ಮೈಸೂರಿನಲ್ಲಿ ಮತ್ತೆ ಕೊರೋನಾ ಭೀತಿ: ಮಹಾರಾಷ್ಟ್ರದಿಂದ ಬಂದಿರುವವರ ಸಂಖ್ಯೆ ಹೆಚ್ಚಳ…..

kannada t-shirts

ಮೈಸೂರು,ಜೂ,6,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಕೊರಾನಾ ಭೀತಿ ಎದುರಾಗಿದೆ. ಹೌದು, ಮೈಸೂರಿಗೆ ಮಹಾರಾಷ್ಟ್ರದಿಂದ ಬಂದಿರುವರ ಸಂಖ್ಯೆ ಹಚ್ಚಳವಾಗಿದ್ದು ಹೀಗಾಗಿ ಮೈಸೂರಿಗೆ ಮಹಾ ಕಂಟಕ ಎದುರಾಗುವ ಸಾಧ್ಯತೆ ಇದೆ.mysore-corona-people-maharashtra

ಮೈಸೂರಿನಲ್ಲಿ ದಿನೇ ದಿನೇ  ಕ್ವಾರೆಂಟನ್ ಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಕ್ವಾರೆಂಟನ್ ಗಳ ಸಂಖ್ಯೆ 1132 ಜನಕ್ಕೆ ಏರಿಕೆಯಾಗಿದೆ. ಹೊರ ರಾಜ್ಯಗಳಿಂದ ಬಂದವರಿಂದಲೇ ಕೊರೋನಾ ಸೋಂಕು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆ ಹೊರ ರಾಜ್ಯದವರ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ಇಟ್ಟಿದೆ.

ಮಹಾರಾಷ್ಟ್ರದಿಂದ ಬಂದಿರುವವರ ಸಂಖ್ಯೆ ಹೆಚ್ಚಳ ಹಿನ್ನೆಲೆ ಇನ್ನಷ್ಟು ಪಾಸಿಟಿವ್ ‌ಪ್ರಕರಣಗಳು‌ ಬರುವ ಸಾಧ್ಯತೆ ಇದ್ದು, ಹೋಂ ಕ್ವಾರೆಂಟನ್ ನಲ್ಲಿ‌ ಇರುವರ ಮೇಲೂ ನಿಗಾ ವಹಿಸಲಾಗಿದೆ. ಈಗಾಗಲೆ ಮೈಸೂರಿನ ಒಂದು ಏರಿಯಾ ಕಂಟೇನ್ಮೆಂಟ್ ಝೂನ್ ಆಗಿದ್ದು, ಹುಣಸೂರು ತಾಲೂಕಿನ ಪೆಂಜಳ್ಳಿ ಗ್ರಾಮಕ್ಕೂ ದಿಗ್ಬಂಧನ ವಿಧಿಸಲಾಗಿದೆ. ಸದ್ಯ ಮೈಸೂರಿನಲ್ಲಿ 6 ಜನ ಸೋಂಕಿತರಿಗೆ ಚಿಕಿತ್ಸೆ ಮುಂದಿವರೆದಿದೆ.

Key words: Mysore-corona – people-Maharashtra.

website developers in mysore