ಯುಪಿ ಸರ್ಕಾರ ವಜಾಗೊಳಿಸಲು ಆಗ್ರಹ: ಯುವತಿ ಮೇಲಿನ ಅತ್ಯಾಚಾರ ಕೇಸ್ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಧೃವನಾರಾಯಣ್

ಮೈಸೂರು,ಅಕ್ಟೋಬರ್,2,2020(www.justkannada.in): ಹತ್ರಾಸ್ ನಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ ಮತ್ತು ಸಾವಿನ ಪ್ರಕರಣ ದೇಶದ ತಲೆಬಾಗುವ ಹೇಯ ಕೃತ್ಯ ಇದು. ರಾಷ್ಟ್ರಪತಿಗಳು ಕೂಡಲೇ ಮಧ್ಯ ಪ್ರವೇಶಿಸಿ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮಾಜಿ ಸಂಸದ ಧೃವನಾರಾಯಣ್ ಆಗ್ರಹಿಸಿದರು.jk-logo-justkannada-logo

ಮೈಸೂರಿನ ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಧೃವನಾರಾಯಣ್,  ಆಸ್ಪತ್ರೆಗೆ ದಾಖಲಿಸಿದರೂ ಯುವತಿ ಸಾವನ್ನಪ್ಪಿರುವುದು ಘಟನೆಯ ಕ್ರೌರ್ಯಕ್ಕೆ ಸಾಕ್ಷಿ. ಆ ಬಾಲಕಿಯ ಶವಸಂಸ್ಕಾರವನ್ನು ಆ ಯುವತಿಯ ಪೋಷಕರನ್ನು ಹೊರತುಪಡಿಸಿ ಪೊಲೀಸರೇ ಮಾಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಉತ್ತರಪ್ರದೇಶದ ಇಂದು ಗೂಂಡಾರಾಜ್ಯವಾಗಿ ಮಾರ್ಪಟ್ಟಿದೆ. ಎನ್ಸಿಆರ್ಬಿ (NCRB) ಸಂಸ್ಥೆಯ ಪ್ರಕಾರ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ಉತ್ತರಪ್ರದೇಶ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಘಟನೆ ಖಂಡಿಸಿ ನರೇಂದ್ರ ಮೋದಿಯವರು ವಿಷಾದ ವ್ಯಕ್ತಪಡಿಸದೇ ಒಂದು ಹೇಳಿಕೆಯನ್ನು ಸಹ ನೀಡದಿರುವುದು ದುರದೃಷ್ಟಕರ. ಈ ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಉತ್ತರಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು  ಎಂದು ಆಗ್ರಹಿಸಿದರು.

ಹಾಗೆಯೇ  ಬಿಜಿಪಿ ಹಠಾವೋ ಭೇಟಿ ಬಚಾವೋ ಆಂದೋಲನ ಹಮ್ಮಿಕೊಳ್ಳಲಾಗಿದೆ. ಯುವತಿ ಅತ್ಯಾಚಾರ ಹಾಗೂ ಸಾವಿನ ಕುರಿತು ಸರ್ವೋಚ್ಚ ನ್ಯಾಯಾಲಯ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ದೃವನಾರಾಯಣ್ ಒತ್ತಾಯಿಸಿದರು.

ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ವಿಫಲ- ಶಾಸಕ ಯತಿಂದ್ರ ಸಿದ್ದರಾಮಯ್ಯ..

ಇದೇ ವೇಳೆ ಮಾತನಾಡಿದ ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಉತ್ತರಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಮಿತಿಮೀರಿವೆ. ಅಲ್ಲಿ ದಲಿತರು, ಮಹಿಳೆಯರು, ಹಿಂದುಳಿದವರ ಮೇಲೆ ರಾಜಾರೋಷವಾಗಿ ಹಲ್ಲೆಯಾಗುತ್ತಿವೆ. ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.mysore-congress-yathindra-siddaramaiah-former-mp-dhruvanarayan-demand-uttar-pradesh-government-dismissal

ಇನ್ನು ಅಲ್ಲಿನ ಪೊಲೀಸರು ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ. ಜೊತೆಗೆ ಯುವತಿಯ ಶವಸಂಸ್ಕಾರವನ್ನು ಪೊಲೀಸರೇ ಮಾಡಿದ್ದಾರೆ. ಸಾಕ್ಷಿಯನ್ನು ನಾಶಪಡಿಸಲು ಪೊಲೀಸರೇ ಸಹಕರಿಸಿದ್ದಾರೆ. ದೇಶದಲ್ಲೇ ಎಲ್ಲಕ್ಕಿಂತ ಹೆಚ್ಚಿನ ಅಪರಾಧ ಪ್ರಕರಣಗಳು ಉತ್ತರಪ್ರದೇಶದಲ್ಲಿ ನಡೆಯುತ್ತಿದೆ ಎಂದು ಯುಪಿ ಸರ್ಕಾರದ ವಿರುದ್ಧ ಶಾಸಕ ಯತೀಂದ್ರ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

Key words: mysore-Congress- Yathindra siddaramaiah- former MP-Dhruvanarayan- demand- Uttar Pradesh- government- dismissal