ದಿಲ್ಲಿ ಮಾದರಿಯಂತೆ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ 50 ಸಾವಿರ ಪರಿಹಾರ ನೀಡಿ….

ಮೈಸೂರು,ಮೇ,21,2021(www.justkannada.in): ರಾಷ್ಟ್ರ ರಾಜಧಾನಿ  ನವದೆಹಲಿಯಲ್ಲಿ  ಕೊರೊನಾದಿಂದ ಮೃತರಾದ ಕುಟುಂಬದವರಿಗೆ ಪರಿಹಾರ ಘೋಷಿಸಿರುವಂತೆ ರಾಜ್ಯದಲ್ಲೂ ಕರೋನಾದಿಂದ ಮೃತರಾದ ಕುಟುಂಬದವರಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ವಿ.ಪಿಯಾ ಮನವಿ ಮಾಡಿದ್ದಾರೆ.jk

ಈ  ಕುರಿತು ಮೈಸೂರು ಅಪರ ಜಿಲ್ಲಾಧಿಕಾರಿ ಮಂಜುನಾಥ್‌ ಮೂಲಕ ಸಿಎಂ ಬಿಎಸ್ ವೈಗೆ ಮನವಿ ಸಲ್ಲಿಸಿದ ಪಾಲಿಕೆ ಸದಸ್ಯ ಲೋಕೇಶ್ ವಿ.ಪಿಯಾ, ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್​ನಿಂದ ಮೃತರಾದ ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಘೋಷಣೆ ಮಾಡಿರುವಂತೆ, ಕರ್ನಾಟಕದಲ್ಲೂ ಪರಿಹಾರ ನೀಡಲು ಸರಕಾರ ಮುಂದಾಗಬೇಕು. ಜತೆಗೆ ಮೃತರ ಕುಟುಂಬಗಳಿಗೆ ಮಾಸಿಕ  2500 ರೂ ಮಾಸಾಶನ ನೀಡುವ ನಿಟ್ಟಿನಲ್ಲೂ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.mysore-city-corporation-member-lokesh-vpia-appeals-corona-died-families-compensation

ಪ್ರಸ್ತುತ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕರೋನಾ, ಜನತೆಯ ಜೀವನವನ್ನು ದುಸ್ತರಗೊಳಿಸಿದೆ. ಅದರಲ್ಲೂ ಬಡ ಹಾಗೂ ಶ್ರಮಿಕರು ಜೀವವೋ, ಜೀವನನೋ ಎಂಬ ತೊಳಲಾಟದಲ್ಲಿದ್ದಾರೆ. ಕರೋನಾ ನಿಯಂತ್ರಣಕ್ಕೆ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು ಇನ್ನು ನಿಯಂತ್ರಣ ಸಾಧ್ಯವಾಗಿಲ್ಲ. ಪರಿಣಾಮ ಲಾಕ್ ಡೌನ್ ನಂಥ ಕಠಿಣ ಕ್ರಮಗಳಿಗೆ ಮುಂದಾಗಿದೆ. ಇದರಿಂದ ಬಡ ಕೂಲಿಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ.  ಇದನ್ನೆಲ್ಲಾ ಸರಕಾರ ಪರಿಗಣಿಸಿ, ಕರೋನಾ ಸಂತ್ರಸ್ತರಿಗೆ ಸೂಕ್ತ ನೆರವು ನೀಡುವಂತೆ ಲೋಕೇಶ್ ವಿ. ಪಿಯಾ ಮನವಿ ಮಾಡಿದ್ದಾರೆ.

Key words: Mysore city corporation -Member -Lokesh VPia -appeals –corona- died- families -compensation