ಮಾಸ್ಕ್ ಇಲ್ಲದೇ ಹೊರಗಡೆ ಬಂದ್ರೆ ಹುಷಾರ್..! ಸಾರ್ವಜನಿಕರಿಗೆ ಮೈಸೂರು ಜಿಲ್ಲಾಧಿಕಾರಿ ಶರತ್ ಖಡಕ್ ಎಚ್ಚರಿಕೆ…

ಮೈಸೂರು,ಸೆಪ್ಟಂಬರ್,24,2020(www.justkannada.in):   ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಈ ಹಿನ್ನೆಲೆ ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ವಿಧಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.mysore-corona-increase-dc-sharath-police-commissioner-meeting-mask-public

ಮೈಸೂರು ಜಿಲ್ಲಾದ್ಯಂತ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದು ಸೋಂಕು ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಶರತ್ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಸೋಂಕು ಪರೀಕ್ಷೆಯನ್ನು ಹೆಚ್ಚಳ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು. ಸಭೆಯಲ್ಲಿ ನೂತನ ಜಿ.ಪಂ ಸಿಇಓ ಭಾರತಿ, ನಗರ  ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ,ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.mysore-corona-increase-dc-sharath-police-commissioner-meeting-mask-public

ಸಭೆಯಲ್ಲಿ ಮಾತನಾಡಿದ ಮೈಸೂರು ಡಿಸಿ ಶರತ್, ಮಾಸ್ಕ್ ಇಲ್ಲದೇ ಎಲ್ಲೆಂದರಲ್ಲಿ ಒಡಾಡಿದ್ರೆ ಫೈನ್ ಹಾಕಲಾಗುತ್ತದೆ. ಮಾಸ್ಕ್ ಧರಿಸದೆ ತಿರುಗಾಡುವವರಿಗೆ ಕಟ್ಟುನಿಟ್ಟಾಗಿ 200 ರೂ. ದಂಡ ವಿಧಿಸಲು ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕೆಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಬೇಕಾ ಬಿಟ್ಟಿ ಮಾಸ್ಕ್ ಧರಿಸುವವರ ವಿರುದ್ಧ ಕ್ರಮ- ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ..

ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜನಜೀವನ ಆರ್ಥಿಕ ಪರಿಸ್ಥಿತಿ ಇತ್ಯಾದಿಗಳನ್ನು ಗಮನಿಸಿ ಅನ್ಲಾಕ್ ಮಾಡಿದ್ದವು. ಜನರು ಸೋಂಕಿಗೆ ತಾವೇ ಒಳಗಾಗುವವರೆಗೂ ಬುದ್ದಿ ಕಲಿಯಲ್ಲ ಅನ್ನಿಸುತ್ತಿದೆ. ಬೇಕಾ ಬಿಟ್ಟಿ ಮಾಸ್ಕ್ ಧರಿಸುತ್ತಾರೆ, ಕೇವಲ ಗಡ್ಡದ ಮೇಲೆ ಮಾಸ್ಕ್ ಧರಿಸುತ್ತಾರೆ  ಇನ್ನು ಮುಂದೆ ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಯಾವುದೇ ರೀತಿಯ ತೊಂದರೆಗಳಿದ್ದರೆ ಮುಕ್ತವಾಗಿ ಬಂದು ಟೆಸ್ಟ್ ಮಾಡಿಸಿ. ಇದರಿಂದ ಆರೋಗ್ಯದ ಜೊತೆ ರೋಗವನ್ನು ತಡೆಯಬಹುದು ಕೇವಲ ರೋಗ ಲಕ್ಷಣಗಳು ಇದ್ದರೆ ಮಾತ್ರ ಟೆಸ್ಟ್ ಮಾಡಿಸಬೇಕು ಎಂದು ಕೊಳ್ಳಬೇಡಿ ಎಂದು ಸಭೆಯಲ್ಲಿ ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಹೇಳಿದರು.mysore-corona-increase-dc-sharath-police-commissioner-meeting-mask-public

ಡಾಕ್ಟರ್ ಗಳ ಜೊತೆ ಅಸಭ್ಯವಾಗಿ ನಡೆದುಕೊಂಡರೆ ಎಫ್.ಐ.ಆರ್…

ಇನ್ನು ಸಾರ್ವಜನಿಕರು ಡಾಕ್ಟರ್ ಗಳ ಜೊತೆ ಯಾವುದೇ ರೀತಿ ಅಸಭ್ಯವಾಗಿ ನಡೆದುಕೊಂಡರೆ ಎಫ್.ಐ.ಆರ್ ಹಾಕುತ್ತೇವೆ. ಡಾಕ್ಟರ್ ಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ಸಾರ್ವಜನಿಕರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಟೆಸ್ಟ್ ಗಳ ಸಂಖ್ಯೆ ಹೆಚ್ವಿಸುವ ಸಲುವಾಗಿ ಟೀಮ್ ರೆಡಿ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿಗಳು ನಾಳೆಯಿಂದ ಮಾಡಿಸುತ್ತೇವೆ ಎಂದಿದ್ದಾರೆ ಎಂದು ಚಂದ್ರಗುಪ್ತ ಅವರು ತಿಳಿಸಿದರು.

ವ್ಯಾಪಾರ ಮಾಡುವ ಸ್ಥಳಗಲ್ಲಿ ಎಚ್ಚರ ವಹಿಸಿ. ಮಳಿಗೆ ವ್ಯಾಪಾರಿಗಳು, ತಿಂಡಿ ವ್ಯಾಪಾರಿಗಳು ಸಾರ್ವಜನಿಕರು ಶಿಸ್ತನ್ನು ಕಾಪಾಡಬೇಕು. ಸಾರ್ವಜನಿಕ ಮುತುವರ್ಜಿ ವಹಿಸಿ ತಾವೇ ತಮ್ಮ ಜವಾಬ್ದಾರಿ ಅರಿಯಬೇಕು ಎಂದು ಚಂದ್ರಗುಪ್ತ ಅವರು ಸಲಹೆ ನೀಡಿದರು.

Key words: mysore-corona-increase- DC-Sharath-police Commissioner-meeting- mask-public