ಕೇಂದ್ರ ಸರ್ಕಾರ ‘ ಜುಮ್ಲಾ ಪ್ಯಾಕೇಜ್ ‘ ಘೋಷಣೆ ಮಾಡಿ, ಕರೋನಾ ನೆಪದಲ್ಲಿ ದೇಶವನ್ನು ಮಾರಟಕ್ಕಿಟ್ಟಿದೆ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶ.

 

ಮೈಸೂರು, ಮೇ 19, 2020 : (www.justkannada.in news ) ಪ್ರಧಾನಿ ನರೇಂದ್ರ ಮೋದಿ 20ಲಕ್ಷ ಕೋಟಿ ಘೋಷಣೆ ಮಾಡಿದ್ದಾರೆ. ಇದನ್ನ ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಕಂತುಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರದವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಹೇಳಿದಿಷ್ಟು….

ಕೇಂದ್ರ ಸರಕಾರದ ಪ್ಯಾಕೇಜ್ ನಲ್ಲಿ ಪಬ್ಲಿಕ್ ಸೆಕ್ಟರ್ ಯೂನಿಟ್ಸ್ ಗಳನ್ನು ಖಾಸಗೀಕರಣಗೊಳಿಸುತ್ತಿದ್ದಾರೆ. ಇಸ್ರೋ, ಮೈನಿಂಗ್ಸ್ , ಏರ್‌ಪೋರ್ಟ್ ಗಳನ್ನು ಖಾಸಗಿಕರಣಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಆ ಮೂಲಕ ಬಿಜೆಪಿಯವರು ಇಡೀ ದೇಶವನ್ನು ಮಾರಿಕೊಂಡು ಬರುತ್ತಿದ್ದಾರೆ. ಇದೇ ಅವರು ದೇಶಕ್ಕೆ ಕೊಡುತ್ತಿರುವ ಕೊಡುಗೆ.
ಕೇಂದ್ರ ಸರ್ಕಾರ ಜುಮ್ಲಾ ಪ್ಯಾಕೇಜ್ ಘೋಷಣೆ ಮಾಡಿ ಡ್ರಾಮಾ ಮಾಡ್ತಿದ್ದಾರೆ. ಆತ್ಮನಿರ್ಭರಭಾರತ್ ಅನ್ನೊ ಸಂಸ್ಕೃತ ಪದವನ್ನು ಬಳಸಿ ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಮುಂದೊಂದು ದಿನ ಸೇನೆಗಳನ್ನು ಖಾಸಗೀಕರಣ ಮಾಡಿಬಿಡುತ್ತಾರೆ. ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆಕ್ರೋಶ.

ಕರೋನಾ ಸಂಭ್ರಮ :

ದೇಶದಲ್ಲಿ ಕೇವಲ 700 ಜನರಿಗೆ ಕೊರೊನಾ ಪಾಸಿಟಿವ್ ಇದ್ದಾಗ ಕೇಂದ್ರ ಸರಕಾರ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿತು. ಈಗ ಸೋಂಕಿತರ ಸಂಖ್ಯೆ ಲಕ್ಷವನ್ನೂ ಮೀರಿದೆ. ಆದರೆ, ಈಗ ಲಾಕ್ ಡೌನ್ ಸಡಿಲ ಮಾಡಿ ಸಂಭ್ರಮಿಸುತ್ತಿದೆ ಸರಕಾರ ಎಂದು ಎಂ.ಲಕ್ಷ್ಮಣ್ ಕುಟುಕಿದರು.
ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರ ಕೂಡಾ ಕೊರೊನಾ ನಿಯಂತ್ರಣಕ್ಕಿಂತ ಆದಾಯ ಹೆಚ್ಚಿಸುವುದನ್ನು ನೋಡ್ತಿದ್ದಾರೆ.

 mysore-congress-kpcc-spoke.person-m.lakshman-press.meet
ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ಎಪಿಎಂಸಿ ಕಾಯ್ದೆ ಪ್ರತಿ ಸುಟ್ಟ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ವಕ್ತಾರರು.

ರೈತರಿಗೆ ಅನ್ಯಾಯ:

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಅನ್ಯಾಯ ಮಾಡಲು ಹೊರಟಿದೆ ಸರಕಾರ. ಎಪಿಎಂಸಿಗಳನ್ನು ಮುಚ್ಚುವ ಈ ಆ್ಯಕ್ಟ್ ರೈತರಿಗೆ ಮಾರಕ. ಸಚಿವ ಸಿ.ಟಿ ರವಿ ಹಾಗೂ ಬಿಜೆಪಿಯವರಿಗೆ ಓಪನ್ ಚಾಲೆಂಜ್ ಮಾಡುತ್ತೇನೆ. ಎಪಿಎಂಸಿ ಆ್ಯಕ್ಟ್ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಸವಾಲು.

ಪ್ರಜಾಪ್ರಭುತ್ವಕ್ಕೆ ದ್ರೋಹ :

ಬಿಜೆಪಿಯವರು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆಯುತ್ತಿದ್ದಾರೆ. ದೇಶದ ವ್ಯವಸ್ಥೆಗಳನ್ನು ಬದಲಾಯಿಸಿ ಬಡವರಿಗೆ ಅನ್ಯಾಯ ಮಾಡುತ್ತಿದ್ದೀರಿ. ವಿರೋಧ ಪಕ್ಷಗಳ ಪ್ರಶ್ನೆ ಉತ್ತರ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳು, ಉದ್ಯಮಿಗಳ ಜೇಬು ತುಂಬಿಸುವ ಕೆಲಸ ಮಾಡುತ್ತಿದೆ. ಈ ಬಗ್ಗೆ ವ್ಯವಸ್ಥಿತ ಹೋರಾಟ ಮಾಡಲಾಗುವುದು. ರೈತರನ್ನು ಒಗ್ಗೂಡಿಸಿ ಎಪಿಎಂಸಿ ಆ್ಯಕ್ಟ್ ವಿಚಾರಗಳನ್ನು ಮನವರಿಕೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ನ ಎಲ್ಲಾ ನಾಯಕರ ನೇತೃತ್ವದಲ್ಲಿ ಬೃಹತ್ ಆಂದೋಲನ ನಡೆಸಲಾಗುತ್ತದೆ ಎಂದು ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಹೇಳಿದರು.

key words : mysore-congress-kpcc-spoke.person-m.lakshman-press.meet