಕೀಲರ ಸಂಘ ಬುಧವಾರ ಕೋರ್ಟ್ ಕಲಾಪದಿಂದ ದೂರವಿರಲು ತೀರ್ಮಾನಿಸಿತು.
ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ವಕೀಲರ ಸಂಘದ ಉಪಾಧ್ಯಕ್ಷ ಶಿವಣ್ಣೇಗೌಡ ಹೇಳಿದಿಷ್ಟು…
ಚಿದಾನಂದ ಅವರ ದೂರಿನ ಮೇರೆಗೆ ಮೈಸೂರು ಜಿಲ್ಲಾ ವಕೀಲರ ಸಂಘ ಇಂದು ಸಭೆ ನಡೆಸಿತು. ಸಭೆಯಲ್ಲಿ ವಕೀಲರ ವಿರುದ್ಧದ ಸುಳ್ಳು ಮೊಕದ್ದಮ್ಮೆ ಕೈ ಬಿಡುವಂತೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಜತೆಗೆ ಈ ದೂರು ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಶಿವಶಂಕರ್ ಕುಮ್ಮಕ್ಕಿದೆ ಎಂದು ದೂರುದಾರ ವಕೀಲ ಚಿದಾನಂದ ಅವರು ಆರೋಪಿಸಿರುವ ಕಾರಣ ಈ ಬಗೆಗೂ ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗುವುದು. ಜತೆಗೆ ಸಿಸಿಟಿವಿ ಫೂಟೇಜ್ ಸಹ ಪರಿಶೀಲಿಸಲು ಕೋರಲಾಯಿತು ಎಂದರು.

key words : mysore-court-boycot-police-advocates