ನಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ ಸಾಮೂಹಿಕ ರಾಜೀನಾಮೆ: ಮೈಸೂರಿನಲ್ಲಿ ಗುತ್ತಿಗೆ ಸ್ಟಾಫ್ ನರ್ಸ್ ಗಳಿಂದ ಪ್ರತಿಭಟನೆ, ಎಚ್ಚರಿಕೆ…

Promotion

ಮೈಸೂರು,ಜು,8,2020(www.justkannada.in): ವೇತನ ಹೆಚ್ಚಳ , ಸೇವಾ ಭದ್ರತೆ ಹಾಗೂ ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಮೈಸೂರಿನ ಕೆ.ಆರ್‌ ಆಸ್ಪತ್ರೆ, ಚಲುವಾಂಬ ಆಸ್ಪತ್ರೆ ಗುತ್ತಿಗೆ ಸ್ಟಾಪ್ ನರ್ಸ್ ಗಳು ಕಪ್ಪು ಪಟ್ಟಿ ಧರಿಸಿ ಕೆಲಸ ಹಾಜರಾಗುವ ಮೂಲಕ ಪ್ರತಿಭಟನೆ ನಡೆಸಿದರು.jk-logo-justkannada-logo

ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಕೋವಿಡ್ ಕೆಲಸ ನಿರ್ವಹಿಸುತ್ತಿರುವ ಶಿಷ್ಯವೇತನ ಸ್ಟಾಪ್ ನರ್ಸ್ ಗಳಿಗೆ ಕೋವಿಡ್ ಗಿಂತ ಉದ್ಯೋಗ ಭದ್ರತೆಯ ಭೀತಿ ಹೆಚ್ಚಾಗಿದೆ. ಕೊರೊನಾ ಶಂಕಿತ ವಾರ್ಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಕ್ವಾರಂಟೈನ್ ಗೆ ಅವಕಾಶ ನೀಡುತ್ತಿಲ್ಲ. ನಮಗೆ ಯಾವುದೇ ಜೀವ ವಿಮೆ ಇಲ್ಲ ಎಂದು ಗುತ್ತಿಗೆ ಸ್ಟಾಪ್ ನರ್ಸ್ ಗಳು ಅಳಲು ತೋಡಿಕೊಂಡಿದ್ದಾರೆ.mysore-contract-staff-nurse-protest-kr-hospital

ಹೀಗಾಗಿ  ಕೋವಿಡ್ ಸಂದರ್ಭಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಷ್ಯವೇತನ ಸ್ಟಾಪ್ ನರ್ಸ್ ಗಳಿಗೆ ಜೀವ ವಿಮೆ ನೀಡಬೇಕು. ಕೂಡಲೇ ಶಿಷ್ಯವೇತನ ಸ್ಪಾಪ್ ನರ್ಸ್ ಗಳನ್ನು ಖಾಯಂಗೊಳಿಸಬೇಕು. ಖಾಯಂ ನರ್ಸ್ ಗಳಿಗಿರುವ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ಕೆ.ಆರ್‌ ಆಸ್ಪತ್ರೆ, ಚಲುವಾಂಬ ಆಸ್ಪತ್ರೆ ಗುತ್ತಿಗೆ ಸ್ಟಾಪ್ ನರ್ಸ್ ಗಳು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ನಾವು ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ.  ನಮಗೆ ಹತ್ತು ಸಾವಿರ ಸಂಬಳ ನೀಡುತ್ತಿದ್ದಾರೆ. ಈ ಸಂಬಂಳದಿಂದ ನಾವು ಬದುಕಲು ಆಗುತ್ತಿಲ್ಲ, ಆದ್ದರಿಂದ ನಮಗೆ 33 ಸಾವಿರ ಸಂಬಳ ನೀಡಬೇಕು. ಈಗ ಕೊರೊನಾ ಬೇರೆ ಇದೆ. ಈ ಸಮಯದಲ್ಲಿ ನಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ.  ನಮಗೆ ಕೊರೊನಾ ಬಂದರೆ ಯಾರು ಗತಿ…? ಅದಕ್ಕಾಗಿ  ನಾವು ಮೂರು ದಿನಗಳ ಕಾಲ ಗಡುವು ನೀಡುತ್ತೇವೆ, ನಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ ನಾವೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಸ್ಟಾಫ್ ನರ್ಸ್ ಗಳು ಎಚ್ಚರಿಕೆ ನೀಡಿದ್ದಾರೆ.

Key words: mysore- Contract -Staff Nurse-protest-kr Hospital