ಮೈವಿವಿ ಘಟಿಕೋತ್ಸವ : ರಾಜ್ಯಪಾಲರ ಗೈರಿಗೆ ಇಲ್ಲಿದೆ ಕಾರಣ..

 

ಮೈಸೂರು, ಅ.19, 2020 : (www.justkannada.in news) : ಮೈಸೂರಿನಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿತರ ಸಂಖ್ಯೆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 100 ನೇ ಘಟಿಕೋತ್ಸವ ಸಮಾರಂಭದಲ್ಲಿ ಕುಲಾಧಿಪತಿಯಾದ ರಾಜ್ಯಪಾಲರೇ ಗೈರು ಹಾಜರಾಗಬೇಕಾಯಿತು.

ಘಟಿಕೋತ್ಸವ ಭಾಷಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ವಿಡಿಯೋ ಸಂದೇಶ ನೀಡುವುದು ಈ ಮೊದಲೇ ನಿಗಧಿ ಪಡಿಸಲಾಗಿತ್ತು. ಉಳಿದಂತೆ, ಸಮಾರಂಭ ನಡೆಯುವ ಕ್ರಾಫರ್ಡ್ ಭವನದಲ್ಲಿ ಕುಲಾಧಿಪತಿಯಾದ ರಾಜ್ಯಪಾಲ ವಜುಬಾಯಿ ವಾಲ, ಸಮಕುಲಾಧಿಪತಿ, ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್ ನಾರಾಯಣ್ ಹಾಗೂ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಭಾಗವಹಿಸುವುದು ನಿಶ್ಚಯವಾಗಿತ್ತು. ಇದಕ್ಕಾಗಿ ವಿವಿ ಪೂರ್ವ ತಯಾರಿಯನ್ನು ನಡೆಸಿತ್ತು. ಆದರೆ ಕಡೇ ಗಳಿಗೆಯಲ್ಲಿ ರಾಜ್ಯಪಾಲರಾದ ವಜುಬಾಯಿ ವಾಲ ಸಹ ವರ್ಚುವಲ್ ಮೂಲಕವೇ ಸಮಾರಂಭದಲ್ಲಿ ಸಂದೇಶ ನೀಡುವರು ಎಂಬ ಮಾಹಿತಿ ವಿವಿಗೆ ಲಭಿಸಿತು.

Mysore-convocation-governor-absent-due-to-increase-in-covid-cases

ಕಡೇ ಗಳಿಗೆಯಲ್ಲಿ ರಾಜ್ಯಪಾಲರ ಈ ನಿರ್ಧಾರಕ್ಕೆ ಮೈಸೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆಯೇ ಕಾರಣ ಎನ್ನಲಾಗಿದೆ. ಜತೆಗೆ ಮೈಸೂರು ದಸರ ಮಹೋತ್ಸವದ ಆರಂಭದ ಕಾರಣ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿರುವುದನ್ನು ಮನಗಂಡ, ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿ, ಮೈಸೂರಿಗೆ ಭೇಟಿ ನೀಡುವುದು ಅಷ್ಟು ಸುರಕ್ಷಿತವಲ್ಲ ಎಂಬ ಸಂದೇಶ ರವಾನಿಸಿದ್ದರು ಎನ್ನಲಾಗಿದೆ. ಈ ಸಲುವಾಗಿಯೇ ಕಡೆಗಳಿಗೆಯಲ್ಲಿ ವರ್ಚುವಲ್ ಆಗಿಯೇ ಘಟಿಕೋತ್ಸವದಲ್ಲಿ ಭಾಗವಹಿಸಲು ರಾಜ್ಯಪಾಲ ವಜುಬಾಯಿ ವಾಲಾ ತೀರ್ಮಾನಿಸಿದರು.

00000

key words : Mysore-convocation-governor-absent-due-to-increase-in-covid-cases