ಕೊರೋನಾ ಕೃಪೆಯಿಂದ ಬಡಕಲಾಗಿದ್ದ ದಿನಪತ್ರಿಕೆಗಳಿಗೆ ಡಿಕೆಶಿಯೇ ಟಾನಿಕ್..!

 

ಮೈಸೂರು, ಜು.02, 2020 : (www.justkannada.in news) : ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದೋ ಅಥವಾ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಗಾದಿಗೇರಿದ್ದೋ ಎಂಬುದೇ ಅನುಮಾನ.

ಇದಕ್ಕೆ ಕಾರಣವಿಷ್ಟೆ, ಡಿಕೆಶಿ ಪದಗ್ರಹಣ ಸಮಾರಂಭದ ಭರಪೂರ ಪ್ರಚಾರ. ಯಾವುದೇ ಕನ್ನಡ ಚಾನಲ್ ಹಾಕಿದ್ರು, ಯಾವುದೇ ಕನ್ನಡ ಪತ್ರಿಕೆ ಪುಟ ತಿರುಗಿಸಿದ್ರು ಅವೆಲ್ಲಾ ಕಂಪ್ಲೀಟ್ ಡಿಕೆಶಿಮಯ.ಕೇವಲ ಇಂದು ಮಾತ್ರವಲ್ಲ, ಕಳೆದ ನಾಲ್ಕೈದು ದಿನಗಳಿಂದ ಮಾಧ್ಯಮಗಳಲ್ಲಿ ಶಿವಕುಮಾರ್ ಅವರದ್ದೇ ಆರ್ಭಟ.

mysore-congress-dks-publicity-advertisement-mega-massive-ad

ಕರೋನ ಸಂಕಷ್ಟದ ಸಮಯದಲ್ಲಿ ಇಂಥ ಅಬ್ಬರದ ಪ್ರಚಾರ ಬೇಕಿತ್ತಾ..? ಎಂಬುದು ಪ್ರಶ್ನೆ. ಸಾಮಾಜಿಕ ಅಂತರ ಕಾರಣದಿಂದ ಬಹಿರಂಗ ಸಮಾರಂಭಕ್ಕೆ ಬ್ರೇಕ್ ಹಾಕಿದ್ದರು, ಪ್ರಚಾರದ ಅಹಸ್ಯ ಅಬ್ಬರಕ್ಕೆ ಮಾತ್ರ ಯಾವ ನಿಯಂತ್ರಣ ಕಂಡು ಬರದಿದ್ದು ವಿಪರ್ಯಾಸ. ಪತ್ರಿಕೆಗಳ ಪುಟಪುಟದಲ್ಲೂ ಡಿಕೆಶಿ ಅವರದ್ದೇ ಕಾರುಬಾರು.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ಹಾಲಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದಾಗಲೂ ಇಷ್ಟೊಂದು ಅಬ್ಬರವಿರಲಿಲ್ಲ. ಕೊರೊನಾ ಸಂದರ್ಭದಲ್ಲಿ ಜನರ ನೆರವಿಗೆ ನಿಲ್ಲಬೇಕಾದವರು, ಪದಗ್ರಹಣಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡಿದ್ದು ಎಷ್ಟು ಸರಿ.? ಎಂಬುದು ಪ್ರಶ್ನೆ.

mysore-congress-dks-publicity-advertisement-mega-massive-ad

ಕೆಪಿಸಿಸಿ ಅಧ್ಯಕ್ಷರ ಪ್ರತಿಜ್ಞಾ ದಿನ ಮತ್ತು ಡಿ.ಕೆ.ಶಿವಕುಮಾರ್ ಅವರ ಸಾಧನೆ ಕುರಿತಂತೆ ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪುಟಗಟ್ಟಲೆ ವಿಶೇಷ ಪುರವಣಿಗಳು ಹೊರ ಬಂದಿದೆ.

ಮೈಸೂರಿನ ನ್ಯಾಯವಾದಿ ಪಿ.ಜೆ.ರಾಘವೇಂದ್ರ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ‘ ಕೊರೋನಾ ಕೃಪೆಯಿಂದ ಬಡಕಲಾಗಿದ್ದ ದಿನಪತ್ರಿಕೆಗಳು ಇಂದು ಡಿಕೆಶಿ ಕೃಪೆಯಿಂದ ಮೈ ಕೈ ತುಂಬಿಕೊಂಡಿವೆ! ‘ ಎಂದು ಅಭಿಪ್ರಾಯಪಟ್ಟಿರುವುದು ಸರಿಯಾಗಿಯೇ ಇದೆ.

ooooo

key words : mysore-congress-dks-publicity-advertisement-mega-massive-ad