ಮೈಸೂರಿಗೆ ಸ್ವಚ್ಛ ನಗರಿ ಪಟ್ಟ ಬಂದ ಹಿನ್ನೆಲೆ: ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಬಾಗಿನ ವಿತರಣೆ

ಮೈಸೂರು,ಆಗಸ್ಟ್ ,22,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ವಚ್ಛನಗರಿ ಎಂಬ ಪಟ್ಟ ಬಂದ ಹಿನ್ನೆಲೆ ಇದಕ್ಕಾಗಿ ಶ್ರಮಿಸಿದ ಪೌರ ಕಾರ್ಮಿಕರಿಗೆ ಕರ್ನಾಟಕ ಪ್ರಜಾ ಪಾರ್ಟಿ ವತಿಯಿಂದ ಸನ್ಮಾನ ಮಾಡಲಾಯಿತು.jk-logo-justkannada-logo

ಕಳೆದ ಎರಡು ದಿನಗಳ ಹಿಂದಷ್ಟೇ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಡಿ ದೇಶದಲ್ಲಿನ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ ಮಾಡಿಲಾಗಿತ್ತು. 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ವಿಭಾಗದಲ್ಲಿ ಮೈಸೂರು ಮೊದಲ ಸ್ಥಾನ ಪಡೆದಿದೆ.mysore-clean-city-award-civil-worker-bagina-karnataka-prajaparty

ಗೌರಿ ಗಣೇಶ ಹಬ್ಬ ಹಿನ್ನೆಲೆ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುವ ಪೌರಕಾರ್ಮಿಕರಿಗೆ ಕರ್ನಾಟಕ ಪ್ರಜಾ ಪಾರ್ಟಿ ವತಿಯಿಂದ ಸನ್ಮಾನ ಮಾಡಲಾಯಿತು.  ನಗರದ ಬೋಗಾದಿಯ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಬಳಿ ಪೌರಕಾರ್ಮಿಕರಿಗೆ ಶಾಲು ಹೊದಿಸಿ, ಹಾರ ಹಾಕಿ, ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಕರ್ನಾಟಕ ಪ್ರಜಾ ಪಾರ್ಟಿ ಸದಸ್ಯರು ಮಹಿಳಾ ಪೌರಕಾರ್ಮಿಕರಿಗೆ ದಿನಸಿ ಕಿಟ್ ಹಾಗೂ ಬಾಗಿನ ವಿತರಣೆ ಮಾಡಿದರು. ಈ ವೇಳೆ ಪ್ರಜಾ ಪಾರ್ಟಿ ಅಧ್ಯಕ್ಷ ಶಿವಣ್ಣ ಉಪಸ್ಥಿತರಿದ್ದರು.

Key words: mysore- clean city-award-civil worker- Bagina –karnataka prajaparty