ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಮುಖ್ಯ ಅಧೀಕ್ಷಕ ಡಾ.ಉಪೇಂದ್ರ ಶಣೈ…

ಮೈಸೂರು,ನ,21,2019(www.justkannada.in): ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ಸ್ಥಿರವಾಗಿದೆ. ಇಂದು ಸಂಜೆ ವೇಳೆಗೆ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡುವ ಚಿಂತನೆ ಇದೆ ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಮುಖ್ಯ ಅಧೀಕ್ಷಕ ಡಾ.ಉಪೇಂದ್ರ ಶಣೈ ತಿಳಿಸಿದರು.

ಮಾಧ್ಯಮಗಳ ಜತೆ ಮಾತನಾಡಿ ಶಾಸಕ ತನ್ವೀರ್ ಸೇಠ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಮುಖ್ಯ ಅಧೀಕ್ಷಕ ಡಾ.ಉಪೇಂದ್ರ ಶಣೈ, ಕಿವಿ ತುಂಡರಿಸಿದ್ದರಿಂದ ಹೊಲಿಗೆ ಹಾಕಲಾಗಿತ್ತು. ಆದರೆ ಆ ಭಾಗ ಕಪ್ಪನೆಯ ಬಣ್ಣಕ್ಕೆ ತಿರುಗಿತ್ತು. ಪರಿಣಾಮ ಹೊಲಿದಿದ್ದ ಕಿವಿಯನ್ನ ತುಂಡರಿಸಿ ತೆಗೆದು ಹಾಕಲಾಗಿದೆ. ಅದನ್ನು ಅವರ ಕುಟುಂಬ ಸದಸ್ಯರ ಕೋರಿಕೆ ಮೇರೆಗೆ ಅವರಿಗೆ ನೀಡಿದ್ದೇವೆ. ಕಿವಿಯ ಭಾಗವನ್ನು ತೆಗೆದಿರುವುದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗುತ್ತದೆ. ಕತ್ತಿನ ನರಕ್ಕೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಸ್ವಲ್ಪ ಊತ ಕಾಣಿಸಿಕೊಂಡಿದೆ. ಅವರು ಮಾತನಾಡುವಾಗ, ನಗುವಾಗ ತುಟಿ ಸ್ವಲ್ಪ ಓರೆ ಆದಂತೆ ಕಂಡುಬರುತ್ತಿದೆ. ಮುಂದಿನ ಮೂರು ವಾರಗಳ ನಂತರ ಇದು ಸರಿಹೋಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಒಟ್ಟಾರೆಯಾಗಿ ಅವರ ದೇಹ ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ. ಇಂದು ಸಂಜೆ ವೇಳೆಗೆ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡುವ ಚಿಂತನೆ ಇದೆ. ಇನ್ನೂ ಒಂದುವಾರಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಡಾ.ಉಪೇಂದ್ರ ಶಣೈ ಹೇಳಿದರು.

ಶಾಸಕ ತನ್ವೀರ್‌ಸೇಠ್ ಅವರ ಧ್ವನಿಪೆಟ್ಟಿಗೆ ಸರಿಯಾಗಿ ಕಾರ್ಯನಿವರ್ಹಿಸುತ್ತಿಲ್ಲ- ಹೆಡ್ ಅಂಡ್ ನೆಕ್ ಸ್ಪೆಷಲಿಸ್ಟ್ ಡಾಕ್ಟರ್ ದಾತ್ತಾತ್ರಿ ಹೇಳಿಕೆ

ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಹೆಡ್ ಅಂಡ್ ನೆಕ್ ಸ್ಪೆಷಲಿಸ್ಟ್ ಡಾಕ್ಟರ್ ದಾತ್ತಾತ್ರಿ  ಮಾತನಾಡಿ, ಶಾಸಕ ತನ್ವೀರ್‌ಸೇಠ್ ಅವರ ಧ್ವನಿಪೆಟ್ಟಿಗೆ ಸಯಾಗಿ ಕಾರ್ಯನಿವರ್ಹಿಸುತ್ತಿಲ್ಲ. ತನ್ವೀರ್‌ಸೇಠ್ ಆಸ್ಪತ್ರೆಗೆ ಬಂದ ಆರಂಭದಲ್ಲಿ ಅವರ ದ್ವನಿ ಪೆಟ್ಟಿಗೆ ಸರಿಯಾಗಿ ಕೆಲಸ ಮಾಡುತ್ತಿತ್ತು. ನೆನ್ನೆ ಸಂಜೆಯಿಂದ ಈ ಸಮಸ್ಯೆ ಗೊತ್ತಾಗಿದೆ. ಆರಂಭದಲ್ಲಿ ಅವರ ಕತ್ತಿನ ಎಲ್ಲಾ ನರಗಳು ಸರಿಯಾಗಿದೆ ಎಂದುಕೊಂಡಿದ್ದೇವು. ಆದರೆ ಈ ಧ್ವನಿಗೆ ಸಂಬಂಧಿಸಿದ ನರ ವೀಕ್ ಇರುವಂತೆ ಕಾಣಿಸುತ್ತಿದೆ. ಅದು ತಾನಾಗಿಯೇ ಸರಿಯಾಗುವ ಸಾಧ್ಯತೆ ಇದೆ. ಇದಕ್ಕೆ ಕೆಲವು ದಿನಗಳ ಸಮಯ ತೆಗೆದುಕೊಳ್ಳಲಿದೆ. ಮುಖದಲ್ಲಿ ಪ್ರಮುಖವಾಗಿ 5 ನರಗಳು ಇರುತ್ತವೆ. ಕೆಳಭಾಗದಲ್ಲಿ ಪೆಟ್ಟು ಬಿದ್ದಿರುವುದರಿಂದ ಮಾತನಾಡುವಾಗ ತುಟ ಓರೆಯಾಗುತ್ತಿದೆ. ಅದು ಅದೇ ರೀತಿ ಇರುತ್ತದೆಯಾದರೂ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.

Key words: mysore- Colombia Asia Hospital- Dr Upendra Shanai – health status – MLA Tanveer Seth.