ತಾಯಿ ನನ್ನನ್ನೂ ಸೆಲೆಬ್ರಿಟಿ ಮಾಡು- ಚಾಮುಂಡಿ ಮೊರೆ ಹೋದ ಯುವಕ…

kannada t-shirts

ಮೈಸೂರು,ಜು,10,2020(www.justkannada.in):  ಇಂದು ಆಷಾಢ ಶುಕ್ರವಾರ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.

ಇಂದು ಬೆಳಿಗ್ಗೆ 7:45ರ ವೇಳೆಗೆ ಸಚಿವ ಕೆ.ಎಸ್ ಈಶ್ವರಪ್ಪ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪಕ್ಷದ ಕಾರ್ಯಕರ್ತರು, ನಾಯಕರು ಮಾಧ್ಯಮ ಮಿತ್ರರು ಸಾಮಾಜಿಕ ಅಂತರವನ್ನ ಕಾಪಾಡದೇ ನಿರ್ಲಕ್ಷ್ಯ ವಹಿಸಿದ್ದು ಇದನ್ನ  ಮೈಸೂರು ಹಿರಿಯ ನ್ಯಾಯವಾದಿ ಪಿ.ಜೆ.ರಾಘವೇಂದ್ರ ಖಂಡಿಸಿದ್ದಾರೆ.

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಹಿರಿಯ ನ್ಯಾಯವಾದಿ ಪಿ.ಜೆ ರಾಘವೇಂದ್ರ,  ಕೆ ಎಸ್ ಈಶ್ವರಪ್ಪನವರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು,ನಾಯಕರು ಹಾಗೂ ಮಾಧ್ಯಮದ ಮಿತ್ರರು ಮುತ್ತಿಕೊಂಡ ದೃಶ್ಯ.

ಮಂತ್ರಿಗಳು, ರಾಜಕೀಯ ಮುಖಂಡರು, ಕಾರ್ಯಕರ್ತರು ಹಾಗೂ ಮಾಧ್ಯಮದ ಮಿತ್ರರೇ ಸಾಮಾಜಿಕ ಅಂತರವನ್ನು ಕಾಪಾಡದೇ ಇದ್ದರೆ ಜನಸಾಮಾನ್ಯರಿಗೆ ಬುದ್ಧಿ ಹೇಳುವ ನೈತಿಕ ಹೊಣೆಯನ್ನು ಹೊರುವವರಾರು? ಎಂದು ಪಿ.ಜೆ ರಾಘವೇಂದ್ರ ಪ್ರಶ್ನಿಸಿದ್ದಾರೆ.

ತಾಯಿ ಚಾಮುಂಡೇಶ್ವರಿ ಮುಂದಿನ ಜನ್ಮದಲ್ಲಿ ನನ್ನನ್ನು ಸೆಲೆಬ್ರಿಟಿಯಾಗಿ ಮಾಡು..

ಚಾಮುಂಡಿಬೆಟ್ಟ ದೇಗುಲ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ರಾಜಕಾರಣಿಗಳು ನಟರು ಪೊಲೀಸ್ ಅಧಿಕಾರಿಗಳಿಗೆ ಈ ಯಾವುದೇ ನಿಯಮ ಅನ್ವಯವಾಗುವುದಿಲ್ಲವೇ ಎಂದು ಮೈಸೂರಿನ ಯುವಕ ವಿಕ್ರಮ್ ಅಯ್ಯಂಗರ್ ಎಂಬುವವರು ಪ್ರಶ್ನಿಸಿ  ತನ್ನನ್ನೂ ಮುಂದಿನ ಜನ್ಮದಲ್ಲಿ ಸೆಲಬ್ರಟಿಯಾಗಿ ಮಾಡು ಎಂದು ತಾಯಿ ಚಾಮುಂಡೇಶ್ವರಿ ಮೊರೊ ಹೋಗಿದ್ದಾರೆ.mysore-chamundi-hilss-minister-ks-eshwarappa-social-distance

ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಯುವಕ ವಿಕ್ರಮ್ ಅಯ್ಯಂಗರ್, ತಾಯಿ ಚಾಮುಂಡೇಶ್ವರಿ ಮುಂದಿನ ಜನ್ಮದಲ್ಲಿ ನನ್ನನ್ನು ಸೆಲೆಬ್ರಿಟಿಯಾಗಿ ಮಾಡು. ಕೂರೂನಾ ಹಿನ್ನೆಲೆಯಲ್ಲಿ ಈ ಬಾರಿ ಆಷಾಢ ಮಾಸದಲ್ಲಿ ಆದಿ ದೇವತೆ ಚಾಮುಂಡೇಶ್ವರಿ ದರ್ಶನ  ಯಾರಿಗೂ ದೇವರ ದರ್ಶನವಿಲ್ಲ ಎಂದು ಮುಜರಾಯಿ ಇಲಾಖೆ ಹೇಳಿದೆ. ಈಗ ರಾಜಕಾರಣಿಗಳಿಗೆ ಹಾಗೂ  ಚಲನಚಿತ್ರ ನಟರಿಗೆ ಹಾಗೂ ಬೆಂಬಲಿಗರಿಗೆ  ಮತ್ತು ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೆ ಮಾತ್ರ ದರ್ಶನ ಭಾಗ್ಯ.  ಒಬ್ಬರಿಗೆ ಒಂದು  ನ್ಯಾಯ ಇನ್ನೊಬ್ಬರಿಗೊಂದು ನ್ಯಾಯ. ಸಾಮಾಜಿಕ ಅಂತರ ಮಾಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೇವಲ ಸಾರ್ವಜನಿಕರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಿ ವಿಐಪಿಗಳಿಗೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಕೆ.ಎಸ್ ಈಶ್ವರಪ್ಪ ಭೇಟಿ ನೀಡಿದ್ದ ವೇಳೆ ಸಾಮಾಜಿಕ ಅಂತರವಿಲ್ಲದೇ ಪಕ್ಷದ ನಾಯಕರು ಬೆಂಬಲಿಗರು ಮುತ್ತಿಕೊಂಡಿದ್ದಕ್ಕೆ  ಯುವಕ ವಿಕ್ರಂ ಅಯ್ಯಂಗರ್ ವ್ಯಂಗ್ಯವಾಗಿ ಟೀಕಿಸಿದ್ದಾರೆ.

Key words: mysore- chamundi hilss-minister- ks eshwarappa-social distance

website developers in mysore