ಕೊರೋನಾ ಹೆಚ್ಚಳ ಹಿನ್ನೆಲೆ: ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ವರ್ತಕರ ಸಂಘ ನಿರ್ಧಾರ…

ಮೈಸೂರು,ಜೂ,29,2020(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ನಡುವೆ ಬೆಂಗಳೂರು ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಹಾಮಾರಿಯಿಂದಾಗಿ ಜನರು ಆತಂಕದಿಂದ ಜೀವನ ದೂಡುವ ಪರಿಸ್ಥಿತಿ ಎದುರಾಗಿದೆ.

ಈ ಮಧ್ಯೆ ಮೈಸೂರು ಜಿಲ್ಲೆಯ ತಾಲ್ಲೂಕು ಭಾಗಗಳಿಗೂ ಕೊರೋನಾ ಹರಡಿದೆ.  ಟಿ. ನರಸೀಪುರ ತಾಲೂಕಿನಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು  ಕಂಡು ಬಂದಿದ್ದು ಈ ಹಿನ್ನೆಲೆ ಇಂದಿನಿಂದ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ2 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಟಿ.‌ ನರಸೀಪುರ ವರ್ತಕರ ಸಂಘ ನಿರ್ಧರಿಸಿದೆ.mysore-Corona-increase -Decision - trade – until- 2pm.

ಟಿ. ನರಸೀಪುರ ಪಟ್ಟಣದಲ್ಲಿ ಇಂದಿನಿಂದ ಬೆಳಿಗ್ಗೆ 6 ಗಂಟೆಗೆ ಆರಂಭವಾಗಿರುವ ವ್ಯಾಪಾರ ವಹಿವಾಟು ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಇರಲಿದೆ. 2 ಗಂಟೆ ನಂತರ ವ್ಯಾಪಾರ ವಹಿವಾಟು ಬಂದ್ ಆಗಲಿದೆ. ಅನಿರ್ಧಿಷ್ಟ ಅವಧಿಯವರೆಗೂ ಮಧ್ಯಾಹ್ನ 2 ಗಂಟೆಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲು ಟಿ.‌ ನರಸೀಪುರ ವರ್ತಕರ ಸಂಘ ತೀರ್ಮಾನಿಸಿದೆ.

Key words: mysore-Corona-increase -Decision – trade – until- 2pm.