ಹುದ್ದೆಗೆ ರಾಜೀನಾಮೆ ನೀಡಿದ ಮರು ದಿನವೇ ರಜೆ ಕೋರಿ ಪತ್ರ ಬರೆದ ಪಾಲಿಕೆ ಆಯುಕ್ತೆ ಶಿಲ್ಪನಾಗ್ ..!

Promotion

ಮೈಸೂರು, ಜೂ.05, 2021 : (www.justkannada.in news ): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಧಾನಗೊಂಡು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ , ಇದೀಗ ರಜೆ ಮೇಲೆ ತೆರಳಿರುವ ಅಂಶ ಬೆಳಕಿಗೆ ಬಂದಿದೆ.

jk
ಜೂ. 4 ರಂದು ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಪಾಲಿಕೆ ಆಯುಕ್ತೆ ಶಿಲ್ಪನಾಗ್, ಜೂ. 5 ರಂದು ಒಂದು ದಿನದ ಸಾಂದರ್ಭಿಕ ರಜೆ ಮಂಜೂರು ಮಾಡಲು ಕೋರಿದ್ದಾರೆ. ಜತೆಗೆ ಜೂ.6 ರ ಸಾರ್ವತ್ರಿಕ ರಜೆ ಉಪಯೋಗಿಸಿಕೊಂಡು ಕೇಂದ್ರ ಸ್ಥಾನ ಬಿಡಲು ಅನುಮತಿ ನೀಡುವಂತೆ ಕೋರಿದ್ದಾರೆ. ಇದೇ ವೇಳೆ ರಜೆ ಅವಧಿಯಲ್ಲಿ ಪಾಲಿಕೆ ಹೆಚ್ಚುವರಿ ಆಯುಕ್ತರಾದ ಶಶಿಕುಮಾರ್ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜೂ. 3 ರಂದು ಮಧ್ಯಾಹ್ನ ನಗರ ಪಾಲಿಕೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಮಾಡಿದ್ದರು. ಜತೆಗೆ ಈ ಕಾರಣಕ್ಕೆ ಬೇಸತ್ತು ನಾನು ಐಎಎಸ್ ಹುದ್ದೆಗೆ ರಾಜೀನಾಮೆ ನೀಡುವೆ ಎಂದು ರಾಜೀನಾಮೆ ಪತ್ರವನ್ನು ಮಾಧ್ಯಮಗಳ ಮುಂದೆ ಓದಿದ್ದರು.
ಇದೀಗ, ರಾಜೀನಾಮೆ ನೀಡಿದ ಮರು ದಿನವೇ ಅಂದರೆ, ಜೂ.4 ರಂದೇ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ರಜೆ ಮಂಜೂರಿಗೆ ಮನವಿ ಮಾಡಿದ್ದಾರೆ.

key words : mysore-city-corporation-mcc-shilpa.nag-resignation-cs-karnataka-leave-letter